ಮುಂದಿನ ಭವಿಷ್ಯಕ್ಕಾಗಿ ಭೂಮಿ ಕಾಪಾಡಿ

ಯಾದಗಿರಿ ನಗರದ ಆರ್​.ವಿ.ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷೆ ಕಮಲಾ ಎನ್​.ದೇವರಕಲ್​, ಶಿಕಿ ಪೂರ್ಣಿಮಾ ಗುಡುಗುಂಟಿ, ರೇಣುಕಾ ನೀಲಂಗಿ, ಧನುಶ್ರೀ, ಗಂಗೊತ್ರಿ, ಶಿಕ್ಷಕ ಶಂಕರ ಎಂ.ಜೇವರ್ಗಿ ಇತರರಿದ್ದರು.
ಯಾದಗಿರಿ ನಗರದ ಆರ್​.ವಿ.ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷೆ ಕಮಲಾ ಎನ್​.ದೇವರಕಲ್​, ಶಿಕಿ ಪೂರ್ಣಿಮಾ ಗುಡುಗುಂಟಿ, ರೇಣುಕಾ ನೀಲಂಗಿ, ಧನುಶ್ರೀ, ಗಂಗೊತ್ರಿ, ಶಿಕ್ಷಕ ಶಂಕರ ಎಂ.ಜೇವರ್ಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಮಲಾ ಎನ್​.ದೇವರಕಲ್​ ಸಲಹೆ
  • ಆರ್​.ವಿ.ಸಂಸ್ಥೆಯಲ್ಲಿ ಪರಿಸರ ದಿನಾಚರಣೆ
ಯಾದಗಿರಿ: ಹೆಚ್ಚು, ಹೆಚ್ಚು ಮರ&ಗಿಡ ನೆಡುವುದರಿಂದ ಭೂಮಿಯ ವಾತಾವರಣವನ್ನು ತಂಪಾಗಿಸಬಹುದು. ಮುಂದಿನ ನಮ್ಮ ಭವಿಷ್ಯ ಶುದ್ಧವಾಗಿರಬೇಕಾದರೆ, ಭೂಮಿಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಆರ್​.ವಿ.ವಿದ್ಯಾಸಂಸ್ಥೆ ಅಧ್ಯೆ ಕಮಲಾ ಎನ್​.ದೇವರಕಲ್​ ಹೇಳಿದರು.
ಇಲ್ಲಿನ ಆರ್​.ವಿ.ವಿದ್ಯಾಸಂಸ್ಥೆ ಮತ್ತು ದಿ.ವೀರಭದ್ರಪ್ಪ ದೇವರಕಲ್​ ಡಿ&ಫಾರ್ಮಸಿ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯಲ್ಲಿ ವಿವಿಧ ತಳಿಯ ಸಸಿಗಳನ್ನು ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪರಿಸರ ನಾಶವಾದರೆ ಇಡೀ ಜಗತ್ತಿಗೆ ಉಳಿಗಾಲವಿಲ್ಲ. ಕಾರಣ ಗಿಡ, ಮರಗಳ ಷೋಷಣೆ ಅಗತ್ಯವಿದೆ. ಇದರಿಂದ ಮಳೆ ಹೆಚ್ಚಾಗಿ ಉತ್ತಮ ಪರಿಸರ ಉಂಟಾಗಿ ಜೀವರಾಶಿಗಳು ಉಳಿಯುತ್ತವೆ ಎಂದು ಅವರು ಬಹು ಮಾರ್ಮಿಕವಾಗಿ ಹೇಳಿದರು. ಶಿಕಿ ಪೂರ್ಣಿಮಾ ಗುಡುಗುಂಟಿ ಅವರು ಪರಿಸರದ ೂಷವಾಕ್ಯವನ್ನು ಓದಿದರು. ಶ್ರಾವ್ಯ, ರೀತಿಕಾ, ಸುಜ್ಞಾನ್ಯ, ವಿದ್ಯಾ ಅವರುಗಳು ಪರಿಸರದ ಗೀತೆಯನ್ನು ಹಾಡಿದರು.ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು ಸೇರಿದಂತೆಯೇ ಇತರರಿದ್ದರು. ರೇಣುಕಾ ನೀಲಂಗಿ ಸ್ವಾಗತಿಸಿದರು, ಧನುಶ್ರೀ, ಗಂಗೋತ್ರಿ ನಿರೂಪಿಸಿದರು. ಶಿಕ್ಷಕ ಶಂಕರ ಎಂ.ಜೇವರ್ಗಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net