5.8 ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಕಟಕೋಳದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಅಶೋಕ ಪಟ್ಟಣ ಭೂಮಿಪೂಜೆ ನೆರವೇರಿಸಿದರು. ಎಂ.ಎನ್​.ದೇಸಾಯಿ, ಬಿ.ಎ.ದೇಸಾಯಿ, ಎಸ್​.ಪಿ.ಮುನೋಳಿ, ಸೋಮಶೇಖರ ಸಿಂಗಾರಕೊಪ್ಪ ಇತರರಿದ್ದರು.
ಕಟಕೋಳದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಅಶೋಕ ಪಟ್ಟಣ ಭೂಮಿಪೂಜೆ ನೆರವೇರಿಸಿದರು. ಎಂ.ಎನ್​.ದೇಸಾಯಿ, ಬಿ.ಎ.ದೇಸಾಯಿ, ಎಸ್​.ಪಿ.ಮುನೋಳಿ, ಸೋಮಶೇಖರ ಸಿಂಗಾರಕೊಪ್ಪ ಇತರರಿದ್ದರು.
Published on

ರಾಮದುರ್ಗ: ಗ್ರಾಮೀಣ ಪ್ರದೇಶದ ಮೂಲ ಸೌಕರ್ಯ ಬಲಪಡಿಸುವುದು ಪ್ರಮುಖ ಗುರಿಯಾಗಿದ್ದು, ಹಂತ ಹಂತವಾಗಿ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ನಗರದಲ್ಲಿ 5.8 ಕೋಟಿ ರೂ. ವೆಚ್ಚದ ರಸ್ತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಾಮಗಾರಿಗಳಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನ ಉದಪುಡಿ ಗ್ರಾಮದಿಂದ ಸಕ್ಕರೆ ಕಾರ್ಖಾನೆ ಮಾರ್ಗದ 2.25 ಕೋಟಿ ರೂ. ವೆಚ್ಚದ ರಸ್ತೆ, ಕಟಕೋಳ ಗ್ರಾಮದಿಂದ ಕೋರಕೊಪ್ಪ ಸಂಪರ್ಕ ಕಲ್ಪಿಸುವ 3.07 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಹಾಗೂ ಹಿರೇಕೊಪ್ಪ ಕೆ.ಎಸ್​.ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ನಿಗದಿತ ಅವ-ಧಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಮುಖಂಡ ಎಂ.ಎನ್​.ದೇಸಾಯಿ, ಬಿ.ಎ.ದೇಸಾಯಿ, ಎಸ್​.ಪಿ.ಮುನೋಳಿ, ಸೋಮಶೇಖರ ಸಿಂಗಾರಕೊಪ್ಪ, ಪರಪ್ಪ ಜಂಗವಾಡ, ಶಿವಬಸಪ್ಪ ಅಡ್ಡಣಗಿ, ಬಾಳಯ್ಯ ಹಿರೇಮಠ, ಅಜ್ಜಪ್ಪ ಪಾಣಿ, ಸುಪ್ರಿತ ಪಾಟೀಲ, ಚೇತನ ದೇಸಾಯಿ, ಗುತ್ತಿಗೆದಾರರರಾದ ಎಂ.ಎಂ. ಆತಾರ, ಪೀರು ತಳವಾರ, ಟಿಎಚ್​.ಓ ಡಾ. ಆರ್​.ಎಸ್​.ಬಂತಿ, ಲೋಕೋಪಯೋಗಿ ಇಲಾಖೆ ಎಇಇ ಎನ್​. ರವಿಕುಮಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net