Satish, Sugars, Work, Praiseworthy, Moodalagi:

ಸತೀಶ ಶುಗರ್ಸ್​ ಕಾರ್ಖಾನೆಯಿಂದ ಮೂಡಲಗಿ ಶೈಣಿಕ ವಲಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಆಸನಗಳು ಹಾಗೂ ಗ್ರೀನ್​ ಬೋರ್ಡ್​ ವಿತರಿಸಲಾಯಿತು. ಬಿಇಒ ಪಿ.ಬಿ.ಹಿರೇಮಠ, ಪ್ರದಿಪಕುಮಾರ ಇಂಡಿ  ಇತರರಿದ್ದರು.
ಸತೀಶ ಶುಗರ್ಸ್​ ಕಾರ್ಖಾನೆಯಿಂದ ಮೂಡಲಗಿ ಶೈಣಿಕ ವಲಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಆಸನಗಳು ಹಾಗೂ ಗ್ರೀನ್​ ಬೋರ್ಡ್​ ವಿತರಿಸಲಾಯಿತು. ಬಿಇಒ ಪಿ.ಬಿ.ಹಿರೇಮಠ, ಪ್ರದಿಪಕುಮಾರ ಇಂಡಿ ಇತರರಿದ್ದರು.
Published on
ಮೂಡಲಗಿ: ಗ್ರಾಮೀಣ ಭಾಗದ ರೈತರು, ಯುವಜನತೆ ಮತ್ತು ಬಡ ಮಕ್ಕಳ ಕಲ್ಯಾಣಕ್ಕಾಗಿ ಸತೀಶ ಶುಗರ್ಸ್​ ಕಾರ್ಖಾನೆ ಸಮಾಜಮುಖಿ ಕಾರ್ಯ ಮಾಡುವಲ್ಲಿ ನಿರತವಾಗಿದೆ ಎಂದು ಸತೀಶ ಸಮೂಹ ಸಂಸ್ಥೆ ಚೇರ್ಮನ್​ ಪ್ರದಿಪಕುಮಾರ ಇಂಡಿ ಹೇಳಿದರು.
ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್​ ಕಾರ್ಖಾನೆಯಿಂದ ಮೂಡಲಗಿ ಶೈಣಿಕ ವಲಯದ ಸುಮಾರು 31 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 400 ಆಸನ ಹಾಗೂ 34 ಗ್ರೀನ್​ ಬೋರ್ಡ್​ ಮೂಡಲಗಿ ಬಿಇಒ ಪಿ.ಬಿ.ಹಿರೇಮಠ ಅವರ ಮೂಲಕ ಶಿಣ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿ, ಸತೀಶ ಶುಗರ್ಸ್​ ಸಮೂಹ ಸಂಸ್ಥೆಯು ಸರ್ಕಾರಿ ಶಾಲೆಗಳಿಗೆ ಶಿಣದ ಅವಶ್ಯ ಪರಿಕರ ಹಾಗೂ ಕಲಿಕಾ ಉಪಕರಣ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಶಿಣಕ್ಕೆ ಉತ್ತೇಜನ ನೀಡುತ್ತಿದೆ. ಸಮಾಜದ ಆಸ್ತಿಯನ್ನಾಗಿ ರೂಪಿಸುವಲ್ಲಿ ಶಿಕರ ಪಾತ್ರ ಮಹತ್ವದಾಗಿದೆ ಎಂದರು.
ೇತ್ರ ಶಿಣಾ-ಧಿಕಾರಿ ಪಿ.ಬಿ.ಹಿರೇಮಠ ಮಾತನಾಡಿ, ಸತೀಶ ಶುಗರ್ಸ್​ ಸಂಸ್ಥೆ ಹಲವಾರು ವರ್ಷಗಳಿಂದ ಶೈಣಿಕ ವಲಯಕ್ಕೆ ನೀಡುತ್ತಿರುವ ಸಹಾಯ&ಸಹಕಾರವನ್ನು ಶಿಣ ಇಲಾಖೆ ಎಂದಿಗೂ ಸ್ಮರಿಸುತ್ತದೆ ಎಂದರು.
ಶಿಣ ಇಲಾಖೆಯ ಪ್ರದಿಪಕುಮಾರ ಇಂಡಿ ಮತ್ತು ಮೌನೇಶ ಕಂಬಾರ ಸನ್ಮಾನಿಸಲಾಯಿತು. ೇತ್ರ ಶಿಣಾಧಿಕಾರಿ ಪ್ರಕಾಶ ಹಿರೇಮಠ, ಪಿ.ಡಿ.ಹಿರೇಮಠ, ವೀರು ತಳವಾರ, ದಿಲೀಪ ಪವಾರ, ಗಿರೀಶ ಸೋನವಾಲ್ಕರ, ಸದಾಶಿವ ಮಾಲಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net