ಶಾಲಾ ಸಂಸ್ಥಾಪನಾ ದಿನಾಚರಣೆ ಮಾದರಿ

ಬೈಲಹೊಂಗಲ ಕಲ್ಪವೃ ಮಾದರಿ ಶಾಲೆಯಲ್ಲಿ ಕೆಎಲ್​ಇ ಸಂಸ್ಥೆಯ ಆಸ್ಪತ್ರೆ ಹಾಗೂ ರಕ್ತ ಭಂಡಾರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಜರುಗಿತು. ಡಾ.ಹನುಮೇಶ ದುಡ್ಯಾಳ, ರಾಜಶೇಖರ ಕೋತಂಬ್ರಿ, ಡಾ.ವಿಠ್ಠಲ ಮಾನೆ, ಡಾ.ಬಸವರಾಜ ಡಿ. ಇತರರಿದ್ದರು.
ಬೈಲಹೊಂಗಲ ಕಲ್ಪವೃ ಮಾದರಿ ಶಾಲೆಯಲ್ಲಿ ಕೆಎಲ್​ಇ ಸಂಸ್ಥೆಯ ಆಸ್ಪತ್ರೆ ಹಾಗೂ ರಕ್ತ ಭಂಡಾರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಜರುಗಿತು. ಡಾ.ಹನುಮೇಶ ದುಡ್ಯಾಳ, ರಾಜಶೇಖರ ಕೋತಂಬ್ರಿ, ಡಾ.ವಿಠ್ಠಲ ಮಾನೆ, ಡಾ.ಬಸವರಾಜ ಡಿ. ಇತರರಿದ್ದರು.
Published on
ಬೈಲಹೊಂಗಲ: ರಕ್ತದಾನ ಮಾಡುವುದರಿಂದ ಸಂಕಷ್ಟದಲ್ಲಿರುವ ಜನರಿಗೆ ಜೀವದಾನ ಮಾಡಿದ ಸಾರ್ಥಕ್ಯ ಲಭಿಸುತ್ತದೆ ಎಂದು ಪ್ರಾಚಾರ್ಯ ಡಾ.ಹನುಮೇಶ ದುಡ್ಯಾಳ ಹೇಳಿದರು.
ಎ.ವಿ.ಢಮ್ಮಣಗಿ ವಿಜನ್​ ೌಂಡೇಷನ್​ ಕಲ್ಪವೃ ಮಾದರಿ ಶಾಲೆಯ 18ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕೆಎಲ್​ಇ ಸಂಸ್ಥೆಯ ಆಸ್ಪತ್ರೆ ಹಾಗೂ ರಕ್ತ ಭಂಡಾರದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಕಾರಿಯಾಗುತ್ತದೆ. ಸಂಸ್ಥೆಯ ಅಧ್ಯೆ ಮಂಗಳಾ ಬಾಬು ಢಮ್ಮಣಗಿ ಅವರ ಮಾರ್ಗದರ್ಶನದಲ್ಲಿ ರಕ್ತದಾನ ಶಿಬಿರದ ಮೂಲಕ ಶಾಲಾ ಸಂಸ್ಥಾಪನಾ ದಿನಾಚರಣೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ, ಕೆಎಲ್​ಇ ರಕ್ತ ಬಂಢಾರದ ವೈದ್ಯಾಧಿಕಾರಿ ಡಾ.ವಿಠ್ಠಲ ಮಾನೆ, ಡಾ.ಬಸವರಾಜ ಡಿ., ಡಾ.ಸಮೃದ್ಧ, ಪಿಆರ್​ಒ ರಮೇಶ ಸೇರಿದಂತೆ 13 ತಂಡ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದರು. ಶಿಕರು, ಪಾಲಕರು ಹಾಗೂ ಸಿಬ್ಬಂದಿ ಸೇರಿದಂತೆ 52 ಜನ ರಕ್ತದಾನ ಮಾಡಿದರು. ಸಹಾಯಕ ಆಡಳಿತಾಧಿಕಾರಿ ಉಮೇಶ ಗಡತರನವರ, ಶಾಲಾ ಸಂಯೋಜಕಿಯರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net