ಟೆಕ್ಸ್​ಟೈಲ್​ ಪಾರ್ಕ್​ ಭೂ ಅಭಿವೃದ್ಧಿಗೆ ರು.350 ಕೋಟಿ

ಕಲಬುರಗಿ ಕೆಕೆಸಿಸಿಐ ಸಭಾಂಗಣದಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಐಎಡಿಬಿ ಸಿಇಒ ಗೋವಿಂದರೆಡ್ಡಿ ಅವರನ್ನು ಸತ್ಕರಿಸಲಾಯಿತು. ಶರಣಬಸಪ್ಪ ಪಪ್ಪಾ, ಶಿವರಾಜ ಇಂಗಿನಶೆಟ್ಟಿ, ಅಬ್ದುಲ್​ ಅಜೀಮ್​, ಅಭಿಜಿತ್​ ಪಡಶೆಟ್ಟಿ, ಉತ್ತಮ ಬಜಾಜ್​, ರವಿಶಂಕರ ಜಮದರಖಾನಿ ಇತರರಿದ್ದರು.
ಕಲಬುರಗಿ ಕೆಕೆಸಿಸಿಐ ಸಭಾಂಗಣದಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೆಐಎಡಿಬಿ ಸಿಇಒ ಗೋವಿಂದರೆಡ್ಡಿ ಅವರನ್ನು ಸತ್ಕರಿಸಲಾಯಿತು. ಶರಣಬಸಪ್ಪ ಪಪ್ಪಾ, ಶಿವರಾಜ ಇಂಗಿನಶೆಟ್ಟಿ, ಅಬ್ದುಲ್​ ಅಜೀಮ್​, ಅಭಿಜಿತ್​ ಪಡಶೆಟ್ಟಿ, ಉತ್ತಮ ಬಜಾಜ್​, ರವಿಶಂಕರ ಜಮದರಖಾನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಐಎಡಿಬಿ ಸಿಇಒ ಗೋವಿಂದರೆಡ್ಡಿ ಹೇಳಿಕೆ
  • ಕಲಬುರಗಿ ಕೆಕೆಸಿಸಿಐ ಸಭಾಂಗಣದಲ್ಲಿ ಸಂವಾದ
ಕಲಬುರಗಿ: ನಗರದಲ್ಲಿ ಪಿಎಂ ಮಿತ್ರ ಟೆಕ್ಸ್​ಟೈಲ್​ ಪಾರ್ಕ್​ ಭೂ ಅಭಿವೃದ್ಧಿಗೆ 350 ಕೋಟಿ ರೂ. ಮೀಸಲಿರಿಸಿದ್ದು, ಕಾಮಗಾರಿ ಆರಂಭವಾಗಿದೆ ಎಂದು ಕೆಐಎಡಿಬಿ ಸಿಇಒ ಗೋವಿಂದರೆಡ್ಡಿ ಹೇಳಿದರು.
ಕೆಕೆಸಿಸಿಐ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಯೋಜನೆಗೆ ಸಚಿವರಾದ ಪ್ರಿಯಾಂಕ್​ ಖರ್ಗೆ, ಎಂ.ಬಿ. ಪಾಟೀಲ್​ ನೀಡುತ್ತಿರುವ ಸಹಕಾರ ಶ್ಲಾಘಸಿ ಡಿಪಿಆರ್​ ಅನುಮೋದನೆಗೊಂಡು ಮೂಲಸೌಕರ್ಯ ಕಾಮಗಾರಿ ಪೂರ್ಣಗೊಂಡ ಬಳಿಕ ಅಭಿವೃದ್ಧಿಪಡಿಸಿದ ಪಾರ್ಕ್​ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದರು.
ನಂದೂರು ಕೈಗಾರಿಕಾ ಪ್ರದೇಶ ಮೂರನೇ ಹಂತದ ಭೂ ಹಂಚಿಕೆ ಪ್ರಕ್ರಿಯೆ ಐದಾರು ತಿಂಗಳೊಳಗೆ ಶುರುವಾಗಲಿದೆ. ಕೆ-ಲ್ಯಾಂಪ್​ ಮಹಿಳಾ ಕೈಗಾರಿಕಾ ಪಾರ್ಕ್​ಗೆ ಸಂಬಂಧಿಸಿದಂತೆ ಬೀದಿ ದೀಪ, ಭದ್ರತೆ ಸೇರಿ ಅಗತ್ಯ ಮೂಲಸೌಕರ್ಯ ಶೀಘ್ರದಲ್ಲೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಸುವ ಯೋಜನೆ ಸರ್ಕಾರದ ಪರಿಶೀಲನೆಯಲ್ಲಿದ್ದು, ಅನುಮೋದನೆ ದೊರೆತ ಬಳಿಕ ಟೆಂಡರ್​ ಪ್ರಕ್ರಿಯೆ ಆರಂಭಿಸಲಾಗುವುದು. ಸರ್ಕಾರ ಇಲಾಖೆಗಳಲ್ಲಿ ಇ-ಕಚೇರಿ ವ್ಯವಸ್ಥೆ ಜಾರಿಯಿಂದ ಪಾರದರ್ಶಕತೆ ಹೆಚ್ಚುವುದರ ಜತೆಗೆ ಅನುಮೋದನೆ ಪ್ರಕ್ರಿಯೆ ವೇಗವಾಗಲಿದೆ ಎಂದರು.
ಸಂವಾದ ಉದ್ಘಾಟಿಸಿದ ಕೆಕೆಸಿಸಿಐ ಅಧ್ಯ ಶರಣಬಸಪ್ಪ ಪಪ್ಪಾ ಮಾತನಾಡಿ, ಗೋವಿಂದರೆಡ್ಡಿ ಅವರು ಅತ್ಯುತ್ತಮ ಸೇವೆ ಸಲ್ಲಿಸಿ ರಾಜ್ಯಾದ್ಯಂತ ಉತ್ತಮ ಅಧಿಕಾರಿ ಎಂದು ಗುರುತಿಸಿಕೊಂಡಿದ್ದಾರೆ. ಕೆಐಎಡಿಬಿ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕಾ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೈಗಾರಿಕಾ ಪ್ರದೇಶಗಳಲ್ಲಿ ಪೊಲೀಸ್​ ಠಾಣೆ, ಅಗ್ನಿಶಾಮಕ ಹಾಗೂ ಆರೋಗ್ಯ ಕೇಂದ್ರ ಸ್ಥಾಪಿಸಬೇಕೆಂಬ ಕೈಗಾರಿಕೋದ್ಯಮಿಗಳ ಮನವಿಗೆ ಸ್ಪಂದಿಸಿದ ಗೋವಿಂದರೆಡ್ಡಿ, ಸಂಬಂಧಿತ ಇಲಾಖೆಗಳು ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಕೆಐಎಡಿಬಿ ಉಚಿತ ಭೂಮಿ ಒದಗಿಸಲು ಸಿದ್ಧವಿದೆ. ಸಂವಾದದಲ್ಲಿ ಪ್ರಸ್ತಾಪಿಸಿದ ಎಲ್ಲ ವಿಷಯಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕೆ-ಲ್ಯಾಂಪ್​ ಪ್ರತಿನಿಧಿಗಳಾದ ಮುಕ್ತಾ ಜೆಗರಕಲ್​, ಅನ್ನಪೂರ್ಣಾ ಹೊಗಾಡೆ, ಕಪನೂರ ಕೈಗಾರಿಕಾ ಪ್ರದೇಶ ಸಂಘದ ಪ್ರತಿನಿಧಿಗಳಾದ ರವೀಂದ್ರ ಮುಕ್ಕಾ, ಬಸವರಾಜ ಜೋಗೂರ, ರವೀಂದ್ರ ಮಾದಮಶೆಟ್ಟಿ, ಸುಭಾಷ ಕಮಲಾಪುರ, ಕೈಗಾರಿಕೋದ್ಯಮಿಗಳಾದ ಅಜಯ್​ ಮದಗುಂಕಿ, ಭೀಮರಾವ ಪಾಟೀಲ್​ ಧಂಗಾಪುರ, ಶರಣಬಸಪ್ಪ ಮಚ್ಚೆಟ್ಟಿ, ಹನುಮಂತರಾಯ ತೋಟ್ನಳ್ಳಿ, ಸಂತೋಷ ನಂದ್ಯಾಳ, ಭೀಮಾಶಂಕರ ಕಲಶೆಟ್ಟಿ, ನಾಗೇಶ ಪಾಟೀಲ್​, ಅಬ್ದುಲ್​ ಸಲೀಂ ಹಾಗೂ ಹಸನುದ್ದೀನ್​ ಕೆಲ ಸಲಹೆಗಳನ್ನು ನೀಡಿದರು.
ಕೆಐಎಡಿಬಿ ಅಧೀಕ ಅಭಿಯಂತರ ಟಿ.ಎಸ್​. ಲಕ್ಷ್ಮೀಶ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್​ ಅಜೀಮ್​, ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಜಂಟಿ ಕಾರ್ಯದರ್ಶಿ ಗಿರೀಶ ಅಣಕಲ್​, ಖಜಾಂಚಿ ಉತ್ತಮ ಬಜಾಜ್​, ಎಂಎಸ್​ಎಂಇ ಸಮಿತಿ ಅಧ್ಯಕ್ಷ ಅಭಿಜಿತ್​ ಪಡಶೆಟ್ಟಿ, ಅನುದೀಪ ದಂಡೋತಿ, ಸಂತೋಷ ನಂದ್ಯಾಳ ಇತರರಿದ್ದರು. ರವಿಶಂಕರ ಜಮದರಖಾನಿ ನಿರೂಪಣೆ ಮಾಡಿದರು.
"

ಕೈಗಾರಿಕಾ ಭೂಮಿ, ಮೂಲಸೌಕರ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರೆತಿಲ್ಲ. ಕಲ್ಯಾಣ ಕರ್ನಾಟಕ ಜನರಿಗೆ ಒಂದು ಲ ಉದ್ಯೋಗ ಸೃಷ್ಟಿ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್​ ಪಾರ್ಕ್​ ಯೋಜನೆ ಶ್ರೀ ಅನುಷ್ಠಾನಗೊಳ್ಳುವ ಅಗತ್ಯವಿದೆ.

— > ಶರಣಬಸಪ್ಪ ಪಪ್ಪಾ ಕೆಕೆಸಿಸಿಐ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net