ಕಳ್ಳ ಸಾಗಣೆ ರು.5.95 ಲಕ್ಷದ ಅಕ್ಕಿ ಜಪ್ತಿ

ಅಫಜಲಪುರದಲ್ಲಿ ಅಕ್ಕಿ ಕಳ್ಳ ಸಾಗಣೆ ಮಾಡುತ್ತಿದ್ದ ವಾಹನ.
ಅಫಜಲಪುರದಲ್ಲಿ ಅಕ್ಕಿ ಕಳ್ಳ ಸಾಗಣೆ ಮಾಡುತ್ತಿದ್ದ ವಾಹನ.
Published on

ಅಫಜಲಪುರ: ಕಳ್ಳ ಸಾಗಣೆ ಮಾಡುತ್ತಿದ್ದ ಅನ್ನಭಾಗ್ಯ ಯೋಜನೆ 5.95 ಲಕ್ಷ ರೂ. ಮೌಲ್ಯದ 350 ಚೀಲ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿ ನಾಗನಾಥ ಚೋಪಡೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಸೋಮವಾರ ಜೇರಟಗಿ, ಮೋರಟಗಿ, ಘತ್ತರಗಿ ಮಾರ್ಗವಾಗಿ ಮಹಾರಾಷ್ಟ್ರ ಕಾಳಸಂತೆಯಲ್ಲಿ ಮಾರಲು ಸಾಗಿಸುತ್ತಿದ್ದಾಗ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಡೆದು ಅಕ್ಕಿಯೊಂದಿಗೆ ವಾಹನ ಸಹ ಜಪ್ತಿ ಮಾಡಿ ಚಾಲಕ ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net