ಹಕ್ಕುಪತ್ರ ವಿತರಣೆಗೆ ಆಗ್ರಹ

ಬೈಲಹೊಂಗಲದಲ್ಲಿ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿಗೆ ನಿವಾಸಿಗಳು ಮನವಿ ಸಲ್ಲಿಸಿದರು. ಯಲ್ಲಪ್ಪ ತಿಮ್ಮಾಪುರ, ಮಲ್ಲಿಕಾರ್ಜುನ ಬಾಜಿ ಇತರರಿದ್ದರು.
ಬೈಲಹೊಂಗಲದಲ್ಲಿ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿಗೆ ನಿವಾಸಿಗಳು ಮನವಿ ಸಲ್ಲಿಸಿದರು. ಯಲ್ಲಪ್ಪ ತಿಮ್ಮಾಪುರ, ಮಲ್ಲಿಕಾರ್ಜುನ ಬಾಜಿ ಇತರರಿದ್ದರು.
Published on
ಬೈಲಹೊಂಗಲ: ಇಲ್ಲಿನ ಬಸವೇಶ್ವರ ಆಶ್ರಯ ನಗರದ ನಿವಾಸಿಗಳಿಗೆ ಮನೆ ಹಕ್ಕುಪತ್ರ ಹಾಗೂ ಕಂಪ್ಯೂಟರ್​ ಉತಾರ ವಿತರಿಸಬೇಕು ಎಂದು ಆಗ್ರಹಿಸಿ ಸ್ಥಳಿಯ ನಿವಾಸಿಗಳು ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕಿತ್ತೂರು ಕರ್ನಾಟಕ ರಣಾ ವೇದಿಕೆ ಮುಖಂಡ ಯಲ್ಲಪ್ಪ ತಿಮ್ಮಾಪುರ ಹಾಗೂ ಮಲ್ಲಿಕಾರ್ಜುನ ಬಾಜಿ ಮಾತನಾಡಿ, ಬೈಲಹೊಂಗಲ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಆದರೆ, 27 ವರ್ಷಗಳಿಂದ ಸ್ಥಳಿಯ ಬಸವೇಶ್ವರ ಆಶ್ರಯ ನಗರದ ನಿವಾಸಿಗಳಿಗೆ ಮನೆ ಹಕ್ಕುಪತ್ರ ಮತ್ತು ಕಂಪ್ಯೂಟರ್​ ಉತಾರ ವಿತರಿಸಿಲ್ಲ. ಲಾನುಭವಿ ಹೆಸರಲ್ಲಿ ಮನೆ ಇಲ್ಲದ್ದರಿಂದ ಸರ್ಕಾರದಿಂದ ಯಾವುದೇ ಸಹಾಯಧನ ಲಭಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಎಚ್ಚೆತ್ತು ಅಧಿಕಾರಿಗಳು 15 ದಿನದೊಳಗೆ ಪಲಾನುಭವಿಗಳಿಗೆ ಮನೆ ಹಕ್ಕುಪತ್ರ ನೀಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶಿವಾನಂದ ಆನಿಗೋಳ, ಮಹಾಂತೇಶ ಹಂಪಣ್ಣವರ, ಉಮೇಶ ಬಾಗೋಜಿ, ಬಸವರಾಜ ಅಂಕಲಗಿ, ಕುಮಾರ ರ್ಬಿಜಿ ಹಾಗೂ ರಮೇಶ ಪತ್ತಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net