ಮಿರಿಯಾಣದಲ್ಲಿ ನೀರಿನ ಸಮಸ್ಯೆ ಬಗೆಹರಿಸಿ

ಮಿರಿಯಾಣದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು, ಚಿಂಚೋಳಿ ಬರಪೀಡಿತ ತಾಲೂಕು ಘೋಷಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಿರಿಯಾಣದಲ್ಲಿ ಚಿಂಚೋಳಿ- ತಾಂಡೂರ ಹೆದ್ದಾರಿಯಲ್ಲಿ ಸಂಚಾರ ತಡೆದು ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಸಿ ತಾಪಂ ಸಿಬ್ಬಂದಿಗೆ ಮನವಿಪತ್ರ ಸಲ್ಲಿಸಲಾಯಿತು. ಶರಣಬಸಪ್ಪ ಮಮಶೆಟ್ಟಿ, ಜಾಫರ್​ಖಾನ್​ ಮಿರಿಯಾಣ, ರತ್ನಮ್ಮ, ಬಸಮ್ಮ, ಅನಿತಾ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ
  • ತಾಪಂ ಸಿಬ್ಬಂದಿಗೆ ಮನವಿ ಸಲ್ಲಿಕೆ
ಚಿಂಚೋಳಿ: ಸಕಾಲಕ್ಕೆ ಮಳೆ ಆಗದೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ತಾಲೂಕವನ್ನು ಬರಪೀಡಿತ ಪ್ರದೇಶ ಘೋಷಿಸಿ ಬೆಳೆ ಪರಿಹಾರ ನೀಡಬೇಕು. ಕೃಷಿ ಸಾಲಮನ್ನಾ ಮಾಡಬೇಕು ಎಂದು ಕರ್ನಾಟಕ ಪ್ರಾಂತ ಸಂಘದ ಜಿಲ್ಲಾಧ್ಯ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದರು. ಮಿರಿಯಾಣದಲ್ಲಿ ತಲೆದೂರಿರುವ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಗ್ರಾಮದ ಚಿಂಚೋಳಿ& ತಾಂಡೂರ ಹೆದ್ದಾರಿಯಲ್ಲಿ ಸಂಚಾರ ತಡೆದು ಗುರುವಾರ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಮಾತನಾಡಿ, ಮಿರಿಯಾಣದಲ್ಲಿ ಕಳೆದ ಕೆಲವು ವಾರಗಳಿಂದ ತೀವ್ರ ಕುಡಿವ ನೀರಿನ ಅಭಾವ ಸೃಷ್ಟಿಯಾಗಿದೆ. ಗ್ರಾಮಸ್ಥರು ನೀರಿಗಾಗಿ ಮೈಲಿಗಟ್ಟಲೆ ಅಲೆಯುವಂತಾಗಿದೆ. ಕೂಡಲೇ ಟ್ಯಾಂಕ್​ಗಳ ಮೂಲಕ ನೀರು ಸರಬರಾಜು ಮಾಡಬೇಕು. ಪಿಂಚಣಿ ಹಣವನ್ನು ಸರಿಯಾಗಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಜಾಫರ್​ಖಾನ್​ ಮಿರಿಯಾಣ, ರತ್ನಮ್ಮ, ಬಸಮ್ಮ, ಅನೀತಾ, ಸತ್ಯಮ್ಮ, ಇಂದುಮತಿ, ಈರಮ್ಮ, ದೇವಪ್ಪ, ಮೈನೊದ್ದಿನ್​, ಜಗಪ್ಪ, ಶ್ರೀಕಾಂತ, ದೇವರಾಜ, ಲ್ಮ, ಪ್ರಶಾಂತ, ಜನಾರ್ಧನ, ಸಂತೋಷ, ಮೊಗಲಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net