ಬೆಳಗಾವಿ: ರಾಜ್ಯದಲ್ಲಿ ರಸ್ತೆ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿ ದೀರ್ಕಾಲ ಬಾಕಿ ಉಳಿದಿದ್ದ 48 ರಸ್ತೆ ಯೋಜನೆಗಳಲ್ಲಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ 39 ಯೋಜನೆ ಯಶಸ್ವಿಯಾಗಿ ಇತ್ಯರ್ಥಪಡಿಸಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮೆಚ್ಚುಗೆ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವರನ್ನು ಸತೀಶ ಜಾರಕಿಹೊಳಿ
ಭೇಟಿ ಮಾಡಿ, ರಾಜ್ಯದಲ್ಲಿ ರಸ್ತೆ ಮತ್ತು ಮೂಲಸೌಕರ್ಯ ಯೋಜನೆಗಳ ಅನುಷ್ಠಾನ, ಅನುದಾನ ಬಿಡುಗಡೆ ಕುರಿತು ಮನವಿ ಸಲ್ಲಿಸಿದರು. ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಅಡಿ ಅನುದಾನ ಬಿಡುಗಡೆಗೆ ಹಾಗೂ ರಾಜ್ಯದಲ್ಲಿನ ಬಾಕಿ ಇದ್ದ ರಸ್ತೆ ಯೋಜನೆಗಳನ್ನು ಶ್ರೀ ಪೂರ್ಣಗೊಳಿಸಬೇಕು. ರಾಜ್ಯ ಹೆದ್ದಾರಿಗಳನ್ನು
ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವ ಸಲ್ಲಿಸಲಾಗಿದೆ. ಕೂಡಲೇ ಅನುಮೋದನೆ ನೀಡಬೇಕು. ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂಬ ಮನವಿಗೆ ಕೇಂದ್ರ ಸಚಿವರು ಸ್ಪಂದಿಸಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯ ಸುನೀಲ ಹನುಮಣ್ಣವರ, ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಎಸ್ಟಿ ಟಕದ ಉಪಾಧ್ಯ ರಾಮಪ್ಪ ಟಿ.ಆರ್. ಇತರರಿದ್ದರು.