15 ಕೋಟಿ ರೂ. ಅನುದಾನ ಬಿಡುಗಡೆ - ಜಗದೀಶ ಶೆಟ್ಟರ

ಜಗದೀಶ ಶೆಟ್ಟರ
ಜಗದೀಶ ಶೆಟ್ಟರ
Published on
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಡಿ 22 ಕಿಮೀ ವ್ಯಾಪ್ತಿಯ ಮೂರು ಮುಖ್ಯ ರಸ್ತೆಗಳ ಸುಧಾರಣೆಗಾಗಿ ಕೇಂದ್ರ ರಸ್ತೆ ಮೂಲ ಸೌಕರ್ಯ ಯೋಜನೆಯಡಿ 15 ಕೋಟಿ ರೂ. ಅನುದಾನವನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ ತಿಳಿಸಿದ್ದಾರೆ.
80.33 ಕಿಮೀ ಉದ್ದಳತೆಯ ರಸ್ತೆ ದುರಸ್ತಿಗಾಗಿ ಒಂಬತ್ತು ಕಾಮಗಾರಿ ಪ್ರಸ್ತಾಪಿಸಿ, ಇದಕ್ಕೆ ತಗಲುಬಹುದಾದ 86.40 ಕೋಟಿ ರೂ.ಅನುದಾನಕ್ಕಾಗಿ ವಿನಂತಿಸಲಾಗಿತ್ತು.
ಇದಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವರು ಬೆಳಗಾವಿ ತಾಲೂಕಿನಲ್ಲಿ 12 ಕಿಮೀ ಉದ್ದಳತೆಯ ದೇಸೂರ-ನಂದಿಹಳ್ಳಿ-ಕುಕಡೊಳ್ಳಿ ರಸ್ತೆ ಸುಧಾರಣೆಗೆ 8 ಕೋಟಿ ರೂ., 5 ಕಿಮೀ ಉದ್ದಳತೆಯ ಬಿಜಗರ್ಣಿ-ಕವಳೆವಾಡಿ ಜಾನೇವಾಡಿ-ಕರ್ಲೆ-ಬಹದ್ದೂರವಾಡಿ -ಕಿಣಿಯೆಯಿಂದ ರಾಜ್ಯ ಹೆದ್ದಾರಿ-54 ಕೂಡು ರಸ್ತೆ ಸುಧಾರಣೆಗೆ 4 ಕೋಟಿ ರೂ., ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಕ್ರಾಸ್‌ದಿಂದ ಚಿವಟಗುಂಡಿ ವರೆಗಿನ 5 ಕಿಮೀ ರಸ್ತೆ ಸುಧಾರಣೆಗೆ 3 ಕೋಟಿ ರೂ.ಒಪ್ಪಿಗೆ ಸೂಚಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕ್ಷೇತ್ರದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆಂದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net