ಎಸ್​ಬಿಆರ್​ ವಿದ್ಯಾರ್ಥಿ ರಾಷ್ಟ್ರಕ್ಕೆ 190ನೇ ​ರ‍್ಯಾಂಕ್​

ನೀಟ್​ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದ ರ‍್ಯಾಂಕ್​ ಪಡೆದ ಕಲಬುರಗಿಯ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪೂರ್ವ ಕಾಲೇಜಿನ (ಎಸ್​ಬಿಆರ್​) ವಿದ್ಯಾರ್ಥಿಗಳಾದ ಚನ್ನಬಸವ, ಸಿಮ್ರನ್​ ಬಾನು, ರೋಹಿತ್​, ನವೀನ್​, ಸಂಪತಕುಮಾರ ಅವರನ್ನು ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಸನ್ಮಾನಿಸಿ ಪ್ರೋತ್ಸಾಹಿಸಿದರು.
ನೀಟ್​ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದ ರ‍್ಯಾಂಕ್​ ಪಡೆದ ಕಲಬುರಗಿಯ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪೂರ್ವ ಕಾಲೇಜಿನ (ಎಸ್​ಬಿಆರ್​) ವಿದ್ಯಾರ್ಥಿಗಳಾದ ಚನ್ನಬಸವ, ಸಿಮ್ರನ್​ ಬಾನು, ರೋಹಿತ್​, ನವೀನ್​, ಸಂಪತಕುಮಾರ ಅವರನ್ನು ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಸನ್ಮಾನಿಸಿ ಪ್ರೋತ್ಸಾಹಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಚನ್ನಬಸವ ಕೊರಳ್ಳಿಗೆ 685 ಅಂಕ
  • ಕಾಲೇಜಿನ 950ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್​ಗೆ ಅರ್ಹ
 ಕಲಬುರಗಿ: ನೀಟ್​ ಪರೀಕ್ಷೆಯಲ್ಲಿ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪೂರ್ವ ವಿಜ್ಞಾನ ಕಾಲೇಜು (ಎಸ್​ಬಿಆರ್​) ಐತಿಹಾಸಿಕ ಫಲಿತಾಂಶದೊಂದಿಗೆ ಗಮನ ಸೆಳೆದಿದ್ದು, ವಿದ್ಯಾರ್ಥಿ ಚನ್ನಬಸವ ಕೊರಳ್ಳಿ 720ಕ್ಕೆ 685 ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ 190ನೇ ​ರ‍್ಯಾಂಕ್ ನೊಂದಿಗೆ ಸಾಧನೆ ಮೆರೆದಿದ್ದಾನೆ.
ವಿದ್ಯಾರ್ಥಿನಿ ಸಿಮ್ರನ್​ ಬಾನು ಜುನೈದಿ 657 ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ 1001ನೇ ರ‍್ಯಾಂಕ್, ರೋಹಿತ್​ ಆರ್​. 642 ಅಂಕದೊಂದಿಗೆ 57ನೇ ರ‍್ಯಾಂಕ್ (ಕೆಟಗರಿ) ಪಡೆದು ಕಾಲೇಜಿನ ಕೀರ್ತಿ ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.
150 ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕ ಪಡೆದಿದ್ದು, 950ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್​(ಎಂಬಿಬಿಎಸ್​) ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಪ್ರಾಚಾರ್ಯ ಎನ್​.ಎಸ್​. ದೇವರಕಲ್​ ತಿಳಿಸಿದ್ದಾರೆ.
600ಕ್ಕೂ ಹೆಚ್ಚು ಅಂಕ -14, 575&599 ಅಂಕ -11, 550-574 ಅಂಕ -22, 525-549 ಅಂಕ -48, 500-524 ಅಂಕ -57, 475-499 ಅಂಕ -76, 450-474 ಅಂಕ -58 ವಿದ್ಯಾರ್ಥಿಗಳು ಪಡೆದಿದ್ದು, ಈ ಲಿತಾಂಶ ಕಾಲೇಜಿನ ಶೈಕ್ಷಣಿಕ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಪ್ರಸಕ್ತ ವರ್ಷ ಅತಿ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕಿಯ ಕೋರ್ಸ್​ ಪ್ರವೇಶಕ್ಕೆ ಅರ್ಹತೆ ಪಡೆದಿದ್ದು, ಅನುಭವಿ ಅಧ್ಯಾಪಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ದೊಡ್ಡಪ್ಪ ಅಪ್ಪ ಶಿಷ್ಯವೇತನ ಪಡೆದವರು ಟಾಪರ್​
ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಹೆಸರಿನ ಶಿಷ್ಯವೇತನ ಪಡೆದು ಉಚಿತ ಅಧ್ಯಯನ ಮಾಡಿದ ಎಸ್​ಬಿಆರ್​ ಕಾಲೇಜಿನ ವಿದ್ಯಾರ್ಥಿಗಳು ನೀಟ್​ ಪರೀಕ್ಷೆಯಲ್ಲಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಮಿಂಚಿದ್ದು ಹೆಮ್ಮೆಯ ವಿಷಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಖುಷಿ ವ್ಯಕ್ತಪಡಿಸಿದರು. ಶರಣಬಸವೇಶ್ವರ ದಾಸೋಹ ಮನೆಯಲ್ಲಿ ನೀಟ್​ ಟಾಪರ್​ಗಳನ್ನು ಸನ್ಮಾನಿಸಿ ಉಜ್ವಲ ಭವಿಷ್ಯಕ್ಕೆ ಶುಭಾಶೀರ್ವಾದ ಮಾಡಿದ ಅವರು, ತಪ್ಪಸ್ಸಿನಂತೆ ಎಲ್ಲರ ಪ್ರಯತ್ನದಿಂದ ಈ ಸಾಧನೆ ಸಾಧ್ಯವಾಗಿದೆ. ಶರಣರ ಪರಿಸರದಲ್ಲಿ ಅಧ್ಯಯನ ಮಾಡಲು ಭಕ್ತಿಯಿಂದ ಬಂದ ವಿದ್ಯಾರ್ಥಿಗಳು ಉತ್ತಮ ಲಿತಾಂಶ ತಂದಿದ್ದಾರೆ ಎಂದರು. ಕಾಲೇಜಿನ ಟಾಪ್​ ಐವರು ವಿದ್ಯಾರ್ಥಿಗಳಾದ ಚನ್ನಬಸವ ಕೊರಳ್ಳಿ, ಸಿಮ್ರನ್​ ಬಾನು, ನವೀನ್​ ಮಿಟೇಕ್​, ಸಂಪತಕುಮಾರ, ಅರ್ನವ್​ ನಾಗಲಿಕರ್​ ಅವರನ್ನು ಸನ್ಮಾನಿಸಿದರು. ಡಾ.ಅಲ್ಲಮಪ್ರಭು ದೇಶಮುಖ, ಕಾಲೇಜಿನ ಮೇಲ್ವಿಚಾರಕ ಶ್ರೀಶೈಲ ಹೊಗಾಡೆ ಇತರರಿದ್ದರು
ಸರ್ವರ ಸಹಕಾರದ ಫಲ
ಎಸ್​ಬಿಆರ್​ ಕಾಲೇಜಿನ ಅತ್ಯುತ್ತಮ ಶಿಕ್ಷಣ, ಗುರುಗಳ ಮಾರ್ಗದರ್ಶನದಿಂದಾಗಿ ರಾಷ್ಟ್ರಮಟ್ಟದಲ್ಲಿ ​ರ‍್ಯಾಂಕ್​ ​ ಪಡೆಯಲು ಸಾಧ್ಯವಾಗಿದೆ ಎಂದು ಆಳಂದ ತಾಲೂಕಿನ ಪಡಸಾವಳಗಿ ಗ್ರಾಮದ ವಿದ್ಯಾರ್ಥಿ ಚನ್ನಬಸವ ಕೊರಳ್ಳಿ ಹರ್ಷ ವ್ಯಕ್ತಪಡಿಸಿದ್ದಾನೆ. ಚನ್ನಬಸವ ತಂದೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾಗಿದ್ದು, ತಾಯಿ ಗೃಹಿಣಿ. ಎಸ್ಸೆಸ್ಸೆಲ್ಸಿಯನ್ನು ತಾಡತೆಗನೂರದ ಜವಾಹರ ನವೋದಯದಲ್ಲಿ ಮುಗಿಸಿದ್ದು, ಪಿಯುಸಿ ಮುಖ್ಯ ಪರೀಕ್ಷೆಯಲ್ಲಿ 582 ಅಂಕ ಪಡೆದಿದ್ದರು. ಪಾಂಡಿಚೇರಿಯ ಜಿಪ್​ಮಾರ್​ ಸಂಸ್ಥೆಯಲ್ಲಿ ಎಂಬಿಬಿಎಸ್​ ಮಾಡುವ ಗುರಿ ಇದೆ. ನೀಟ್​ಗಾಗಿಯೇ ಕಾಲೇಜಿನಲ್ಲಿ ಪ್ರತ್ಯೇಕ ಒತ್ತು ಕೊಟ್ಟು ಓದಿಸಿದ್ದರಿಂದ ಭಾರಿ ಪ್ರಮಾಣದಲ್ಲಿ ​ರ‍್ಯಾಂಕ್​ ಬಂದಿದೆ. ನೀಟ್​ ಮೊದಲನೇ ಪತ್ರಿಕೆ ಸರಳವಾಗಿತ್ತು. ಮರು ಪರೀಕ್ಷೆ ಪತ್ರಿಕೆ ಕಠಿಣ ಇತ್ತು. ಆದರೂ ಬೆಸ್ಟ್​ ರಿಸಲ್ಟ್​ ಬಂದಿದೆ ಎಂದು ಹೇಳಿದ್ದಾನೆ.
ಯುಪಿಎಸ್​ಸಿ ಮಾಡೋ ಕನಸು
ಚಿತ್ತಾಪುರ ಪಟ್ಟಣದ ಸಿಮ್ರನ್​ ಬಾನು ಜುನೈದಿ ನೀಟ್​ ಪರೀಕ್ಷೆಯಲ್ಲಿ 657 ಅಂಕ ಪಡೆದಿದ್ದು, ರಾಷ್ಟ್ರ ಮಟ್ಟದಲ್ಲಿ 1001 ರ‍್ಯಾಂಕ್​ ​ಪಡೆದು ಸಾಧನೆ ಮಾಡಿದ್ದಾಳೆ. ತಂದೆ ಎಂಡಿ ಜವುರುದ್ದೀನ್​ ಗುತ್ತಿಗೆದಾರ, ತಾಯಿ ಗೃಹಿಣಿ. ಕಾಲೇಜಿನಲ್ಲಿ ಎಲ್ಲ ರೀತಿಯ ಬೋಧನೆ ಇದ್ದು, ವಸತಿನಿಲಯದಲ್ಲೂ ನಿರಂತರ 2-3 ಗಂಟೆ ಅಧ್ಯಯನ ಮಾಡುತ್ತಿದ್ದೆ. ಚಿಕ್ಕವಳಿದ್ದಾಗಲೇ ವೈದ್ಯೆ ಆಗುವ ಕನಸಿತ್ತು. ಇದೀಗ ಈಡೇರಿದೆ. ಮುಂದೆ ಯುಪಿಎಸ್ಸಿ ಮಾಡುವ ಗುರಿಯೂ ಇದೆ. ಉಪನ್ಯಾಸಕರ ಪರಿಣಾಮಕಾರಿ ಬೋಧನೆ, ಮಾರ್ಗದರ್ಶನ, ಕುಟುಂಬಸ್ಥರ ಸಹಕಾರದಿಂದ ಅತ್ಯುತ್ತಮ ರ‍್ಯಾಂಕ್​ ಬಂದಿದ್ದು ಖುಷಿ ತಂದಿದೆ ಎನ್ನುತ್ತಾಳೆ ಸಿಮ್ರನ್​ ಬಾನು ಜುನೈದಿ.
"

ಎಸ್​ಬಿಆರ್​ ವಿದ್ಯಾರ್ಥಿಗಳು ನೀಟ್​ನಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಂಸ್ಥೆ ಕೀರ್ತಿ ಹೆಚ್ಚಿಸಿದ್ದಾರೆ. ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು ಉನ್ನತ ಅಂಕ ಗಳಿಸಿದ್ದು, ಪಾಲಕರ ಸಹಕಾರ ಹಾಗೂ ಉಪನ್ಯಾಸಕರ ಸಮರ್ಪಿತ ಮಾರ್ಗದರ್ಶನದ ಫಲವಾಗಿದೆ. ಶರಣಬಸವೇಶ್ವರರ ಕೃಪೆಯಿಂದ ಗುಣಮಟ್ಟ, ಶಿಸ್ತು ಮತ್ತು ಸೇವಾ ಮನೋಭಾವದಿಂದ ಆದರ್ಶ ವೈದ್ಯರಾಗಿ ಸೇವೆ ಸಲ್ಲಿಸಲಿ.

— > -ಮಾತೋಶ್ರಿ ಡಾ.ದಾಕ್ಷಾಯಿಣಿ ಅಪ್ಪ ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿ
"


ಎಸ್​ಬಿಆರ್​ ಕಾಲೇಜು ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆ ಸಾಬೀತುಪಡಿಸಿದೆ. ನೀಟ್​ ಫಲಿತಾಂಶ ಎಸ್​ಬಿಆರ್​ನ ವೈಜ್ಞಾನಿಕ, ಸಮರ್ಥ, ವಿದ್ಯಾರ್ಥಿಕೇಂದ್ರೀತ ತರಬೇತಿ ಯಶಸ್ಸಿಗೆ ಸಾಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ಎಂಬಿಬಿಎಸ್​ ಪ್ರವೇಶಿಸುತ್ತಿರುವುದು ಸಂಸ್ಥೆ ಹೆಮ್ಮೆ.

— -> ಬಸವರಾಜ ದೇಶಮುಖ ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ



ಚನ್ನಬಸವ 685
ಸಿಮ್ರನ್​ 657
ನವೀನ 650
ಸಂಪತ 650
ಅರ್ನವ 645
ರೋಹಿತ 642
ಅರ್ಪಿತ 630
ಸಂದೇಶ 630
ಸಾಹೇಬಗೌಡ 622
ರಾಕೇಶ 613
ಅಥರ್ವ 609
ಶಶಿಕುಮಾರ 606
ಪ್ರೀತಮ 605
ಪಿ.ಮನೋಜ 604
ಸೃಜನ 598
ಪ್ರಜ್ವಲ 594
ಬಸವರಾಜೇಶ್ವರಿ 592
ಮಲ್ಲಿಕಾರ್ಜುನ 589
ಮಯೂರ 588
ಮಾದೇಶ 585
ಸೌಮ್ಯಶ್ರೀ 580
ರಾಹುಲ್​ 577
ವೈಷ್ಣವಿ 576
ಸುನೀಲ 576
ಅರವಿಂದ 575
ಶಶಾಂಕ 572
ಸಹನಾ 571
ಆದಿತ್ಯಾ 570
ಚಿನ್ಮಯ 569
ಪ್ರವಿಣ 569
ದೀಪಕ 568
ಭಾಗ್ಯಶ್ರೀ 565
ಹರ್ಷಾ 565
ಸಿದ್ದಿಕ್​ 565
ಅಭಿನವಸಿಂಗ್​ 564
ರಾಕೇಶ 563
ಪ್ರಣಂ 562
ಅನುಷ್ಕಾ 561
ದಕ್ಷ 559
ಪ್ರಜ್ವಲ 559
ಅಭಿಷೇಕ 558
ಶಾಂತಾ 557
ಆಸ್ಮಾ 557
ತಸ್ಮಿಯಾ 554
ಅಹ್ಮದ್​ 554
ಭೂಮಿಕಾ 553
ಆಂಜನೇಯ 551
ಸಾನಿಯಾ 548
ವೈಷ್ಣವಿ 545
ಆಕಾಶ 544
ಪ್ರದಿಪ 544
ಸ್ನೇಹಾ 543
ವೀರಪ್ರಸಾದ 543
ಮನು 543
ಮುದಾಸ್ಸಿರ 543
ಪವನ 541
ಶಿವರಾಜ 541
ಆಶೀಷ 540
ವಿಜಯಕುಮಾರ 540


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net