ಕೇಂದ್ರ ಸ್ಥಾನದಲ್ಲಿದ್ದು ಸಮಸ್ಯೆ ಸ್ಪಂದಿಸಿ

ನಿಂಬರ್ಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಪಂ ಸಿಇಒ ರಾಹುಲ್​ ಸಂಕನೂರ ಭೇಟಿ ನೀಡಿ ಪರಿಶೀಲಿಸಿದರು. ಮಾನಪ್ಪ ಕಟ್ಟಿಮನಿ, ಸಂಗಮೇಶ ಬಿರಾದಾರ ಇತರರಿದ್ದರು.
ನಿಂಬರ್ಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಪಂ ಸಿಇಒ ರಾಹುಲ್​ ಸಂಕನೂರ ಭೇಟಿ ನೀಡಿ ಪರಿಶೀಲಿಸಿದರು. ಮಾನಪ್ಪ ಕಟ್ಟಿಮನಿ, ಸಂಗಮೇಶ ಬಿರಾದಾರ ಇತರರಿದ್ದರು.
Published on
ಆಳಂದ: ಪಂಚಾಯಿತಿ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್​ ಸಂಕನೂರ ಹೇಳಿದರು. ನಿಂಬರ್ಗಾ, ನಿಂಬಾಳ, ಮಾದನಹಿಪ್ಪರಗಾ, ದರ್ಗಾಶಿರೂರ ಸೇರಿ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಬಳಿಕ ಸಂಜೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಗ್ರಾಪಂ ಮಟ್ಟದಲ್ಲಿರುವ ಅಧಿಕಾರಿ ಕೇಂದ್ರ ಸ್ಥಾನದಲ್ಲಿರಬೇಕು. ಮೊಬೈಲ್​ ಸ್ವಿಚ್​ ಆಫ್​ ಮಾಡದೆ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು. ಅಧಿಕಾರಿಗಳಾದ ಮಾನಪ್ಪ ಕಟ್ಟಿಮನಿ, ಸಂಗಮೇಶ ಬಿರಾದಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net