ಯಾದಗಿರಿ ಹೊರವಲಯದ ಮಿನಿ ಬ್ರಿಜ್ಕಂ ಬ್ಯಾರೇಜ್ನ ಗೇಟ್ ತುಕ್ಕು ಹಿಡಿದು ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿರುವ ಸ್ಥಳಕ್ಕೆ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಟನಾ ಕಾರ್ಯದರ್ಶಿ ಉಮೇಶ ಮುದ್ನಾಳ್ ಭೇಟಿ ನೀಡಿದರು. ಪವನ, ಹಣಮಂತ, ಮಲ್ಲೆಶಿ, ರಾಜಪ್ಪ, ಮಲ್ಲಪ್ಪ, ಮಹೇಶ, ಅಂಜಪ್ಪ, ತಿಪ್ಪಣ್ಣ, ಮೈಲಾರಿ, ಭೀಮಪ್ಪ ಇತರರಿದ್ದರು.
ಯಾದಗಿರಿ: ಇಲ್ಲಿನ ಗಂಗಾನಗರದ ಹೊರವಲಯದಲ್ಲಿರುವ ಮಿನಿ ಬ್ರಿಜ್ಕಂ ಬ್ಯಾರೇಜ್ನ ಗೇಟ್ ತುಕ್ಕು ಹಿಡಿದು ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದ್ದು, ಕೂಡಲೇ ಅದನ್ನು ದುರಸ್ತಿ ಮಾಡಿಸಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ಸಂಟನಾ ಕಾರ್ಯದರ್ಶಿ ಉಮೇಶ ಮುದ್ನಾಳ್ ಆಗ್ರಹಿಸಿದ್ದಾರೆ.
ಈ ಭಾಗದ ಬಡ ರೈತರು ಈ ಬ್ರಿಜ್ ಕಂ ಬ್ಯಾರೇಜ್ನ ನೀರು ನಂಬಿ ಕೃಷಿ ಕಾಯಕ ಮಾಡುತ್ತಿದ್ದಾರೆ, ಆದರೆ ಹೀಗೆ ಗೇಟ್ಗಳು ತುಕ್ಕು ಹಿಡಿದು ಅಪಾರ ಪ್ರಮಾಣದಲ್ಲಿ ನೀರು ಪೊಲಾಗುತ್ತಿದ್ದು, ಇದರಿಂದ ರೈತರಿಗೆ ನಷ್ಟದ ಜತೆಗೆ ಕಷ್ಟವಾಗುತ್ತಿದೆ ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅಪಾರ ಪ್ರಮಾಣದಿಂದ ನೀರು ಸೋರಿಕೆಯಾಗಿ, ಕೆಳಭಾಗದಲ್ಲಿ ಪಾಚಗಟ್ಟಿ ಗಿಡಗಂಟಿಗಳನ್ನು ಬೆಳೆದು ವಿಷಜಂತುಗಳ ತಾಣವಾಗಿ ಮಾರ್ಪಟ್ಟಿದೆ. ಬೆಳೆಗೆ ನೀರು ಹರಿಸಿಕೊಳ್ಳಲು ಸಾಧ್ಯವಾಗದೇ ಸುಮಾರು ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾಳಾಗುತ್ತಿವೆ. ಜಾನುವಾರು, ಪಗಳಿಗೆ ಬೇಸಿಗೆ ಸಮಯದಲ್ಲಿ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ದಿವ್ಯ ರ್ನಿಲವೇ ಕಾರಣ ಎಂದು ಅವರು ದೂರಿದರು.
ಈಗ ಮಳೆಗಾಲ ಆರಂಭವಾಗಲಿದ್ದು, ಈ ಹಳ್ಳಕ್ಕೆ ಅಪಾರ ಪ್ರಮಾಣ ನೀರು ಹರಿದು ಬರುತ್ತದೆ. ಅದು ಕೂಡ ರೈತರಿಗೆ ಸಿಗದೆ ಹಾಳಾಗುತ್ತದೆ. ಕಾರಣ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಪ್ಪು ಬಣ್ಣ ಹಚ್ಚಿ ವಿನೂತನ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಮಿನಿ ಬ್ರಿಜ್ಕಂ ಬ್ಯಾರೇಜ್ನ ಸ್ಥಳಕ್ಕೇ ಭೇಟಿ ನೀಡಿ ಅಲ್ಲಿನ ಸ್ಥಿತಿ,ಗತಿ ಕುರಿತಾದ ಭಾವಚಿತ್ರಗಳನ್ನು ಸೆರೆಹಿಡಿದು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು, ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬ್ರೀಜಂ ಕಂ ಬ್ಯಾರೇಜಿಗೆ ತಡೆ ಗೊಡೆ ನಿರ್ಮಾಣ ಮಾಡಿ, ವಿದ್ಯುತ್ ದೀಪಗಳ ವ್ಯವಸ್ಥೆ ಕಲ್ಪಿಸಿ ಅಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೇ ಭೇಟಿ ನೀಡಿದ ವೇಳೆ ಪವನ, ಹಣಮಂತ,ಮಲ್ಲೆಶಿ, ರಾಜಪ್ಪ, ಮಲ್ಲಪ್ಪ, ಮಹೇಶ, ಅಂಜಪ್ಪ, ತಿಪ್ಪಣ್ಣ, ಮೈಲಾರಿ, ಭೀಮಪ್ಪ ಇತರರಿದ್ದರು.