ಪೈಪ್​ಲೈನ್​ ದುರಸ್ತಿ ಮಾಡದಿದ್ರೆ ಸತ್ಯಾಗ್ರಹ

ಪೈಪ್​ಲೈನ್​ ಕಟ್​ ಮಾಡಿರುವದನ್ನು ಖಂಡಿಸಿ ಆಳಂದ ತಾಲೂಕಿನ ಹಡಲಗಿಯಿಂದ ಅರ್ಜುಣಗಿವರೆಗೆ ಕಲಬುರಗಿ&ಬೀದರ್​ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟದ ಅಧ್ಯಕ್ಷ ಆರ್​.ಕೆ.ಪಾಟೀಲ್​ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
ಪೈಪ್​ಲೈನ್​ ಕಟ್​ ಮಾಡಿರುವದನ್ನು ಖಂಡಿಸಿ ಆಳಂದ ತಾಲೂಕಿನ ಹಡಲಗಿಯಿಂದ ಅರ್ಜುಣಗಿವರೆಗೆ ಕಲಬುರಗಿ&ಬೀದರ್​ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟದ ಅಧ್ಯಕ್ಷ ಆರ್​.ಕೆ.ಪಾಟೀಲ್​ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಆರ್​.ಕೆ.ಪಾಟೀಲ್​ ಎಚ್ಚರಿಕೆ
  • ಹಡಲಗಿಯಿಂದ ಅರ್ಜುಣಗಿವರೆಗೂ ಪಾದಯಾತ್ರೆ
ಆಳಂದ: ಬೋರಿ ನದಿಯಿಂದ ಅಮರ್ಜಾ ಜಲಾಶಯಲ್ಲೆ ನೀರು ತುಂಬುವ ಮಹಾತ್ವಾಕಾಂಕ್ಷಿ ಯೋಜನೆಯ ಪೈಪ್​ಲೈನ್​ ಒಡೆದು ಹಾಳು ಮಾಡಿರುವು ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಅಧಿಕಾರಿ ಕೃತ್ಯ ಖಂಡಿಸಿ ಕಲಬುರಗಿ-ಬೀದರ್​ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್​.ಕೆ.ಪಾಟೀಲ್​ ನೇತೃತ್ವದಲ್ಲಿ ರೈತರು ಹಡಲಗಿಯಿಂದ ಅರ್ಜುಣಗಿವರೆಗೆ ಗುರುವಾರ ಪಾದಯಾತ್ರೆ ನಡೆಸಿದರು.
ಮಹತ್ವದ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಜಲಾಶಯಕ್ಕೆ ನೀರು ಬರಬೇಕಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಪೈಪ್​ಲೈನ್​ ಕಟ್​ ಮಾಡಿದ್ದಾರೆ. ಪ್ರಾಧಿಕಾರದ ಅಧಿಕಾರಿಗಳಿಗೆ ಪೈಪ್​ಲೈನ್​ ದುರಸ್ತಿ ಮಾಡುವುದಕ್ಕೆ ಶಾಸಕ ಬಿ.ಆರ್​.ಪಾಟೀಲ್​ ಅವರು ನಾಲ್ಕು ಪತ್ರ ಬರೆದಿದ್ದಾರೆ. ಈವರೆಗೂ ಸ್ಪಂದಿಸಿಲ್ಲ. ಹೀಗಾಗಿ ಹೋರಾಟಕ್ಕೆ ಇಳಿದಿದ್ದೇವೆ. ಈ ಯೋಜನೆಯಿಂದ ಅಫಜಲಪುರ ತಾಲೂಕಿನ 10 ಕೆರೆಗಳು ತುಂಬಲಾಗುತ್ತಿದೆ. ಇದೀಗ ಸಮಸ್ಯೆ ಉಂಟಾಗಿದ್ದು, ಕೂಡಲೇ ದುರಸ್ತಿಗೆ ಮುಂದಾಗಬೇಕು. ಇಲ್ಲದಿದ್ದರೆ ಸತ್ಯಾಗ್ರಹ ನಡೆಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ಅಶೋಕ ಸವಳೇಶ್ವರ, ಗುರುಶಾಂತಪ್ಪ ಪಾಟೀಲ್​, ಶರಣಬಸಪ್ಪ ಭೂಸನೂರ, ಈರಣ್ಣ ಝಳಕಿ, ರೇವಣಸಿದ್ದಪ್ಪ ನಾಗೂರ, ಆದಿನಾಥ ಹೀರಾ, ಸಿದ್ದರಾಮ ಪ್ಯಾಟಿ, ಬಾಬು ಗೊಬ್ಬುರ, ವೀರೇಂದ್ರ ಶೇಗಜಿ, ಶ್ರೀಮಂತ ವಾಗ್ದರ್ಗಿ, ಬಸವರಾಜ ಆಳಂದ, ಈರಣ್ಣ ಹತ್ತರಕಿ, ಲಿಂಗರಾಜ ಪಾಟೀಲ್​, ಆಲೂ ಗೌಡ ಪಾಟೀಲ್​, ಶಿವಕಿರಣ ಪಾಟೀಲ್​ ಇತರರಿದ್ದರು.
ಪಿಎಸ್​ಐ ಇಂದೂಮತಿ ಅವರ ನೇತೃತ್ವದಲ್ಲಿ ಪೊಲೀಸ್​ ಬಂದೋಬಸ್ತ್​ ಕಲ್ಪಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net