ಸ್ಥಗಿತಗೊಂಡ ಮಾಸಾಶನ ಮರು ಆರಂಭಸಿ

ಸ್ಥಗಿತಗೊಂಡಿರುವ ವಿವಿಧ ಮಾಸಾಶನಗಳನ್ನು ಕೂಡಲೇ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೋದ್ದೇಶ ಕ್ಷೇಮಾಭಿವೃದ್ಧಿ ಸಂಘದಿಂದ ಗ್ರೇಡ್​-2 ತಹಸೀಲ್ದಾರ್​ ರಾಜಕುಮಾರ ಮರತೂರಕರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಮಹ್ಮದ್​ ಇಬ್ರಾಹಿಂ, ಜಗದೇವಪ್ಪ ಭಾಗೋಡಿ, ಚಂದ್ರು ಕಾಶಿ, ಮಲ್ಲಿಕಾರ್ಜುನ ನಾಲವಾರ, ಸಂತೋಷ ಕಟ್ಟಿ, ಕಿಶನ್​ ತಾಂಡಾ, ಮಲ್ಲಿನಾಥ ಪಾಟೀಲ್​ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಚಿತ್ತಾಪುರದಲ್ಲಿ ಅಂಗವಿಕಲರ ವಿವಿದೋದ್ದೇಶ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ
ಚಿತ್ತಾಪುರ: ಹಲವು ತಿಂಗಳುಗಳಿಂದ ಸ್ಥಗಿತಗೊಂಡಿರುವ ವೃದ್ಧಾಪ್ಯ, ರಾಷ್ಟ್ರೀಯ ಭದ್ರತಾ  ಯೋಜನೆ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ಮನಸ್ವಿನಿ ಯೋಜನೆಗಳ ಮಾಸಾಶನ ಕೂಡಲೇ ಪ್ರಾರಂಭಿಸಬೇಕು ಎಂದು ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೋದ್ದೇಶ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್​ ಇಬ್ರಾಹಿಂ ಒತ್ತಾಯಿಸಿದರು.
ಈ ಕುರಿತು ಗ್ರೇಡ್​ 2 ತಹಸೀಲ್ದಾರ್​ ರಾಜಕುಮಾರ ಮರತೂರಕರ್​ ಅವರಿಗೆ ಮನವಿಪತ್ರ ಸಲ್ಲಿಸಿದ ಅವರು, ಕಳೆದ ಐದು ತಿಂಗಳುಗಳಿಂದ ಪೆನ್ಶನ್​ ಬರುತ್ತಿಲ್ಲ. ಇದರಿಂದ ಫಲಾನುಭವಿಗಳು ತಹಸಿಲ್​ ಹಾಗೂ ಅಂಚೆ ಕಚೇರಿಗೆ ಅಲದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವನ ನಡೆಸುವುದು ದುಸ್ತರವಾಗಿದೆ. ಯುಡಿಐಡಿ ಕಾರ್ಡ್​ ಇದ್ದರೂ ಅಂಗವಿಕಲರಿಗೆ ಮಾಸಾಶನ ಬರುತ್ತಿಲ್ಲ ಎಂದು ದೂರಿದರು.
ಪ್ರಮುಖರಾದ ಜಗದೇವಪ್ಪ ಭಾಗೋಡಿ, ಚಂದ್ರು ಕಾಶಿ, ಮಲ್ಲಿಕಾರ್ಜುನ ನಾಲವಾರ, ಸಂತೋಷ ಕಟ್ಟಿ, ಕಿಶನ್​ ತಾಂಡಾ, ಮಲ್ಲಿನಾಥ ಪಾಟೀಲ, ಕಲ್ಯಾಣಿ ಭೀಮಶಾ, ರವೀಂದ್ರ ತೇಲಕರ್​, ಸಾಬಣ್ಣ ಬಿಹರಪೇಟ್​, ಮೋಗಲಪ್ಪ ಕುಂಬಾರ, ಈಶ್ವರ ಗೊಂಡಗೊ, ಅಂಜುಮ್​ ಖಾಜಿ, ಮಂಜೂರು ಸಾಬ್​, ಮಲ್ಲಿಕಾರ್ಜುನ ಮುಗುಳಕರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net