ಶಹಾಪುರ: ತೆಲಂಗಾಣ ರಾಜ್ಯ ಆರ್ಟ್ ಗ್ಯಾಲರಿ ನಡೆಸಿದ ಅಖಿಲ ಭಾರತ ಕಲಾ ಸ್ಪರ್ಧೆ ಮತ್ತು ಪ್ರದರ್ಶನ 2026&27ನೇ ಸಾಲಿನ ಪ್ರಶಸ್ತಿಗೆ ನಗರದ ಶಿಲ್ಪ ಮತ್ತು ಚಿತ್ರಕಲಾವಿದ ಪ್ರಶಾಂತ ಜಿ.ಗುಮಳಾಪುರ ಮಠ ಭಾಜನರಾಗಿದ್ದಾರೆ. ತೆಲಂಗಾಣ ರಾಜ್ಯ 7ನೇ ಆವೃತ್ತಿಗೆ ಕಲಾವಿದರಿಂದ ಅರ್ಜಿ ಆಹ್ವಾನಿಸಿದಾಗ ಕಲಾವಿದ ಪ್ರಶಾಂತ, ತಮ್ಮ ವಿನೂತನ ಶಿಲ್ಪಕಲೆಯ ಮಾದರಿಯನ್ನು ಸ್ಪರ್ಧೆ ಮತ್ತು ಪ್ರದರ್ಶನಕ್ಕೆ ಕಳುಹಿಸಿದ್ದರು. ಮೆಚ್ಚುಗೆ ಪಡೆದ ಇವರ ಶಿಲ್ಪಕಲೆ ಪ್ರಶಸ್ತಿಗೆ ಆಯ್ಕೆಯಾಗಿದೆ. 20 ಸಾವಿರ ರೂ.ನಗದು ಸೇರಿ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು