ಸಮಾಜದಲ್ಲಿ ರೋಟರಿ ಕಾರ್ಯ ದೊಡ್ಡದು

ಬಸವಕಲ್ಯಾಣ ಇತ್ತೀಚೆಗೆ ನಡೆದ ರೋಟರಿ ಸಂಸ್ಥೆಯ 2026-27 ಸಾಲಿಗೆ ಪದಾಧಿಕಾರಿಗಳ ಪದಗ್ರಹಣಸಮಾರಂಭವನ್ನು ಪದಗ್ರಹಣಾಧಿಕಾರಿ ಡಾ.ರಘು ಕೃಷ್ಣಮೂರ್ತಿ ಉದ್ಘಾಟಿಸಿದರು. ನಿತಿನ್​ ಕರ್ಪೂರ, ಉಮೇಶ ಶೀಲವಂತ, ಪ್ರಭುಲಿಂಗ ರಾಸೂರೆ, ದತ್ತಾತ್ರೇಯ ಪರಶುರಾಮ, ನಾಗನಾಥ ಮುಕ್ತಾ ಇತರರಿದ್ದರು.
ಬಸವಕಲ್ಯಾಣ ಇತ್ತೀಚೆಗೆ ನಡೆದ ರೋಟರಿ ಸಂಸ್ಥೆಯ 2026-27 ಸಾಲಿಗೆ ಪದಾಧಿಕಾರಿಗಳ ಪದಗ್ರಹಣಸಮಾರಂಭವನ್ನು ಪದಗ್ರಹಣಾಧಿಕಾರಿ ಡಾ.ರಘು ಕೃಷ್ಣಮೂರ್ತಿ ಉದ್ಘಾಟಿಸಿದರು. ನಿತಿನ್​ ಕರ್ಪೂರ, ಉಮೇಶ ಶೀಲವಂತ, ಪ್ರಭುಲಿಂಗ ರಾಸೂರೆ, ದತ್ತಾತ್ರೇಯ ಪರಶುರಾಮ, ನಾಗನಾಥ ಮುಕ್ತಾ ಇತರರಿದ್ದರು.
Published on
ಬಸವಕಲ್ಯಾಣ: ರೋಟರಿ ಕ್ಲಬ್​ ಜಾಗತಿಕ ಸಾಮಾಜಿಕ ಸೇವಾ ಸಂಸ್ಥೆಯಾಗಿದ್ದು ಎಂದು ಪದಗ್ರಹಣಾಧಿಕಾರಿ ಡಾ.ರಘು ಕೃಷ್ಣಮೂರ್ತಿ ಹೇಳಿದರು.
ನಗರದಲ್ಲಿ ಇತ್ತೀಚೆಗೆ ನಡೆದ ರೋಟರಿ ಸಂಸ್ಥೆಯ 2026-27 ಸಾಲಿಗೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸೇವಾ ಯೋಜನೆಗಳ ಮೂಲಕ ದುರ್ಬಲ ವರ್ಗದವರಿಗೆ ಮಹಿಳೆಯರಿಗೆ, ಬಡ ಜನರ ಜೀವನ ಮುನ್ನೆಡಸಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ ಕ್ಲಬ್​ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಹಾಯಕ ಗವರ್ನರ್​ ನಿತಿನ್​ ಕರ್ಪೂರ ಮಾತನಾಡಿ, ಬಸವಕಲ್ಯಾಣ ವ್ಯಾಪ್ತಿಯಲ್ಲಿ ಸಾಕ್ಷರತೆ, ರಸ್ತೆ ಸುರಕ್ಷತೆ, ರಕ್ತದಾನ ಮತ್ತು ಅಂಗಾಂಗ ದಾನ, ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆಯ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ಹೊಸದಾಗಿ ಆಯ್ಕೆಯಾಗಿರುವ ಬಸವಕಲ್ಯಾಣ ರೋಟರಿ ಕ್ಲಬ್​ನ ಅಧ್ಯಕ್ಷ ಉಮೇಶ ಶೀಲವಂತ ಮತ್ತು ಕಾರ್ಯದರ್ಶಿ ಪ್ರಭುಲಿಂಗ ರಾಸೂರೆ ಇವರಿಗೆ ನಿರ್ಗಮಿತ ಅಧ್ಯಕ್ಷ ನಾಗನಾಥ ಮುಕ್ತಾ ಅಧಿಕಾರ ಹಸ್ತಾಂತರಿಸಿದರು.
ದತ್ತಾತ್ರೇಯ ಪರಶುರಾಮ ಮಾತನಾಡಿದರು. ಪ್ರಮುಖರಾದ ಎಂ.ಜಿ ಮಹಾಜನ, ಭೋಜಪ್ಪ ಕೋರಕೆ, ಡಾ.ಸದಾನಂದ ಪಾಟೀಲ, ಡಾ.ರಮೇಶ ಮಂಠಾಳೆ, ಡಾ.ಆನಂದ ಪಾಟೀಲ, ಸೂರ್ಯಕಾಂತ ಮಠ, ರಾಜಕುಮಾರ ಸುಗುರೆ, ಶರಣು ಪವಾಡಶೆಟ್ಟಿ, ಪರಮೇಶ್ವರ ಬಿರಾದಾರ, ಬಸವರಾಜ ಗೋಳೆದ, ಮಲ್ಲಿನಾಥ ಮಾಳೆಗಾಂವ, ಅಮರ ಕಾಮಶೆಟ್ಟಿ, ಶಾಲಿವಾನ ಜೋತೆಪ್ಪ, ಇದ್ದರು. ನಾಗನಾಥ ಮುಕ್ತಾ ಸ್ವಾಗತಿಸಿ ವಾರ್ಷಿಕ ವರದಿ ಓದಿದರು. ಡಾ.ಬಾಲಕೃಷ್ಣ ರಾಠೋಡ್​ ವಂದಿಸಿದರು. ಸಿದ್ರಾಮ ಮನಾಗುಂದೆ ನಿರೂಪಣೆ ಮಾಡಿದರು. ಭಾರತಿ ಮತ್ತು ವೈಷ್ಣವಿ ಸ್ವಾಗತ ಗೀತೆ ಹಾಡಿದರು.
"

ಸಂಸ್ಥೆ ವತಿಯಿಂದ ಸಮಾಜಿಮುಖಿ ಚಟುವಟಿಕೆಗಳನ್ನು ಆಯೋಜಿಸುವ ಮೂಲ ಮಾನವೀಯ ಸೇವೆಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಕಟ್ಟಡ ಕಾರ್ಮಿಕ ಕೌಶಲ ತರಬೇತಿ ಶಿಬಿರ ಮುಂತಾದ ಸಮಾಜ ಕಾರ್ಯ ಹಮ್ಮಿಕೊಳ್ಳಲಾಗುವದು

— > ಉಮೇಶ ಶೀಲವಂತ ಅಧ್ಯಕ್ಷ, ರೋಟರಿ ಕ್ಲಬ್​ ಬಸವಕಲ್ಯಾಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net