ಗುರು-ಹಿರಿಯರಿಗೆ ಗೌರವ ಕೊಡಿ

ಕಲಬುರಗಿಯ ಡಾ.ಎಸ್​.ಎಂ.ಪಂಡಿತ ರಂಗಮಂದಿರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಗುರುಕುಲ ಪದವಿಪೂರ್ವ ವಿಾನ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಡಾ.ಅಪೂರ್ವ ಮುಕುಂದ ಚಾಲನೆ ನೀಡಿದರು. ರವಿಕುಮಾರ್​ ವಲ್ಲಂಶೆಟ್ಟಿ, ಮಂಗೇಶಕುಮಾರ ಖಡ್ಕೆ, ಎಂ.ಎಸ್​.ಮುಕುಂದ, ರಮೇಶ ಕುಲಕರ್ಣಿ ಇತರರಿದ್ದರು.
ಕಲಬುರಗಿಯ ಡಾ.ಎಸ್​.ಎಂ.ಪಂಡಿತ ರಂಗಮಂದಿರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಗುರುಕುಲ ಪದವಿಪೂರ್ವ ವಿಾನ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಡಾ.ಅಪೂರ್ವ ಮುಕುಂದ ಚಾಲನೆ ನೀಡಿದರು. ರವಿಕುಮಾರ್​ ವಲ್ಲಂಶೆಟ್ಟಿ, ಮಂಗೇಶಕುಮಾರ ಖಡ್ಕೆ, ಎಂ.ಎಸ್​.ಮುಕುಂದ, ರಮೇಶ ಕುಲಕರ್ಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಅಪೂರ್ವ ಮುಕುಂದ ಸಲಹೆ
  • ಗುರುಕುಲ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ಕಲಬುರಗಿ: ವಿದ್ಯಾರ್ಥಿಗಳು ಅಂಕಗಳಿಗಿಂತ ಗುರಿಗೆ ಆದ್ಯತೆ ನೀಡಬೇಕು. ತಂದೆ-ತಾಯಿ, ಶಿಕ್ಷಕರ ಬಗ್ಗೆ ಅಭಿಮಾನ, ಗೌರವ ಹೊಂದಿರಬೇಕು ಎಂದು ನ್ಯಾಚುರೋಪತಿ ವೈದ್ಯೆ ಡಾ.ಅಪೂರ್ವ ಮುಕುಂದ ಕರೆ ನೀಡಿದರು.
ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಜಾಜಿ ಶಿಕ್ಷಣ ಸಂಸ್ಥೆಯ ಗುರುಕುಲ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂದಿನ ಸಮಾಜ ನಿಮ್ಮ ಅಂಕಗಳನ್ನು ಕೇಳುವುದಿಲ್ಲ. ನಿಮ್ಮಲ್ಲಿರುವ ಪ್ರತಿಭೆ ಮತ್ತು  ಜ್ಞಾನಕ್ಕೆ ಮಹತ್ವ ದೊರೆಯುತ್ತದೆ. ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳ ಸಮಸ್ಯೆ ಬಹಳಷ್ಟು ಕಂಡುಬರುತ್ತಿವೆ. ಮಾನಸಿಕ ಒತ್ತಡಕ್ಕೆ ಒಳಗಾಗದೆ ಏಕಾಗ್ರತೆಯಿಂದ ಅಭ್ಯಾಸ ಮಾಡುವ ಮೂಲಕ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. 
ಪ್ರಾಂಶುಪಾಲ ರವಿಕುಮಾರ ವಲ್ಲಂಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಎಂದರೆ ಪ್ರಶ್ನೆ ಕೇಳುವುದರಿಂದ ಪ್ರಾರಂಭವಾಗಿ ಉತ್ತರ ಸಿಗುವವರೆಗೂ ನಿರಂತರವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೊರೆಯುವ ಅವಕಾಶ ಯಾವತ್ತಿಗೂ ಕಳೆದುಕೊಳ್ಳಬಾರದು ಎಂದರು.
ಉಪ ಪ್ರಾಂಶುಪಾಲ ಮಂಗೇಶಕುಮಾರ್​ ಖಡ್ಕೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧನೆ ಮಾಡಿದಾಗ ಗುರುಗಳು ತುಂಬಾ ಹೆಮ್ಮೆ ಪಡುತ್ತಾರೆ. ಗುರುಕುಲ ಒಂದು ವಿದ್ಯಾಲಯ ಮಾತ್ರವಲ್ಲದೆ ಪರಿವಾರವಾಗಿದೆ. ಅನೇಕರು ಜೀವನದಲ್ಲಿ ಹಲವು ಹೋರಾಟ, ಸಂಕಷ್ಟಗಳ ಮಧ್ಯೆ ಸಾಧನೆ ಮಾಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳೂ ಎದುರಾಗುವ ಸಮಸ್ಯೆ ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಎಂ.ಎಸ್​.ಮುಕುಂದ ಅಧ್ಯತೆ ವಹಿಸಿದ್ದರು. ಮಾನವ ಸಂಪನ್ಮೂಲ ಮುಖ್ಯಸ್ಥ ರಮೇಶ ಕುಲಕರ್ಣಿ ಉಪಸ್ಥಿತರಿದ್ದರು.
"

ಅವಕಾಶಗಳ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ಮಾಡಿ ಕಾಲೇಜಿನ ಕೀರ್ತಿ ಹೆಚ್ಚಿಸಬೇಕು. ಕಲಿಕೆಗೆ ವಯಸ್ಸಿನ ಮಿತಿ ಇಲ್ಲ, ಇದೊಂದು ನಿರಂತರ ಪ್ರಕ್ರಿಯೆ.

— > ರವಿಕುಮಾರ ವಲ್ಲಂಶೆಟ್ಟಿ, ಪ್ರಾಚಾರ್ಯ, ಗುರುಕುಲ ಪಿಯು ಕಾಲೇಜು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net