ಚಿಂಚೋಳಿ: ಖರ್ಚಖೇಡ ಗ್ರಾಮದ ಕಿರಾಣಿ ಅಂಗಡಿಯೊಂದರಲ್ಲಿ ಅವಧಿ ಮುಗಿದು 23 ದಿನ ಕಳೆದ ಬಿಸ್ಕತ್ತು ಮಾರಾಟ ಮಾಡುತ್ತಿರುವುದು ಭಾನುವಾರ ಬೆಳಕಿಗೆ ಬಂದಿದೆ.ಖರ್ಚಖೇಡ ಗ್ರಾಮದಲ್ಲಿ ಯಲ್ಲಾಲಿಂಗ ಎಂಬ ಯುವಕ ಭಾನುವಾರ ಮಾರಿ ಡಿಲೈಟ್ ಕಂಪನಿಯ 5 ರೂ. ಮೌಲ್ಯದ ಬಿಸ್ಕತ್ತು ಖರೀದಿಸಿದ್ದಾನೆ. ಇದರಲ್ಲಿ 2026ರ ಜ.3ರಂದು ಸಿದ್ಧಪಡಿಸಿದ್ದು, ಜು.2 ಕೊನೆಯ ದಿನ ಎಂದು ನಮೂದಾಗಿದೆ. ಅವಧಿ ಮುಗಿದೂ 20 ದಿನ ಮೇಲ್ಪಟ್ಟರು ಹಾಗೆ ಮಾರಾಟ ಮಾಡುತ್ತಿದ್ದಾರೆ. ಬಿಸ್ಕತ್ತು ಖರೀದಿಸಿ ಯುವಕ ಅವಧಿ ಮುಗಿದ ಪ್ರೊಡಕ್ಟ್ ಯಾಕೆ ಮಾರಾಟ ಮಾಡುತ್ತಿದ್ದೀರಿ ಎಂದು ಕೇಳಿದರೆ, ನಾನೇನು ಮಾಡಲಿ.. ಇದು ತಿಂದರೆ ಯಾರು ಸಾಯುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದ ಜನರು ಪ್ಯಾಕೆಟ್ ಮೇಲಿರುವ ಅವಧಿ ಗಮನಿಸುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಅಂಗಡಿ ಅವರು, ಕಂಪನಿಗಳ ಕಮಿಷನ್ ಆಸೆ ಅಥವಾ ನಷ್ಟ ತಪ್ಪಿಸಿಕೊಳ್ಳಲು ಅವಧಿ ಮುಗಿದ ಬಿಸ್ಕತ್ತು ನೀಡುತ್ತಿದ್ದಾರೆ ಎಂದು ದೂರಿದರು.