ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ

ಗುಡುಮಕೇರಿ ಗ್ರಾಮದಲ್ಲಿ 70 ಲ ರೂ.ವೆಚ್ಚದ ರಸ್ತೆ ಸುಧಾರಣೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ಎಚ್​.ಎ.ಕದ್ರಾಪೂರಕರ, ಬಸವರಾಜ ಅಯ್ಯನಗೌಡ್ರ ಇತರರಿದ್ದರು.
ಗುಡುಮಕೇರಿ ಗ್ರಾಮದಲ್ಲಿ 70 ಲ ರೂ.ವೆಚ್ಚದ ರಸ್ತೆ ಸುಧಾರಣೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ಎಚ್​.ಎ.ಕದ್ರಾಪೂರಕರ, ಬಸವರಾಜ ಅಯ್ಯನಗೌಡ್ರ ಇತರರಿದ್ದರು.
Published on
ಸತ್ತಿಗೇರಿ: ಸವದತ್ತಿ ಯಲ್ಲಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಗುಡುಮಕೇರಿ ಗ್ರಾಮದಲ್ಲಿ 70 ಲ ರೂ.ವೆಚ್ಚದಲ್ಲಿ ರಸ್ತೆ ಸುಧಾರಣೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗುಡಮಕೇರಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ರೈತರಿಗೆ ಅನುಕೂಲವಾಗಲಿದೆ. ಸಮರ್ಪಕ ರಸ್ತೆ ನಿರ್ಮಾಣದ ಮೂಲಕ ಪ್ರತಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಪಂಚಾಯತ್​ ರಾಜ್ಯ ಇಲಾಖೆ ಅಧಿಕಾರಿಗಳಾದ
ಎಚ್​.ಎ.ಕದ್ರಾಪೂರಕರ, ಬಸವರಾಜ ಅಯ್ಯನಗೌಡ್ರ, ಬೆಮುಲ್​ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯ ನೀಲಕಂಠ ಸಿದಬಸನ್ನವರ, ಪ್ರಕಾಶ ವಾಲಿ, ಬಂಗಾರೆಪ್ಪ ಹರಳಿ, ಉಮೇಶ ಮಾಗುಂಡನವರ, ರಾಜು ಯರಗಣವಿ, ಸತ್ಯನಾಯ್ಕ ನಾಯ್ಕರ, ಮಲಿಕಸಾಬ್​ ಬಾಗವಾನ, ನಿಖಿಲ ಪಾಟೀಲ, ವಾಚಪೆ ಗುಡುಮಕೇರಿ, ಸತ್ಯಪ್ಪ ಆಡಕಾರ, ಕೀರಪ್ಪ ಮಾದನ್ನವರ, ಭೀಮಶಿ ಪಾಟೀಲ, ಮಾರುತಿ ತಳವಾರ, ಹನಮಂತ ಶೆಟ್ಟೆಪ್ಪನ್ನವರ, ಶಿವಪ್ಪ ಪುಡಕಲಕಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net