ಬ್ಲೈಂಡ್ ಶಾಲೆ ಲೋಕಾರ್ಪಣೆ ಶೀಘ್ರ

 ಕಲಬುರಗಿ ಡಿಸಿ ಕಚೇರಿ ಆವರಣದಲ್ಲಿ ಸಚಿವ ಪ್ರಿಯಾಂಕ್​ ಖರ್ಗೆ ಅವರು ವಿಶೇಷ ಚೇತನರಿಗೆ ದ್ವಿಚಕ್ರ ವಾಹನ ಸೇರಿ ವಿವಿಧ ಸಾಧನ, ಸಲಹಕರಣೆ ಶುಕ್ರವಾರ ವಿತರಿಸಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್​, ಕನೀಜ್​ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರ್​, ಡಿಸಿ ಫೌಜಿಯಾ ತರನ್ನುಮ್​, ಜಿಪಂ ಸಿಇಒ ಭಂವರ್​ಸಿಂಗ್​ ಮೀನಾ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಮೇಯರ್​ ವರ್ಷಾ ಜಾನೆ, ಉಪ ಮೇಯರ್​ ತೃಪ್ತಿ ಅಲ್ಲದ್​ ಇತರರಿದ್ದರು.
ಕಲಬುರಗಿ ಡಿಸಿ ಕಚೇರಿ ಆವರಣದಲ್ಲಿ ಸಚಿವ ಪ್ರಿಯಾಂಕ್​ ಖರ್ಗೆ ಅವರು ವಿಶೇಷ ಚೇತನರಿಗೆ ದ್ವಿಚಕ್ರ ವಾಹನ ಸೇರಿ ವಿವಿಧ ಸಾಧನ, ಸಲಹಕರಣೆ ಶುಕ್ರವಾರ ವಿತರಿಸಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್​, ಕನೀಜ್​ ಫಾತಿಮಾ, ತಿಪ್ಪಣ್ಣಪ್ಪ ಕಮಕನೂರ್​, ಡಿಸಿ ಫೌಜಿಯಾ ತರನ್ನುಮ್​, ಜಿಪಂ ಸಿಇಒ ಭಂವರ್​ಸಿಂಗ್​ ಮೀನಾ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಮೇಯರ್​ ವರ್ಷಾ ಜಾನೆ, ಉಪ ಮೇಯರ್​ ತೃಪ್ತಿ ಅಲ್ಲದ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆ
  • ವಿಶೇಷಚೇತನರಿಗೆ ಸಾಧನ ಸಲಕರಣೆ ವಿತರಣೆ
ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಎದುರು ನಿರ್ಮಾಣದ ಹಂತದಲ್ಲಿರುವ ಅಂಧ ಮಕ್ಕಳ ಶಾಲೆ ಈ ವರ್ಷದ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್​ರಾಜ್​, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಹುಡ್ಕೋ ಸಂಸ್ಥೆ, ಅಲಿಮ್ಕೋ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 2025&26ನೇ ಸಾಲಿನ ಶೇ.5 ಅನುದಾನ, ಡಿ.ಎಂ.ಎಫ್​, ಸಿ.ಎಸ್​.ಆರ್​ ಹಾಗೂ ಇತರೆ ಅನುದಾನದಡಿ ವಿಶೇಷಚೇತನರಿಗೆ ಸುಮಾರು 2.63 ಕೋಟಿ ರೂ. ಮೊತ್ತದಲ್ಲಿ ತ್ರಿಚಕ್ರವಾಹನ, ಬುದ್ದಿ ಮಾಂದ್ಯ ಮಕ್ಕಳಿಗೆ ಟಿ.ಎಲ್​.ಎಂ ಕಿಟ್​, ವೀಲ್​ಚೇರ್​, ಬೆನ್ನು ನೋವಿನವರಿಗೆ ಮೆಡಿಕಲ್​ ಕಿಟ್​, ವಿಶೇಷ ಚೇತನರಿಗೆ ಬೆಲ್​ ಕಿಟ್​ ಟೈಪಿಂಗ್​, ಶ್ರವಣ ದೋಷ ಯಂತ್ರ ಹಾಗೂ ರೀಡಿಂಗ್​ ಯಂತ್ರ, ಟೇಬಲ್​, ಬ್ಯಾಟರಿ ಆಪರೇಟೇಡ್​ ಮೊಟೋರೈಸಡ್​ ಟೆ ಸೈಕಲ್​ ಹಾಗೂ ಇತರೆ ಸಾಧನ ಸಲಕರಣೆ ವಿತರಣೆ ಮಾಡಿ ಮಾತನಾಡಿದರು.
60 ವರ್ಷ ಹಳೆಯದಾದ ಅಂಧ ಬಾಲಕ ಶಾಲೆ ಕಟ್ಟಡಕ್ಕೆ ಡಾ.ಮಲ್ಲಿಕಾರ್ಜುನ ರ್ಖಗೆ ಅವರು ಒಮ್ಮೆ ಇದರ ಪುನರ್​ ನವೀಕರಣ ಮಾಡಿದ್ದು ಬಿಟ್ಟರೆ ಈವರೆಗೂ ಯಾರೂ ಆಕಡೆ ತಿರುಗಿಯೂ ನೋಡಿಲ್ಲ. ಇದೀಗ ನಮ್ಮ ಸರ್ಕಾರ ಅಂಧ ಮಕ್ಕಳ ಹಿತದೃಷ್ಠಿಯಿಂದ ಶಾಲೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ ಎಂದರು.
ನವೋದ್ಯಮಕ್ಕೆ ಸಹಾಯಧನ
ಹುಟ್ಟಿನಿಂದ ವಿಶೇಷಚೇತನರು ದೈಹಿಕ ಅಂಗವಿಕಲರಿದ್ದರೂ ಅವರಲ್ಲಿ ಬದುಕುವ ಮತ್ತು ಜೀವನದಲ್ಲಿ ಸಾಧಿಸುವ ಹುಮ್ಮಸ್ಸಿಗೆ ಕೊರತೆ ಇಲ್ಲ. ನವೋದ್ಯಮ ಸ್ಥಾಪಿಸಲು ಮುಂದೆ ಬರುವ ಕಂಪನಿಗಳ ಮುಖ್ಯಸ್ಥರನ್ನು ನೋಡಿದಾಗ ಕೆಲವರಲ್ಲಿ ಅಂಗವಿಕಲ ದೋಷಗಳಿರುವುದನ್ನು ಕಾಣಲಾಗಿದೆ. ಆದರೂ ಅವರು ಛಲ ಬಿಡದೆ ಜೀವನದಲ್ಲಿ ಮುನ್ನುಗ್ಗುತ್ತಿದ್ದಾರೆ. ಸರ್ಕಾರದ ಆರ್ಥಿಕ ಸಹಾಯ ಪಡೆದು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ನನ್ನ ಇಲಾಖೆಯಿಂದ 30&35 ಲ ರೂ.ವರೆಗೆ ನವೋದ್ಯಮಕ್ಕೆ ಸಹಾಯಧನ ನೀಡಲಾಗಿದೆ. ಇದರಿಂದ ವಿಕಲಚೇತನರೂ ಆರ್ಥಿಕವಾಗಿ ಸಬಲರಾಗುತ್ತಾರೆ. ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವ ಮಾತೃ ಹೃದಯ, ಸಹಾನುಭೂತಿ ಆಳುವ ಸರ್ಕಾರಕ್ಕೆ ಇರಬೇಕು, ಅದು ನಮ್ಮ ಸರ್ಕಾರಕ್ಕಿದೆ ಎಂದರು.
ವಿಶೇಷಚೇತನರಿಗೆ ಕೇವಲ ತ್ರಿಚಕ್ರ ವಾಹನ, ಸಾಧನ ಸಲಕರಣೆ ಕೊಟ್ಟರೆ ಸಾಲದು. ವಿಶೇಷಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಅವರೂ ಸಹ ಇತರರಂತೆ ಸ್ವಾಭಿಮಾನದ ಬದುಕು ಸಾಗಿಸಲು ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಅವರಿಗೆ ಕೌಶಲ ಶಿಣ, ತರಬೇತಿ ನೀಡುವ ಅಗತ್ಯವಿದೆ ಎಂದರು.
ಡಿಸೇಬಲ್​ ಡೇ ಕೇರ್​ ಆರಂಭ
ಡಿಸೇಬಲ್​ ಮಕ್ಕಳನ್ನು ನೋಡಿಕೊಳ್ಳಲೆಂದೆ ಕಲಬುರಗಿಯಲ್ಲಿ ಡಿಸೇಬಲ್​ ಡೇ ಕೇರ್​ ಸೆಂಟರ್​ ತೆರೆಯಲು ನಿರ್ಧರಿಸಿದ್ದು, ಈಗಾಗಲೆ ಭೂಮಿ ಗುರುತಿಸಲಾಗಿದೆ. ಕಟ್ಟಡದ ನೀಲಿ ನೆ ಸಿದ್ದಪಡಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಇದು ತಲೆ ಎತ್ತಲಿದೆ. ಇದರಿಂದ ಪೋಷಕರು ವಿಶೇಷಚೇತನ ಮಕ್ಕಳನ್ನು ಇಲ್ಲಿ ಬಿಟ್ಟು ತಮ್ಮ ದೈನಂದಿನ ಕೆಸಲಕ್ಕೆ ಹೋಗಬಹುದು. ಮಕ್ಕಳನ್ನು ನೋಡಲು ಇಲ್ಲಿ ಕೇರ್​ ಟೇರ್ಸ್​ ಇರಲಿದ್ದಾರೆ. ನಮ್ಮದು ಮಾತೃ ಹೃದಯದ ಸರ್ಕಾರ, ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ಸಚಿವ ಪ್ರಿಯಾಂಕ್​ ರ್ಖಗೆ ಒತ್ತಿ ಹೇಳಿದರು.
ಅಧ್ಯತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ತಮ್ಮ ದಣ ಮತೇತ್ರದ ವ್ಯಾಪ್ತಿಯಲ್ಲಿ ಕಳೆದ ವರ್ಷ 50 ತ್ರಿಚಕ್ರ ವಾಹನ ವಿತರಿಸಲಾಗಿತ್ತು. ಇಂದಿಲ್ಲಿ 50 ವಾಹನಗಳನ್ನು ಡಿ.ಎಂ.ಎಫ್​ ಅನುದಾಡಿ ವಿತರಿಸಲಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಜತೆ ಜತೆಗೆ ಸರ್ವ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸುತ್ತಿದೆ. ಶಿಣ, ಆರೋಗ್ಯ, ಕ್ರೀಡಗೆ ಹೆಚ್ಚಿನ ಒತ್ತು ನೀಡಿದೆ. ಇಂದಿಲ್ಲಿ ವಸತಿ ನಿಲಯ ಉದ್ಘಾಟನೆ ಮಾಡಲಾಗುತ್ತಿದೆ. ೇತ್ರದ ಹಡಗಿಲ ಹಾರುತಿ ಗ್ರಾಮದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ನಗರಿ ನಿರ್ಮಿಸಲಾಗುತ್ತಿದೆ. ಕಲಬುರಗಿ ನಗರದಲ್ಲಿ ಮಹಿಳೆಯರಿಗೆ 30 ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ಸ್ಟೇಡಿಯಂ ಸ್ಥಾಪಿಸಲಾಗುತ್ತಿದೆ ಎಂದರು.
ಶಾಸಕಿ ಕನೀಜ್​ ಫಾತಿಮಾ, ವಿಧಾನ ಪರಿಷತ್​ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ಮಹಾನಗರ ಪಾಲಿಕೆ ಮೇಯರ್​ ವರ್ಷಾ ರಾಜೀವ ಜಾನೆ, ಉಪ ಮೇಯರ್​ ತೃಪ್ತಿ ಅಲ್ಲದ, ಜೆಸ್ಕಾಂ ಅಧ್ಯ ಪ್ರವಿಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ ಮಜಹರ್​ ಆಲಂ ಖಾನ್​, ಡಿಸಿ ಬಿ.ಫೌಜಿಯಾ ತರನ್ನುಮ್​, ಜಿಪಂ ಸಿಇಒ ಭಂವರ್​ಸಿಂಗ್​ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ವಿಕಲಚೇತನರ ಕಲ್ಯಾಣಾಧಿಕಾರಿ ಸಾಧಿಕ ಹುಸೇನ್​ ಇತರರಿದ್ದರು..

ಐ.ಟಿ-ಬಿ.ಟಿ. ಇಲಾಖೆಯು ಕೌಶಲಾಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ವಿಶೇಷಚೇತನರಿಗೆ ಕೌಶಲ ಶಿಣ ನೀಡಲು ಸೆಂಟರ್​ ಆಫ್​ ಎಕ್ಸಿಲೆನ್ಸ್​ ಆಫ್​ ಅಸಿಸ್ಟಿವ್​ ಟೆಕ್ನಾಲಜಿ ಸ್ಥಾಪಿಸಲು ಮುಂದಾಗಿದ್ದು, ಕಲಬುರಗಿಯಲ್ಲಿ ಮೊದಲ ಪ್ರಾಯೋಗಿಕವಾಗಿ ಆರಂಭಿಲಾಗುವುದು, ಇದಕ್ಕೆ ವಿಕಲಚೇತನ ಇಲಾಖೆ ಮುಂದಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net