ರಸ್ತೆ ಅಪಘಾತ ತಡೆ ದಿನಾಚರಣೆ ಮತ್ತು ರಸ್ತೆ ಸಂಚಾರ ಸಂತ್ರಸ್ಥರ ಜಾಗೃತಿ ಕಾರ್ಯಕ್ರಮ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ  ‘ರಸ್ತೆ ಅಪಘಾತ ತಡೆ ದಿನಾಚರಣೆ ಮತ್ತು ರಸ್ತೆ ಸಂಚಾರ ಸಂತ್ರಸ್ಥರ ಜಾಗೃತಿ’ ಕಾರ್ಯಕ್ರಮದಲ್ಲಿ ಬೆಂ.ನಗರ ಪೊಲೀಸ್ ಸಹಾಯಕ ಉಪ ಆಯುಕ್ತ ಕೆ.ಎಂ. ರಮೇಶ್, ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಸ್. ವೆಂಕಟರಾಘವ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅನಿಲ್ ಭಾರದ್ವಾಜ್, ರೆಡ್‌ಕ್ರಾಸ್ ಸಭಾಪತಿ ಎ.ಬಿ. ಬಾಲಕೃಷ್ಣಶೆಟ್ಟಿ, ಖಜಾಂಚಿ ಅಶ್ವತ್ಥನಾರಾಯಣ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಸಂಚಾರ ಕುರಿತು ಜಾಗೃತಿ
  • ರಸ್ತೆ ಅಪಘಾತ ತಡೆ ದಿನಾಚರಣೆ
  • ಭಾರತೀಯ ರೆಡ್ ಕ್ರಾಸ್ ವತಿಯಿಂದ ಅರಿವು
ಬೆಂಗಳೂರು: ಶಾಲಾ ಹಂತದ ದಿನಗಳಲ್ಲೇ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮ ಪಾಲನೆ ಬಗೆಗೆ ಕಡ್ಡಾಯವಾಗಿ ಕಲಿಸಬೇಕಿದೆ ಎಂದು ಬೆಂ. ನಗರ ಪಲೀಸ್ ಸಹಾಯಕ ಉಪ ಆಯುಕ್ತ ಕೆ.ಎಂ. ರಮೇಶ್ ಹೇಳಿದರು.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ರೆಡ್ ಕ್ರಾಸ್ ಬೆಂಗಳೂರು ಸಹಯೋಗದಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ರಸ್ತೆ ಅಪಘಾತ ತಡೆ ದಿನಾಚರಣೆ ಮತ್ತು ರಸ್ತೆ ಸಂಚಾರ ಸಂತ್ರಸ್ಥರ ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆಯಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಕೆಲವೊಂದಿಷ್ಟು ಜನರಿಗೆ ಸಂಚಾರಿ ನಿಯಮಗಳ ಪರಿಚಯ ಇರುವುದಿಲ್ಲ. ಅಂತಹವರಿಂದ ರಸ್ತೆಗಳಲ್ಲೇ ಜಗಳಗಳು ನಡೆಯುತ್ತಿವೆ. ಇದು ತಪ್ಪಬೇಕೆಂದರೆ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳನ್ನು ಪರಿಚಯಿಸಬೇಕು. ಇದರಿಂದ ಅಪಘಾತ ಪ್ರಮಾಣ ತಗ್ಗಿಸಬಹುದಾಗಿದೆ ಎಂದರು.
ವಾಹನ ಚಾಲನೆ ಮಾಡುವ ಸಂದರ್ಭ ಚಾಲಕರು ಮೊಬೈಲ್ ಬಳಸಬಾರದು, ಇದರಿಂದ ವಾಹನ ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗದೆ ಅಪಘಾತಗಳಿಗೆ ಕಾರಣವಾಗುತ್ತದೆ. ಅನೇಕ ಜೀವಗಳನ್ನು ಕಳೆದುಕೊಳ್ಳಲು ವಾಹನ ಸಂಚಾರ ವೇಳೆ ಮೊಬೈಲ್ ಬಳಕೆಯೂ ಪ್ರಮುಖ ಕಾರಣವಾಗುತ್ತಿದೆ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಸ್. ವೆಂಕಟರಾಘವ ಮಾತನಾಡಿ, ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟನೆ ಹೆಚ್ಚಾಗುತ್ತಿದೆ. ಹಾಗಾಗಿ ಎಲ್ಲರೂ ಸ್ವಂತ ವಾಹನ ಬಳಕೆ ಕಡಿಮೆ ಮಾಡಿ ಬಿಎಂಟಿಸಿ ಮತ್ತು ಮೆಟ್ರೋ ಸೇರಿ ಸಾರ್ವಜನಿಕ ವಾಹನಗಳ ಬಳಕೆ ಮಾಡುವಂತೆ ಸಲಹೆ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅನಿಲ್ ಭಾರದ್ವಾಜ್, ರೆಡ್‌ಕ್ರಾಸ್ ಸಭಾಪತಿ ಎ.ಬಿ. ಬಾಲಕೃಷ್ಣಶೆಟ್ಟಿ, ಖಜಾಂಚಿ ಅಶ್ವತ್ಥನಾರಾಯಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net