ಕಾಳಗಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಸಮಾರಂಭವನ್ನು ಸಂಸದ ಸಾಗರ ಖಂಡ್ರೆ ಉದ್ಘಾಟಿಸಿದರು. ಶಾಸಕರಾದ ಡಾ.ಅವಿನಾಶ ಜಾಧವ್, ಜಗದೇವ ಗುತ್ತೇದಾರ್, ಮುಖಂಡರಾದ ಗೋಪಾಲರಾವ ಕಟ್ಟಿಮನಿ, ಶರಣು ರಾಜಾಪುರ ಇತರರಿದ್ದರು.
ಕಾಳಗಿ: ಹಸಿರುಕ್ರಾಂತಿ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರು ದೇಶದ ರಣೆಗಾಗಿ ತಮ್ಮ ಜೀವನವನ್ನೇ ಮೂಡಿಪಾಗಿಟ್ಟಿರುವ ಶ್ರೇಷ್ಠ ನಾಯಕ ಎಂದು ಬೀದರ್ ಸಂಸದ ಸಾಗರ ಖಂಡ್ರೆ ಬಣ್ಣಿಸಿದರು.
ಶ್ರೀ ನೀಲಕಂಠ ಕಾಳೇಶ್ವರ ಮಂಗಲ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತಿ, ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾದಿಗ ಸಮಾಜಕ್ಕಾಗಿ ಕಾಳಗಿಯಲ್ಲಿ ತಾಲೂಕು ಮಟ್ಟದ ಬಾಬೂಜಿ ಭವನ ನಿರ್ಮಾಣಕ್ಕಾಗಿ 10ಲ ರೂ. ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಡಾ.ಅವಿನಾಶ ಜಾಧವ್ ಮಾತನಾಡಿ, ಭಾರತವನ್ನು ಹಸಿವುಮುಕ್ತ ರಾಷ್ಟ್ರವನ್ನಾಗಿ ನಿರ್ಮಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ. ತಮ್ಮ ಅಧಿಕಾರವಧಿಯಲ್ಲಿ ರೈತರಿಗೆ ಪ್ರೋತ್ಸಾಹ ನೀಡುವ ಮೂಲಕ ಆಹಾರ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದರು. ಶೈಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಮಾದಿಗ ಸಮಾಜವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್, ಕೆಪಿಸಿಸಿ ಉಪಾಧ್ಯ ಸುಭಾಷ ರಾಠೋಡ್, ಮಾದಾರ ಮಹಾಸಭೆ ಜಿಲ್ಲಾಧ್ಯ ಗೋಪಾಲರಾವ ಕಟ್ಟಿಮನಿ, ಮುಖಂಡ ದಶರಥ ಕಲಗುರ್ತಿ ಮಾತನಾಡಿದರು.
ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಯಂತ್ಯುತ್ಸವ ಸಮಿತಿ ತಾಲೂಕು ಅಧ್ಯ ಶರಣು ರಾಜಾಪುರ, ರೇವಣಸಿದ್ದ ಕಟ್ಟಿಮನಿ, ಸುಂದರ ಸಾಗರ, ರಾವೇಂದ್ರ ಗುತ್ತೇದಾರ್, ಗುರು ಮದ್ದೂರ, ಬಸವರಾಜ ಮಡಿವಾಳ, ರಮೇಶ ಕಿಟ್ಟದ, ಶರಣಪ್ಪ ಬೇಲೂರ, ದತ್ತಾತ್ರೇಯ ಗುತ್ತೇದಾರ್, ಮಲ್ಲಿಕಾರ್ಜುನ ಸಿಂಗೆ, ಮಹೇಶ ಭರತನೂರ, ಕರಣ ರಾಜಾಪುರ, ಹರೀಶ ಸಿಂಗೆ, ಪ್ರಶಾಂತ ಕದಂ, ಶರಣು ಚಂದಾ, ಮಾಣಿಕ ಸಿಂಧೆ, ಶಿವಕುಮಾರ ಕಮಕನೂರ, ಕೃಷ್ಣ ಕಟ್ಟಿಮನಿ, ರೇವಣಸಿದ್ದ ಕೋಡ್ಲಿ ಇತರರಿದ್ದರು.
ವೇದಿಕೆ ತೊರೆಯಲು ಮುಂದಾದ ಖಂಡ್ರೆ
ಒಳಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಕ್ಕೆ ಬೀದರ್ ಸಂಸದ ಸಾಗರ ಖಂಡ್ರೆ ಅವರು ಅಸಮಾಧಾನ ವ್ಯಕ್ತಪಡಿಸಿ ವೇದಿಕೆ ತೊರೆಯಲು ಮುಂದಾದ ಪ್ರಸಂಗ ಭಾನುವಾರ ನಡೆಯಿತು. ಸಮಾರಂಭದಲ್ಲಿ ಮಾದಾರ ಮಹಾಸಭೆ ಜಿಲ್ಲಾಧ್ಯ ಗೋಪಾಲರಾವ ಕಟ್ಟಿಮನಿ ಮಾತನಾಡುತ್ತಾ, ಒಳ ಮೀಸಲಾತಿ ಜಾರಿಗಾಗಿ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ಆಡಳಿತಕ್ಕೆ ಬಂದ ಎಲ್ಲ ಪಕ್ಷಗಳು ಸಮಾಜವನ್ನು ತುಳಿಯುತ್ತಲೇ ಇವೆ. ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಒಳಮೀಸಲು ಜಾರಿ ಮಾಡುವುದಾಗಿ ಭರವಸೆ ನೀಡಿ, ಮಾದಿಗರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿದೆ. ಆದರೆ ಈವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀಸಲಾತಿ ಜಾರಿ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.ಇದರಿಂದ ಸಿಡಿಮಿಡಿಗೊಂಡ ಸಂಸದ ಸಾಗರ ಖಂಡ್ರೆ, ಮೀಸಲಾತಿ ಜಾರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರುವುದು ಸರಿಯಲ್ಲ. ಕೇವಲ ಸಿಎಂ ಅವರನ್ನೇ ಏಕೆ ಬೊಟ್ಟು ಮಾಡಿ ತೋರಿಸುತ್ತಿರಿ. ನಮ್ಮ ಸರ್ಕಾರ ಸಮಾಜಕ್ಕೆ ನ್ಯಾಯ ಕಲ್ಪಿಸಲು ಶ್ರಮಿಸುತ್ತಿದ್ದೆ. ನೀವು ಯಾವುದನ್ನು ತಿಳಿಯದೇ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿ ವೇದಿಕೆಯಿಂದ ನಿರ್ಗಮಿಸಲು ಮುಂದಾದರು. ಈ ವೇಳೆ ವೇದಿಕೆಯಲ್ಲಿ ಗಣ್ಯರು ಸಂಸದರನ್ನು ಸಮಾಧಾನಪಡಿಸಿ ವಾತಾವರಣ ತಿಳಿಗೊಳಿಸಿದರು
ಒಳ ಮೀಸಲಾತಿ ಕೇಳುವುದು ಸಮಾಜದ ಹಕ್ಕಾಗಿದ್ದು, ತಮ್ಮ ಹಕ್ಕು ಪಡೆಯಲು ಯಾವುದೇ ಪದ ನಾಯಕನನ್ನು ರ್ನಿಭಿತಿಯಿಂದ ಪ್ರಶ್ನಿಸುವ ಅಧಿಕಾರ ಮಾದಿಗ ಸಮಾಜಕ್ಕಿದೆ. ಮಾದಿಗ ಸಮಾಜದ ಸುಂದರ ಭವನ ನಿರ್ಮಾಣಕ್ಕೆ 50 ಲ ರೂ. ಅನುದಾನ ನೀಡುವೆ.