ಧರ್ಮ ಸಂಸ್ಕಾರ ಉಪದೇಶಿಸಿದ ರುದ್ರಮುನಿ ಶ್ರೀ

ಬಸವಕಲ್ಯಾಣದ ಸಂಸ್ಥಾನ ಗವಿಮಠದಲ್ಲಿ ಶ್ರಾವಣ ನಿಮಿತ್ತ ಗುರುವಾರ ಸಂಜೆ ಏರ್ಪಡಿಸಿದ್ದ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಕುರಿತ ಉಪನ್ಯಾಸದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಮಾತನಾಡಿದರು. ರುದ್ರೇಶ್ವರ ಗೋರ್ಟಾ, ಚಂದ್ರಕಾಂತ ಬಿರಾದಾರ, ಶ್ರೀನಿವಾಸ ಬಿರಾದಾರ ಇದ್ದರು.
ಬಸವಕಲ್ಯಾಣದ ಸಂಸ್ಥಾನ ಗವಿಮಠದಲ್ಲಿ ಶ್ರಾವಣ ನಿಮಿತ್ತ ಗುರುವಾರ ಸಂಜೆ ಏರ್ಪಡಿಸಿದ್ದ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಕುರಿತ ಉಪನ್ಯಾಸದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಮಾತನಾಡಿದರು. ರುದ್ರೇಶ್ವರ ಗೋರ್ಟಾ, ಚಂದ್ರಕಾಂತ ಬಿರಾದಾರ, ಶ್ರೀನಿವಾಸ ಬಿರಾದಾರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರುದ್ರೇಶ್ವರ ಗೋರ್ಟಾ ಹೇಳಿಕೆ
  • ಬಸವಕಲ್ಯಾಣದಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಉಪನ್ಯಾಸ
 ಬಸವಕಲ್ಯಾಣ: ಸಂಸ್ಥಾನ ಗವಿಮಠದ ಮೂಲ ಒಡೆಯರಾದ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಹಾ ತಪಸ್ವಿಗಳಾಗಿದ್ದರು. ಅವರ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ  ಎಂದು ಶ್ರೀ ರಾಜೀವ ಗಾಂಧಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರುದ್ರೇಶ್ವರ ಗೋರ್ಟಾ ಹೇಳಿದರು.
ಶ್ರಾವಣ ನಿಮಿತ್ತ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್​ನಿಂದ ಗುರುವಾರ ಸಂಜೆ ಏರ್ಪಡಿಸಿದ್ದ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂದೇಶ ಉಪನ್ಯಾಸದಲ್ಲಿ ಮಾತನಾಡಿದ ಅವರು, ಶಿವಶರಣರ ಸಮಕಾಲೀನರಾಗಿದ್ದ  ರುದ್ರಮುನಿಗಳು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಗಳಲ್ಲಿ ಸಂಚರಿಸಿ ಧರ್ಮ ಸಂಸ್ಕಾರ ಉಪದೇಶಿಸಿ ಭಕ್ತರನ್ನು ಉದ್ಧರಿಸಿದ್ದಾರೆ. ಈ ಕುರಿತು ಸರ್ಕಾರ, ವಿಶ್ವವಿದ್ಯಾಲಯ, ಸಂಘ- ಸಮಿತಿಗಳು ಪ್ರಕಟಿಸಿದ ಐತಿಹಾಸಿಕ ದಾಖಲೆಗಳು ಲಭ್ಯವಾಗಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಮಾತನಾಡಿ, ರುದ್ರಮುನಿ ಶಿವಯೋಗಿಗಳು ತಮ್ಮ ಯೋಗಶಕ್ತಿಯಿಂದ ದೂರದ ಘಟನೆ ಅರಿತು ಸಂಕಷ್ಟದಲ್ಲಿದ್ದ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು ಎಂದು ಹೇಳಿದರು.
ಎಕ್ಕಂಬಾ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಚಂದ್ರಕಾಂತ ಬಿರಾದಾರ, ಟ್ರಸ್ಟ್​ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ಶ್ರೀನಿವಾಸ ಬಿರಾದಾರ, ಎ.ಜಿ. ಪಾಟೀಲ್​, ಲಕ್ಷ$್ಮಣಸಿಂಗ್​ ಸಿಂಗಾರೆ, ರಾಕೇಶ ಪುರವಂತ, ಗೋವಿಂದರೆಡ್ಡಿ, ಶಿವಶಂಕರ ರಾಮಣ್ಣನವರ, ವೀರೇಶ ಗಡೇದಾರ, ಬಾಬುರಾವ ಚಳಕಾಪುರೆ, ರಾಮಶೆಟ್ಟಿ ಬಿರಾದಾರ, ಸರಸ್ವತಿ ಬೆಂಬಳೆ, ಸವಿತಾ ಸ್ವಾಮಿ, ಸುರೇಖಾ ಸಜ್ಜನಶೆಟ್ಟಿ, ಮಂಜುನಾಥ ಸ್ವಾಮಿ, ಸಂಜುಕುಮಾರ ಪಂಚಾಳ ಇತರರಿದ್ದರು
ಬಸವಂತಪ್ಪ ಲವಾರೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಅಲಗುಡೆ ನಿರೂಪಣೆ ಮಾಡಿದರು. ಶರಣಬಸಪ್ಪ ಅಲುಗುಡೆ ಪ್ರಾರ್ಥಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net