ಕೃಷಿ ಚಟುವಟಿಕೆಗಳಿಗೆ ರಸ್ತೆ ಅಭಿವೃದ್ಧಿ ಅವಶ್ಯಕ

ಭಾಲ್ಕಿಯ ಲೆಕ್ಚರ್​ ಕಾಲನಿಯಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಸಂಸದ ಸಾಗರ ಖಂಡ್ರೆ ಚಾಲನೆ ನೀಡಿದರು. ಬಸವರಾಜ ವಂಕೆ, ವಿಜಯಕುಮಾರ ರಾಜಭವನ, ಕುಪೇಂದ್ರ ವಂಕೆ, ಚಂದ್ರಶೇಖರ ವಂಕೆ, ರಾಹುಲ ಪೂಜಾರಿ, ಸಂಜಕುಮಾರ ವಂಕೆ, ಚನ್ನಬಸವ ವಂಕೆ ಇತರರಿದ್ದರು.
ಭಾಲ್ಕಿಯ ಲೆಕ್ಚರ್​ ಕಾಲನಿಯಲ್ಲಿ 50 ಲಕ್ಷ ರೂ. ಅನುದಾನದಲ್ಲಿ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಸಂಸದ ಸಾಗರ ಖಂಡ್ರೆ ಚಾಲನೆ ನೀಡಿದರು. ಬಸವರಾಜ ವಂಕೆ, ವಿಜಯಕುಮಾರ ರಾಜಭವನ, ಕುಪೇಂದ್ರ ವಂಕೆ, ಚಂದ್ರಶೇಖರ ವಂಕೆ, ರಾಹುಲ ಪೂಜಾರಿ, ಸಂಜಕುಮಾರ ವಂಕೆ, ಚನ್ನಬಸವ ವಂಕೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಸಾಗರ ಖಂಡ್ರೆ ಅಭಿಮತ > ಭಾಲ್ಕಿಯಲ್ಲಿ ಕಾಮಗಾರಿಗೆ ಚಾಲನೆ
ಭಾಲ್ಕಿ: ರೈತರ ಕೃಷಿ ಚಟುವಟಿಕೆಗಳಿಗೆ ಗ್ರಾಮೀಣ ಮತ್ತು ಜಮೀನು ರಸ್ತೆಗಳು ಅಭಿವೃದ್ಧಿ ಪಡಿಸುವುದು ಅತ್ಯಂತ ಅವಶ್ಯಕ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ನಗರದ ಲೆಕ್ಚರ್​ ಕಾಲನಿಯಲ್ಲಿ ಈಚೆಗೆ 50 ಲಕ್ಷ ರೂ.ಅನುದಾನದಲ್ಲಿ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಉತ್ತಮ ರಸ್ತೆ ಸೌಲಭ್ಯವಿದ್ದರೆ ಮಾತ್ರ ರೈತರು ಬಿತ್ತನೆ ಬೀಜ, ಗೊಬ್ಬರವನ್ನು ಸಕಾಲದಲ್ಲಿ ಜಮೀನಿಗೆ ತರಲು ಹಾಗೂ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸುಲಭವಾಗಿ ಸಾಗಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಮಾರ್ಗದರ್ಶನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಅನುದಾನ ಸದ್ಬಳಕೆ ಮಾಡಿಕೊಂಡು ತಾಲೂಕು ಸೇರಿ ಜಿಲ್ಲೆಯಾದ್ಯಂತ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ,ಮಾಜಿ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಪ್ರಮುಖರಾದ ಕುಪೇಂದ್ರ ವಂಕೆ, ಚಂದ್ರಶೇಖರ ವಂಕೆ, ರಾಹುಲ ಪೂಜಾರಿ, ಸಂಜಕುಮಾರ ವಂಕೆ, ಚನ್ನಬಸವ ವಂಕೆ ಇತರರಿದ್ದರು.
"

ರೈತರ ಹೊಲಗಳ ರಸ್ತೆ ಅಭಿವೃದ್ಧಿಯಿಂದ ಸಾರಿಗೆ ವೆಚ್ಚ ಕಡಿಮೆಯಾಗಿ ರೈತರಿಗೆ ಹೆಚ್ಚಿನ ಲಾಭ ಸಿಗುತ್ತದೆ. ರಸಗೊಬ್ಬರ, ಕೀಟನಾಶಕ ಹಾಗೂ ಯಂತ್ರೋಪಕರಣಗಳನ್ನು ಜಮೀನಿಗೆ ತರಲು ಹೆಚ್ಚು ಅನುಕೂಲವಾಗುತ್ತದೆ.

— - > ಸಾಗರ ಖಂಡ್ರೆ ಸಂಸದ ಬೀದರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net