ಏಮ್ಸ್​ಗಾಗಿ ಸಂಕಲ್ಪ ಸಮಾಗಮ ಜು.14ರಂದು

ಸಂಕಲ್ಪ ಸಮಾಗಮ ಕಾರ್ಯಕ್ರಮದ ಕುರಿತ ಆವ್ಹಾನ ಪತ್ರಿಕೆಯನ್ನು ಯಾದಗಿರಿಯಲ್ಲಿ ಗುರುವಾರ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಬಿಡುಗಡೆ ಮಾಡಿದರು. ಲಲಿತಾ ಅನಪುರ, ದೇವೇಂದ್ರ ನಾಯಕ, ಮಲ್ಲಿಕಾರ್ಜುನ ನಾಯಕ, ಕೃಷ್ಣಮೂರ್ತಿ ಕುಲಕರ್ಣಿ ಇತರರಿದ್ದರು.
ಸಂಕಲ್ಪ ಸಮಾಗಮ ಕಾರ್ಯಕ್ರಮದ ಕುರಿತ ಆವ್ಹಾನ ಪತ್ರಿಕೆಯನ್ನು ಯಾದಗಿರಿಯಲ್ಲಿ ಗುರುವಾರ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಬಿಡುಗಡೆ ಮಾಡಿದರು. ಲಲಿತಾ ಅನಪುರ, ದೇವೇಂದ್ರ ನಾಯಕ, ಮಲ್ಲಿಕಾರ್ಜುನ ನಾಯಕ, ಕೃಷ್ಣಮೂರ್ತಿ ಕುಲಕರ್ಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಮಾಜಿ ಅಧ್ಯಕ್ಷ ಮಾಗನೂರ ಮಾಹಿತಿ
  • ಅವಧೂತ ಶ್ರೀ ವಿನಯ ಗುರೂಜಿಯಿಂದ ಚಾಲನೆ
ಯಾದಗಿರಿ: ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ 49ನೇ ಜನ್ಮದಿನ ನಿಮಿತ್ತ ಕೆಎಸ್​ಎನ್​ ಸಾಮಾಜಿಕ ಸೇವಾ ಸಮಿತಿಯಿಂದ ಜು. 14ರಂದು ಸಂಜೆ 4ಕ್ಕೆ ರಾಯಚೂರು ಜಿಲ್ಲೆಯ ಕವಿತಾಳದಲ್ಲಿ "ತಿಂಥಿಣಿ ಬ್ರಿಜ್​ ಜಲಾಶಯ ನಿರ್ಮಾಣ, ಸಮಗ್ರ ನೀರಾವರಿ, ನವಲಿ ಜಲಾಶಯ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಏಮ್ಸ್​ ಮಂಜೂರಾತಿ' ಕುರಿತು ಬೃಹತ್​ ಸಂಕಲ್ಪ ಸಮಾಗಮ ಆಯೋಜಿಸಲಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾ ಅಧ್ಯ ಚಂದ್ರಶೇಖರಗೌಡ ಮಾಗನೂರ ಹೇಳಿದರು.
ನಗರದಲ್ಲಿ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾಗಮವು ಕೇವಲ ಜನ್ಮದಿನ ಆಚರಣೆಯಲ್ಲ. ಉತ್ತರ ಕರ್ನಾಟಕ ಭಾಗದ ಜನರ ದಶಕಗಳ ಬೇಡಿಕೆಗಳಿಗೆ ಧ್ವನಿಯಾಗುವ ಐತಿಹಾಸಿಕ ಕಾರ್ಯಕ್ರಮವಾಗಿದೆ. ರೈತರು, ಯುವಕರು, ಮಹಿಳೆಯರು, ವಿವಿಧ ಸಂಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಚಿಕ್ಕಮಗಳೂರಿನ ಶ್ರೀ ಗೌರಿಗದ್ದೆ ಆಶ್ರಮದ ಅವಧೂತ ಶ್ರೀ ವಿನಯ ಗುರೂಜಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಈ ಭಾಗದ ಐತಿಹಾಸಿಕ ಬೇಡಿಕೆಗೆ ಸರ್ಕಾರ ತಣ ಕ್ರಮ ಕೈಗೊಳ್ಳುವಂತೆ ಬಲವಾದ ಹಕ್ಕೊತ್ತಾಯ ಮಂಡಿಸಲಿದ್ದಾರೆ ಎಂದರು.'
ತುರುವಿಹಾಳದ ಶ್ರೀ ಅಮೋಸಿದ್ದೇಶ್ವರ ಮಠದ ಶ್ರೀ ಮಾದಯ್ಯ ಗುರೂಜಿ ಕಾರ್ಯಕ್ರಮದ ಅಧ್ಯತೆ ವಹಿಸಿ, ಉತ್ತರ ಕರ್ನಾಟಕದ ರೈತರ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ ಹಾಗೂ ಪ್ರಾದೇಶಿಕ ಅಭಿವೃದ್ಧಿಯ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಏಮ್ಸ್​ ಮಂಜೂರಾದರೆ ಯಾದಗಿರಿ, ರಾಯಚೂರು, ಕಲಬುರ್ಗಿ, ಕೊಪ್ಪಳ, ವಿಜಯನಗರ ಸೇರಿ ಹಲವು ಜಿಲ್ಲೆಗಳ ಜನರಿಗೆ ಅತ್ಯಾಧುನಿಕ ವೈದ್ಯಕಿಯ ಸೇವೆಗಳು ಲಭ್ಯವಾಗಲಿವೆ. ಚಿಕಿತ್ಸೆಗಾಗಿ ದೂರದ ನಗರಗಳಿಗೆ ತೆರಳುವ ಅನಿವಾರ್ಯತೆ ತಪ್ಪಲಿದೆ ಎಂದು ಹೇಳಿದರು. ಸಮಾಗಮದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ರ್ನಿಣಯಗಳನ್ನು ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಾಗುವುದು. ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ದೇವೇಂದ್ರ ನಾಯಕ, ಮಲ್ಲಿಕಾರ್ಜುನ ನಾಯಕ, ಕೃಷ್ಣಮೂರ್ತಿ ಕುಲಕರ್ಣಿ, ವಿಜಯಕುಮಾರ ಮಗ್ದಂಪುರ, ವಿಶ್ವನಾಥ ನಾಯಕ, ಚನ್ನು ಸಾಹುಕಾರ, ಶಿವಶರಣಪ್ಪ ಸಾಹುಕಾರ, ಮಲ್ಲಣ್ಣಗೌಡ ಸುದ್ದಿಗೋಷ್ಠಿಯಲ್ಲಿದ್ದರು.
ಲಾಂತರ ಎಕರೆ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ
ತಿಂಥಿಣಿ ಬ್ರಿಜ್​ ಬಳಿ ಜಲಾಶಯ ನಿರ್ಮಾಣವಾದರೆ ಯಾದಗಿರಿ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಲಾಂತರ ಎಕರೆ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರೆಯಲಿದೆ. ಸುರಪುರ, ಹುಣಸಗಿ, ಶಹಾಪುರ, ವಡಗೇರ, ಯಾದಗಿರಿ, ಜೇವರ್ಗಿ, ದೇವದುರ್ಗ, ಅರಿಕೇರ ಹಾಗೂ ಸಿರವಾರ ಭಾಗದ ರೈತರಿಗೆ ಎರಡು ಬೆಳೆ ಬೆಳೆಯಲು ಅವಕಾಶ ಸಿಗಲಿದ್ದು, ಕಾಲುವೆಗಳ ಕೊನೆಯ ಭಾಗಕ್ಕೂ ಸಮರ್ಪಕವಾಗಿ ನೀರು ತಲುಪಲಿದೆ ಎಂದು ಮಾಗನೂರ ಹೇಳಿದರು.
"

ನವಲಿ ಜಲಾಶಯ ನಿರ್ಮಾಣ ಮತ್ತು ಸಮಗ್ರ ನೀರಾವರಿ ಯೋಜನೆಗಳು ಅನುಷ್ಠಾನಗೊಂಡರೆ ಉತ್ತರ ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯಾಗಲಿದೆ. ಭೂಗರ್ಭ ಜಲಮಟ್ಟ ಹೆಚ್ಚುವುದರೊಂದಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದ್ದು, ಗ್ರಾಮೀಣ ಆರ್ಥಿಕತೆ ಬಲಗೊಳ್ಳಲಿದೆ.

— > ಚಂದ್ರಶೇಖರ ಮಾಗನೂರ ಮಾಜಿ ಜಿಲ್ಲಾಧ್ಯಕ್ಷ, ಬಿಜೆಪಿ ಯಾದಗಿರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net