

ಕೆಂಭಾವಿ: ಇತ್ತೀಚೆಗೆ ನಡೆದ ಸಿಇಟಿ ಪರೀೆಯಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಜನಿವಾರ ತೆಗೆಸಿ ಪರೀೆಗೆ ಅವಕಾಶ ಕಲ್ಪಿಸಿದ ಶಾಲಾ ಆಡಳಿತ ಮಂಡಳಿ ಕ್ರಮ ಅತ್ಯಂತ ಖಂಡನೀಯ ಎಂದು ಬ್ರಾಹ್ಮಣ ಸಂದ ಜಿಲ್ಲಾ ಗೌರವಾಧ್ಯಕ್ಷ ವಾಮನರಾವ ದೇಶಪಾಂಡೆ ಹೇಳಿದರು. ಈ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಧರ್ಮ ಯಾವುದೇ ಜಾತಿಗಳ ಧಾರ್ಮಿಖ ನಂಬಿಕೆಗಳಿಗೆ ಧಕ್ಕೆ ತರುವ ಚಟುವಟಿಕೆ ಮಡಬಾರದು ಎಂದು ನ್ಯಾಯಾಲಯದ ಆದೇಶ ಇದ್ದರೂ ಕಾಲೇಜಿನ ಆಡಳಿತ ಮಂಡಳಿ ದುರುದ್ದೇಶಪೂರ್ವಕದಿಂದ ವಿದ್ಯಾರ್ಥಿಯ ಜನಿವಾರ ತಗೆಸಿದೆ. ಇದು ಇಡೀ ವಿಪ್ರ ಸಮುದಾಯಕ್ಕೆ ತೀವ್ರ ಆಘಾತ ಉಂಟು ಮಾಡಿದ್ದು, ಕೂಡಲೇ ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಶಾಲಾ ಮಾನ್ಯತೆ ರದ್ದು ಮಾಡಿ ನೊಂದ ವಿದ್ಯಾರ್ಥಿಗೆ ಸಿಇಟಿ ಪರೀೆಯಲ್ಲಿ ಅಂಕ ನೀಡಿ ಮುಂದಿನ ವ್ಯಾಸಾಂಗಕ್ಕೆ ಅನುವು ಮಾಡಿ ಕೊಡಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.