ತಾಲೂಕಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 70, ಸರ್ಕಾರಿ ಪ್ರೌಢಶಾಲೆ 37, ಅನುದಾನಸಹಿತ ಪ್ರೌಢಶಾಲೆ 11 ಹಾಗೂ 19 ಅನುದಾನರಹಿತ ಪ್ರಾಥಮಿಕ ಶಾಲೆಗಳಿವೆ. ತಂತ್ರಾಂಶ ದೋಷದಿಂದಾಗಿ 1&7 ಹಾಗೂ 8&9ನೇ ತರಗತಿಗಳ ವರ್ಗಾವಣೆ ಪ್ರಮಾಣಪತ್ರ ಸಿಗದೆ ಪರದಾಡುವಂತಾಗಿದೆ. ಮುರಾರ್ಜಿ ದೇಸಾಯಿ, ಡಾ.ಬಿ.ಆರ್. ಅಂಬೇಡ್ಕರ್, ಇಂದಿರಾ ಗಾಂಧಿ ಸೇರಿ ವಿವಿಧ ವಸತಿಶಾಲೆಗಳಿಗೆ ಆಯ್ಕೆಯಾದ ಮಕ್ಕಳು ಪ್ರವೇಶ ಪಡೆಯಲು ಟಿಸಿ ದಾಖಲೆ ಕಡ್ಡಾಯ. ಆದರೆ ಎಸ್ಎಟಿಎಸ್ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ದಾಖಲಿಸುವ ವೇಳೆ ತಾಂತ್ರಿಕ ದೋಷ, ಸರ್ವರ್ ಸೇರಿ ಹಲವು ಸಮಸ್ಯೆಗಳು ಎದುರಾಗುತ್ತಿವೆ.