ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸಿದ್ರಾಮ ಕಾಮಣ್ಣ, ಪಿಕೆಪಿಎಸ್ ಸಹಕಾರ ಸಂಘದ ಅಧ್ಯಕ್ಷ ಭಾಗವತ ಜಾನಬಾ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪ್ರವಿಣ ಕಾಡಾದಿ, ಕೃಷ್ಣಾ ಗೋಣಿ, ಶ್ರೀದೇವಿ ನೀಡೋದೆ, ರೇಖಾ ಕಾಡಾದಿ, ಅಮರ ಬಡದಾಳೆ, ಸೂರ್ಯಕಾಂತ ಬಿರಾದಾರ, ಷಣ್ಮುಖ ಪಾಟೀಲ, ಬಸವರಾಜ ರಗಟ್ಟೆ, ದಿಲೀಪಕುಮಾರ ದೇಸಾಯಿ, ಸತೀಶ ಹಿರೇಮಠ ಇತರರಿದ್ದರು. ತೊಂಡಾರೆ ನಿರೂಪಣೆ ಮಾಡಿ ವಂದಿಸಿದರು. ಭಜನೆ ಸ್ಪರ್ಧೆಯಲ್ಲಿ ಹುಲಸೂರು ಸೇರಿ ವಿವಿಧ ಗ್ರಾಮಗಳಿಂದ ಒಟ್ಟು 15 ಭಜನಾ ತಂಡಗಳು ಭಾಗವಹಿಸಿದ್ದವು. ಸಾಯಗಾಂವದ ಬಸವೇಶ್ವರ ಭಜನಾ ತಂಡ ಪ್ರಥಮ ಸ್ಥಾನ ಪಡೆದು 3,333 ರೂ.ನಗದು, ತೋಗಲೂರನ ಮಹಾದೇವ ಭಜನಾ ತಂಡ ದ್ವೀತಿಯ ಸ್ಥಾನ 2,333 ನಗದು ರೂ. ಹಾಗೂ ಹಾಲಹಳ್ಳಿಯ ಬಸವೇಶ್ವರ ಭಜನಾ ತಂಡ ತೃತೀಯ ಸ್ಥಾನ ಪಡದು 1,333 ನಗದು ರೂ. ಹಾಗೂ ಪಟ್ಟಣದ ಶಿವಾನಂದೇಶ್ವರ ಭಜನಾ ತಂಡ 4ನೇ ಸ್ಥಾನ ಪಡೆದು 1,000 ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಿ ಸನ್ಮಾನಿಸಲಾಯಿತು.