ನಿವೃತ್ತ ನೌಕರರ ಸೇವಾನುಭವ ಮಾದರಿ

ಸವದತ್ತಿ ನಗರದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಅಶ್ವತ್ಥ ವೈದ್ಯ, ಡಾ.ವೈ.ಎಂ.ಯಾಕೊಳ್ಳಿ, ಎ.ಎ.ಖಾಜಿ ಇತರರಿದ್ದರು.
ಸವದತ್ತಿ ನಗರದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಅಶ್ವತ್ಥ ವೈದ್ಯ, ಡಾ.ವೈ.ಎಂ.ಯಾಕೊಳ್ಳಿ, ಎ.ಎ.ಖಾಜಿ ಇತರರಿದ್ದರು.
Published on
ಸವದತ್ತಿ: ನಿವೃತ್ತ ನೌಕರರು ಸಮಾಜದ ಅಮೂಲ್ಯ ಸಂಪತ್ತು. ಅವರ ಸೇವಾನುಭವ ಹಾಗೂ ಜೀವನಾನುಭವ
ಯುವ ಪೀಳಿಗೆಗೆ ದಾರಿದೀಪವಾಗಿದೆ ಎಂದು ಉದ್ಯಮಿ ಅಶ್ವತ್ಥ ವೈದ್ಯ ಹೇಳಿದರು.
ನಗರದ ಗುರುಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂದ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ 75 ವರ್ಷ ಪೂರೈಸಿದ ಹಿರಿಯ ಸದಸ್ಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೀರ್ಕಾಲ ಆಡಳಿತ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ ನಿವೃತ್ತ ನೌಕರರ ಕಾರ್ಯ ಮಾದರಿಯಾಗಿದೆ. ಹಿರಿಯ ಸದಸ್ಯರು ನಿವೃತ್ತಿ ಬಳಿಕವೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾರ್ಗದರ್ಶನ ನೀಡುತ್ತಿರುವುದು ಶ್ಲಾನೀಯ ಎಂದರು.
ಸಾಹಿತಿ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿ, ಹಿರಿಯರನ್ನು ಗೌರವಿಸುವುದು ನಾಡಿನ ಸಂಸತಿಯ ಪ್ರತಿಕ. ಅವರ ಸೇವೆ ಸದಾ ಸ್ಮರಿಸಬೇಕು ಎಂದರು.
ನಿವೃತ್ತ ನೌಕರರ ಸಂದ ಜಿಲ್ಲಾಧ್ಯ ಎಸ್​.ಜಿ.ಸಿದ್ನಾಳ, ನೌಕರರ ಏಳಿಗೆಗಾಗಿ ಸಂದಿಂದ ಕೈಗೊಂಡಿರುವ ವಿವಿಧ ಕಾರ್ಯಕ್ರಮ ಕುರಿತು ವಿವರಿಸಿದರು. 75 ವರ್ಷ ಪೂರೈಸಿದ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಬಿಇಒ ಎ.ಎ.ಖಾಜಿ, ಸಿಡಿಪಿಒ ಅಮೃತ ಸಾಣಿಕೊಪ್ಪ, ಸಂದ ತಾಲೂಕಾಧ್ಯಕ್ಷ ಬಿ.ವಿ.ವಾಂಗಿ, ನಾರಾಯಣ ಚಿಂಚೋಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net