ಹುಲಸೂರು: ಮುಚಳಂಬ ಗ್ರಾಮದ ರಾಮಲಿಂಗೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ರಚಿಸಲಾಯಿತು. ಚನ್ನಬಸಪ್ಪ ಫಾಳೆ (ಅಧ್ಯಕ್ಷ), ಸಂಗೀತಾ ಸಂಜುಕುಮಾರ (ಉಪಾಧ್ಯೆ), ಝರೆಪ್ಪ ಜಮಾದಾರ್, ಸಂಜುಕುಮಾರ ಪಾಂಚಾಳ, ರಾಮಲಿಂಗ ಮೇಕರ, ಹನುಮಂತ ಕುಂಬಾರ, ಪ್ರಿಯಾಂಕಾ, ಅನಿತಾ ಸುರೇಶ, ಹಾಗೂ ಸಂಗೀತಾ ಗುಂಡಪ್ಪ (ಸದಸ್ಯರು) ಆಯ್ಕೆಯಾದರು. ಶಾಲೆ ಮುಖ್ಯಶಿಕ್ಷಕ ರವೀಂದ್ರ ಬಿರಾದಾರ, ಗ್ರಾಮದ ಮುಖಂಡ ಸಿದ್ದಾರೂಢ ಪಾಟೀಲ ಇತರರಿದ್ದರು.