ಸಂಗೋಳಗಿ ಸರ್ಕಾರಿ ಶಾಲೆ ಛಾವಣಿ ಕುಸಿತ

ಆಳಂದ ತಾಲೂಕಿನ ಸಂಗೋಳಗಿ (ಸಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಛಾವಣಿ ಪದರು ಕಳಚಿ ಬಿದ್ದಿರುವುದನ್ನು ಸಿಆರ್​ಪಿ ಧರ್ಮರಾಯ, ಮುಖ್ಯಗುರು ಪುಷ್ಪಾವತಿ ಪರಿಶೀಲಿಸಿದರು.
ಆಳಂದ ತಾಲೂಕಿನ ಸಂಗೋಳಗಿ (ಸಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಛಾವಣಿ ಪದರು ಕಳಚಿ ಬಿದ್ದಿರುವುದನ್ನು ಸಿಆರ್​ಪಿ ಧರ್ಮರಾಯ, ಮುಖ್ಯಗುರು ಪುಷ್ಪಾವತಿ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಜೆ ದಿನ ಆಗಿದ್ದರಿಂದ ತಪ್ಪಿದ ಭಾರಿ ಅನಾಹುತ
  • ಮೂರು ದಿನಗಳಲ್ಲೇ ಎರಡನೇ ಅವಡ
ಆಳಂದ: ಕಲಬುರಗಿಯ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಕಟ್ಟಡದ ಛಾವಣಿ ಪದರು ಕುಸಿದಿದ್ದು ಮರೆಯುವ ಮುನ್ನವೇ ಸಂಗೋಳಗಿ(ಸಿ) ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಭಾನುವಾರ ರಜೆ ದಿನವಾಗಿದ್ದರಿಂದ ಸಂಭವನೀಯ ದೊಡ್ಡ ಅನಾಹುತ ತಪ್ಪಿದೆ.
ಏಳು ಶಿಕ್ಷಕರಿರುವ ಶಾಲೆಯಲ್ಲಿ 204 ಮಕ್ಕಳು ಅಭ್ಯಸಿಸುತ್ತಿದ್ದು, 11 ಕೋಣೆಗಳಿವೆ. 6ರಲ್ಲಿ ತರಗತಿ, ಒಂದು ಕಚೇರಿ, ಇನ್ನೊಂದು ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಇನ್ನುಳಿದ ಮೂರು ಕೋಣೆ ಸಂಪೂರ್ಣ ಶಿಥಿಲಗೊಂಡಿದ್ದು, ಅದರಲ್ಲಿನ ಒಂದರ ಮೇಲ್ಛಾವಣಿ ಕುಸಿದಿದೆ.
60-70 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಬಳಕೆ ಮಾಡುತ್ತಿರಲಿಲ್ಲ. ಅಲ್ಲದೆ ನೆಲಸಮಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇಲ್ಛಾವಣಿ ಕುಸಿದಿರುವ ವಿಷಯ ತಿಳಿಯುತ್ತಿದ್ದಂತೆ ಚಿಂಚನಸೂರ ಸಿಆರ್​ಪಿ ಧರ್ಮರಾಯ, ಮುಖ್ಯ ಶಿಕ್ಷಕಿ ಪುಷ್ಪಾವತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಕಟ್ಟಡದತ್ತ ಯಾರೂ ತಿರುಗಾಡದಂತೆ ರ್ನಿಬಂಧಿತ ಸ್ಥಳ ಎಂದು ಮಾರ್ಕ್​ ಮಾಡಿ ಹಾಕಲಾಗಿದೆ.
ಶಿಥಿಲಗೊಂಡಿರುವ ಕೋಣೆಗಳನ್ನು ಬಳಸದಿದ್ದರೂ ಶಾಲೆ ಸಮಯದಲ್ಲಿ ಮಕ್ಕಳು ಇತ್ತ ಹೋಗುತ್ತಿದ್ದರು. ಆದರೆ ಅದೃಷ್ಟವಶಾತ್​ ಭಾನುವಾ ಟನೆ ನಡೆದಿದ್ದರಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂಬುದು ಸ್ಥಳಿಯ ಅಭಿಪ್ರಾಯವಾಗಿದೆ.
"

ಸಂಗೋಳಗಿ(ಸಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ಕೋಣೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ನೆಲಸಮಗೊಳಿಸಲು ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಈ ಕೋಣೆಗಳನ್ನು ಬಳಸದೆ ಖಾಲಿ ಬಿಡಲಾಗಿತ್ತು. ತಾಲೂಕಿನಲ್ಲಿರುವ ಇನ್ನುಳಿದ ಶಿಥಿಲಗೊಂಡ ಶಾಲಾ ಕೋಣೆಗಳನ್ನು ಶ್ರೀದಲ್ಲಿ ನೆಲಸಮ ಮಾಡಲಾಗುವುದು.

— > ಅಣ್ಣಪ್ಪ ಹಾದಿಮನಿ ಪ್ರಭಾರಿ ಬಿಇಒ, ಆಳಂದ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net