ಈಗಾಗಲೇ ತಾಲೂಕು ವ್ಯಾಪ್ತಿಯಲ್ಲಿರುವ ಭೀಮಾ ನದಿಗೆ 135ಕ್ಕೂ ಹೆಚ್ಚು ಕಿಮೀ ನೀರು ಹರಿಯುತ್ತಿದ್ದು, ಅಲ್ಪಸ್ವಲ್ಪ ಉಳಿದ ಬೆಳೆ ಕೈಗೆ ಬರಬಹುದು ಎಂಬ ಆಶಾಭಾವ ರೈತರಲ್ಲಿ ಚಿಗುರೊಡೆದಿದೆ. ಕಾಲುವೆಗಳ ಮುಖಾಂತರ ಕೆರೆಗಳನ್ನು ಭರ್ತಿ ಮಾಡಿದರೆ, ನೀರಿಲ್ಲದೆ ಬತ್ತಿದ್ದ ಕೊಳವೆ ಬಾವಿ, ತೆರೆದ ಬಾವಿಗಳ ಅಂತರ್ಜಲ ವೃದ್ಧಿಯಾಗಲಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆ ಆಗಲಿದೆ.