ಹೈದರಾಬಾದ್ನ ಖಾಸಗಿ ಅಸ್ಪತ್ರೆಗೆ ಭಾನುವಾರ ಭೇಟಿ ನೀಡಿ ರಿಷಬ್ ಆರೋಗ್ಯ ವಿಚಾರಿಸಿದ ಶಾಸಕರು, ಯಾವ ರೀತಿಯಿಂದಲೂ ಹೆದರಿಕೆ ಬೇಡ, ಧೈರ್ಯವಾಗಿರಬೇಕು. ಎಲ್ಲ ರೀತಿಯಿಂದಲೂ ನಾನು ಜತೆಗಿದ್ದು ಸಹಾಯ ಮಾಡುತ್ತೇನೆ. ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದ ನಂತರ ತ್ರಿಚಕ್ರ ವಾಹನ ಕೊಡಿಸುತ್ತೇನೆ. ಮುಂದೆ ಉದ್ಯೋಗ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.