ಪಿಂಚಣಿ ವಿಳಂಬಕ್ಕೆ ನಿವೃತ್ತರ ಆಕ್ರೋಶ

ಪಿಂಚಣಿ ಬಿಡುಗಡೆ ವಿಳಂಬ ಖಂಡಿಸಿ ಗುಲ್ಬರ್ಗ ವಿವಿ ನಿವೃತ್ತ ನೌಕರರ ಸಂದ ಪದಾಧಿಕಾರಿಗಳು ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಂದ ಉಪಾಧ್ಯಕ್ಷ ಸಿದ್ರಾಮಪ್ಪ ಹೊದಲೂರ, ಪದಾಧಿಕಾರಿಗಳಾದ ಆರ್​.ಎಸ್​.ತಲ್ಲಳ್ಳಿ, ಸಿ.ಎಸ್​.ಅರಿಕೇರಿ, ರಾಮಚಂದ್ರ ಪಿ.ರೇಣಕೆ, ಸಿದ್ರಾಮ ಬೆಳಮಗಿ, ವಿ.ಬಿ.ಕನ್ನೂರ, ಎಸ್​.ಮಲ್ಲಿಕಾರ್ಜುನ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪಿಂಚಣಿ ವಿಳಂಬಕ್ಕೆ ನಿವೃತ್ತರ ಆಕ್ರೋಶ
ಕಲಬುರಗಿ: ಪ್ರತಿ ತಿಂಗಳು ಸಕಾಲಕ್ಕೆ ಪಿಂಚಣಿ ಪಾವತಿಸದೆ ವಿಳಂಬ ನೀತಿ ಖಂಡಿಸಿ ಗುಲ್ಬರ್ಗ ವಿಶ್ವವಿದ್ಯಾಲಯ ನಿವೃತ್ತ ನೌಕರರ ಸಂಘದಿಂದ ವಿವಿ ಆಡಳಿತ ಕಚೇರಿ ಎದುರು ಗುರುವಾರ ನಡೆಯಿತು.
ಸಂಘದ ಮುಖಂಡ ಎಂ.ಬಿ.ಸಜ್ಜನ್​ ಮಾತನಾಡಿ, ವಿವಿಯಲ್ಲಿ 600ಕ್ಕೂ ಹೆಚ್ಚು ಶಿಕ್ಷಕ ಹಾಗೂ ಶಿಕ್ಷಕೇತರ ನಿವೃತ್ತ ನೌಕರರಿದ್ದಾರೆ. ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಪಿಂಚಣಿ ಮೊತ್ತ ಪಾವತಿಸದ್ದರಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಜೀವನ ನಿರ್ವಹಣೆಗೆ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
2026ರ ಜೂನ್​ ಪಿಂಚಣಿ ಈವರೆಗೂ ಪಾವತಿಸದಿರುವುದು ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನಿವೃತ್ತಿ ವೇತನ ಸಕಾಲಕ್ಕೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂದ ಉಪಾಧ್ಯಕ್ಷ ಸಿದ್ರಾಮಪ್ಪ ಹೊದಲೂರ, ಪದಾಧಿಕಾರಿಗಳಾದ ಆರ್​.ಎಸ್​. ತಲ್ಲಳ್ಳಿ, ಸಿ.ಎಸ್​. ಅರಿಕೇರಿ, ರಾಮಚಂದ್ರ ಪಿ.ರೇಣಕೆ, ಸಿದ್ರಾಮ ಬೆಳಮಗಿ, ವಿ.ಬಿ. ಕನ್ನೂರ, ಎಸ್​. ಮಲ್ಲಿಕಾರ್ಜುನ ಇತರರಿದ್ದರು. ಬೇಡಿಕೆಗಳ ಮನವಿಪತ್ರವನ್ನು ವಿವಿ ಕುಲಸಚಿವರಿಗೆ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net