ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ: ಖಾಸಗಿ, ಪುನರಾವರ್ತಿತ ಅಭ್ಯರ್ಥಿಗಳ ಕೈಬಿಟ್ಟದ್ದೇಕೆ?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ
Published on

ಪ್ರಮುಖ ಮುಖ್ಯಾಂಶಗಳು

  • ಪರೀಕ್ಷೆ-1ರಲ್ಲಿಯೇ ಸಾರ್ವಕಾಲಿಕ ಶೇ.86.52 ಫಲಿತಾಂಶ ಪ್ರಕಟವಾಗಿತ್ತು. ಈಗ ಶೇ.45.65 ಎರಡೂ ಸೇರಿ ಒಟ್ಟು ಶೇ.92.25 ಫಲಿತಾಂಶವಾಗಿದೆ.
  • ಕಳೆದ ವರ್ಷ ಪರೀಕ್ಷೆ-1 ಮತ್ತು 2 ಸೇರಿ ಶೇ.85.19 ಲಿತಾಂಶ ಪ್ರಕಟವಾಗಿತ್ತು.
  • ಕೇವಲ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಲಿತಾಂಶಕ್ಕೆ ಮಾತ್ರ ಸರ್ಕಾರವು ಸೀಮಿತಗೊಂಡಿದೆ. ಒಟ್ಟಾರೆ, ಖಾಸಗಿ, ಪುನರಾವರ್ತಿತ ವಿದ್ಯಾರ್ಥಿಗಳು ಎಷ್ಟು ಫಲಿತಾಂಶವಾಗಲಿದೆ ಎಂಬ ಅಂಶವನ್ನು ಮಂಡಳಿ ಕೈಬಿಟ್ಟಿದೆ.
  • ಇನ್ನು ಫಲಿತಾಂಶ ಸುಧಾರಣೆಗೆ 49,512 ಮಂದಿ ನೋಂದಾಯಿಸಿಕೊಂಡಿದ್ದರು. ಆ ವಿದ್ಯಾರ್ಥಿಗಳ ಮಾಹಿತಿಯನ್ನು ಕೂಡ ನೀಡಿಲ್ಲ.
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, ಶೇ.45.65ರಷ್ಟು (ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಮಾತ್ರ) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ-1 ಮತ್ತು 2 ಸೇರಿ ಒಟ್ಟಾರೆ ಫಲಿತಾಂಶದಲ್ಲಿ ದಾಖಲೆ ಬರೆಯಲಾಗಿದೆ.
ಪರೀಕ್ಷೆ-1ರಲ್ಲಿಯೇ ಸಾರ್ವಕಾಲಿಕ ಶೇ.86.52 ಫಲಿತಾಂಶ ಪ್ರಕಟವಾಗಿತ್ತು. ಈಗ ಶೇ.45.65 ಎರಡೂ ಸೇರಿ ಒಟ್ಟು ಶೇ.92.25 ಫಲಿತಾಂಶವಾಗಿದೆ. ಕಳೆದ ವರ್ಷ ಪರೀಕ್ಷೆ-1 ಮತ್ತು 2 ಸೇರಿ ಶೇ.85.19 ಲಿತಾಂಶ ಪ್ರಕಟವಾಗಿತ್ತು.
ಏ.30ರಿಂದ ಮೇ 14ರವರೆಗೆ ನಡೆದ ಪರೀಕ್ಷೆಯಲ್ಲಿ 1,72,151 ಮಂದಿ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ಪ್ರಸಕ್ತ ಸಾಲಿನ 80,535 ವಿದ್ಯಾರ್ಥಿಗಳಲ್ಲಿ 36,764 (ಶೇ.45.65), 34,419 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 10,279 (ಶೇ.29.86) ಹಾಗೂ 5,456 ಖಾಸಗಿ ವಿದ್ಯಾರ್ಥಿಗಳಲ್ಲಿ 1,562 (ಶೇ.28.63) ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಪರೀಕ್ಷೆಗೆ ಹಾಜರಾಗಿದ್ದ 1,20,410 ಮಂದಿಯಲ್ಲಿ 48,605 ಮಂದಿ ಉತ್ತೀರ್ಣರಾಗಿದ್ದಾರೆ.
ಶೇ.46.74 ಬಾಲಕಿಯರು ಮತ್ತು 44.72 ಬಾಲಕರು, ಶೇ.44.89 ಗ್ರಾಮೀಣ ಪ್ರದೇಶ ಮತ್ತು ಶೇ.45.96 ನಗರ ಪ್ರದೇಶ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜುವಾರು ಫಲಿತಾಂಶದಲ್ಲಿ ಶೇ.42.32 ಸರ್ಕಾರಿ, ಶೇ.56.51 ಅನುದಾನಿತ ಮತ್ತು ಶೇ.49.59 ಖಾಸಗಿ ಕಾಲೇಜು, ಶೇ.34.06 ಬಿಬಿಎಂಪಿ ಕಾಲೇಜುಗಳು ಹಾಗೂ 54.32 ವಸತಿ ಶಾಲೆಗಳ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ.44.02 ಕನ್ನಡ ಮತ್ತು ಶೇ.47.26 ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.


ಗಣಿತದಲ್ಲಿ 315 ಮಂದಿಗೆ 100 ಅಂಕ:

ಪರೀಕ್ಷೆಯಲ್ಲಿ 315 ಮಂದಿ 100ಕ್ಕೆ 100 ಅಂಕ ಪಡೆದಿದ್ದಾರೆ. ಪರೀಕ್ಷೆ-1ರಲ್ಲಿ 10,982 ಮಂದಿ ಶೇ.100 ಅಂಕ ಪಡೆದಿದ್ದರು. ಕನ್ನಡದಲ್ಲಿ 60, ಲೆಕ್ಕಶಾಸದಲ್ಲಿ 38, ಭೌತಶಾಸ-61 ಮತ್ತು ರಸಾಯನಶಾಸದಲ್ಲಿ 75 ಮಂದಿ ಶೇ.100 ಅಂಕ ಪಡೆದಿದ್ದಾರೆ.

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು 25 ಕೊನೇ ದಿನ

ಉತ್ತರ ಪತ್ರಿಕೆಗಳ ಛಾಯಾಪ್ರತಿಗೆ ಅರ್ಜಿ ಸಲ್ಲಿಸಲು ಮೇ 23, ಛಾಯಾ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮೇ 24 ಮತ್ತು ಮರು ಮೌಲ್ಯಮಾಪನ, ಅಂಕಗಳ ಮರು ಎಣಿಕೆ ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನವಾಗಿದೆ. ಛಾಯಾ ಪ್ರತಿಗೆ ಪ್ರತಿ ವಿಷಯಕ್ಕೆ 530 ರೂ. ಮತ್ತು ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1,670 ರೂ.ಗಳನ್ನು ನಿಗದಿ ಮಾಡಲಾಗಿದೆ.


ಖಾಸಗಿ, ಪುನರಾವರ್ತಿತ ಅಭ್ಯರ್ಥಿಗಳ ಕೈಬಿಟ್ಟ ಸರ್ಕಾರ

ಕೇವಲ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಲಿತಾಂಶಕ್ಕೆ ಮಾತ್ರ ಸರ್ಕಾರವು ಸೀಮಿತಗೊಂಡಿದೆ. ಒಟ್ಟಾರೆ, ಖಾಸಗಿ, ಪುನರಾವರ್ತಿತ ವಿದ್ಯಾರ್ಥಿಗಳು ಎಷ್ಟು ಫಲಿತಾಂಶವಾಗಲಿದೆ ಎಂಬ ಅಂಶವನ್ನು ಮಂಡಳಿ ಕೈಬಿಟ್ಟಿದೆ. ಇನ್ನು ಫಲಿತಾಂಶ ಸುಧಾರಣೆಗೆ 49,512 ಮಂದಿ ನೋಂದಾಯಿಸಿಕೊಂಡಿದ್ದರು. ಆ ವಿದ್ಯಾರ್ಥಿಗಳ ಮಾಹಿತಿಯನ್ನು ಕೂಡ ನೀಡಿಲ್ಲ.
"

ಯಾವೊಬ್ಬ ಮಗುವು ಹಿಂದೆ ಉಳಿಯಬಾರದು ಎಂಬ ಸರ್ಕಾರದ ಆಶಯಕ್ಕೆ ಈ ಲಿತಾಂಶವು ಸ್ಪಷ್ಟ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಎಐ ಆಧಾರಿತ ಕಲಿಕೆ, ಶಿಕ್ಷಣ ಮೂಲಸೌಕರ್ಯಗಳ ಮತ್ತಷ್ಟು ಅಭಿವೃದ್ಧಿಯ ಮೂಲಕ ಶಿಕ್ಷಣ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬದ್ಧರಾಗಿದ್ದೇವೆ.

- ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net