ತಹಸಿಲ್​ ಕಚೇರಿ ಕೂಡಲೇ ಸ್ಥಳಾಂತರ ಮಾಡಿ

ಬಸ್​ ನಿಲ್ದಾಣಕ್ಕೆ ಮೂಲಸೌಕರ್ಯ ಕಲ್ಪಿಸಬೇಕು, ತಹಸಿಲ್​ ಕಚೇರಿ ಸ್ಥಳಾಂತರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಮಲಾಪುರದ ತಹಸಿಲ್​ ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರೇಡ್​ 2 ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಅಮೃತ ಗೌರೆ, ಸಂತೋಷ ರಾಂಪೂರೆ, ಸಂಜುಕುಮಾರ ಕುಂಬಾರ, ರಶೀದ್​ ಬಾಬಾ, ಭೀಮಾ ಇತರರಿದ್ದರು.
ಬಸ್​ ನಿಲ್ದಾಣಕ್ಕೆ ಮೂಲಸೌಕರ್ಯ ಕಲ್ಪಿಸಬೇಕು, ತಹಸಿಲ್​ ಕಚೇರಿ ಸ್ಥಳಾಂತರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಮಲಾಪುರದ ತಹಸಿಲ್​ ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರೇಡ್​ 2 ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಅಮೃತ ಗೌರೆ, ಸಂತೋಷ ರಾಂಪೂರೆ, ಸಂಜುಕುಮಾರ ಕುಂಬಾರ, ರಶೀದ್​ ಬಾಬಾ, ಭೀಮಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಮಲಾಪುರದಲ್ಲಿ ಜನರಿಂದ ಪ್ರತಿಭಟನೆ
  • ಗ್ರೇಡ್​ 2 ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಕೆ
ಕಮಲಾಪುರ: ಸುಸಜ್ಜಿತ ಬಸ್​ ನಿಲ್ದಾಣ ನಿರ್ಮಾಣಕ್ಕಾಗಿ ತಹಸಿಲ್​ ಕಚೇರಿ ಸ್ಥಳಾಂತರಿಸಿ ಜನರಿಗೆ ಅನುವು ಮಾಡಿಕೊಡಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಮೃತ ಗೌರೆ ಒತ್ತಾಯಿಸಿದರು.
ಬಸ್​ ನಿಲ್ದಾಣ ಎದುರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಬಸ್​ ನಿಲ್ದಾಣಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇದೀಗ ತಹಸಿಲ್​ ಕಚೇರಿ ಇರುವ ಸ್ಥಳ ಪ್ರೌಢಶಾಲೆಯ ಆಸ್ತಿಯಾಗಿದ್ದು, ತಾತ್ಕಾಲಿಕವಾಗಿ ತಹಸಿಲ್​ ಕಚೇರಿ ನಡೆಸಲು ನೀಡಲಾಗಿತ್ತು. ಇದೀಗ ಜನತೆಗೆ ಬಸ್​ ನಿಲ್ದಾಣ ಅಗತ್ಯವಾಗಿದೆ. ಹೀಗಾಗಿ ಕೂಡಲೇ ಸ್ಥಳ ಖಾಲಿ ಮಾಡಬೇಕು. ತಹಸಿಲ್​ ಕಚೇರಿಯನ್ನು ಹೊಸದಾಗಿ ನಿರ್ಮಾಣವಾಗಿರುವ ಪಿಡಬ್ಲುಡಿ ಐಬಿಗೆ ಸ್ಥಳಾಂತರ ಮಾಡಬೇಕು. ರ್ನಿಲಕ್ಷ ವಹಿಸಿದರೆ ಸ್ಥಳಿಯರೊಂದಿಗೆ ತಹಸಿಲ್​ ಕಚೇರಿಗೆ ಬೀಗ ಹಾಕಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಚಿಕ್ಕದಾಗಿದ್ದು, ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದೆ. ಕೂಡಲೇ ರೈಲ್ವೆ ಸ್ಟೇಷನ್​ ಹಿಂಭಾಗದಲ್ಲಿ ಬೈಪಾಸ್​ ರಸ್ತೆ ನಿರ್ಮಿಸಿ ಕಲಬುರಗಿಯಿಂದ ಬರುವ ವಾಹನಗಳನ್ನು ನವನಿಹಾಳ ರೈಲ್ವೆ ಅಂಡರ್​ ಬ್ರಿಡ್ಜ್​ ಮೂಲಕ ಚಾರಕಮಾನ್​ ರಸ್ತೆಗೆ ಸಂಪರ್ಕ ಕಲ್ಪಿಸಬೇಕು. ಹುಮನಾಬಾದ್​ನಿಂದ ಬರುವ ವಾಹನಗಳಿಗೆ ಓಕಳಿ ರೈಲ್ವೆ ಅಂಡರ್​ ಬ್ರಿಡ್ಜ್​ ಮೂಲಕ ಕಲಬುರಗಿ ಭಾಗಕ್ಕೆ ಸಂಪರ್ಕ ಕಲ್ಪಿಸಬೇಕು. ಬಸ್​ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ತಾತ್ಕಾಲಿಕ ಡಿವೈಡರ್​ ಅಳವಡಿಸಬೇಕು. ಬಸ್​ ನಿಲ್ದಾಣದಿಂದ ಬಸವೇಶ್ವರ ಚೌಕ್​ವರೆಗಿನ ರಸ್ತೆಯಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಬಸ್ಸು ನಿಲ್ದಾಣದಲ್ಲಿ ಕಸದ ತೊಟ್ಟಿಗಳನ್ನು ಇಡಬೇಕು ಎಂದು ಒತ್ತಾಯಿಸಿದರು.
ಗ್ರೇಡ್​&2 ತಹಸೀಲ್ದಾರ್​ ಶಿವಕುಮಾರ ಶಾಬಾ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಸಂತೋಷಕುಮಾರ ರಾಂಪೂರೆ, ಸಂಜುಕುಮಾರ ಕುಂಬಾರ, ಬಾಚಗುಂಡಿ, ರಶೀದ್​ ಬಾಬಾ, ಭೀಮಾ, ರೇವಣಸಿದ್ದಯ್ಯ ಸ್ವಾಮಿ, ಪ್ರಭಾಕರ ಗೌರೆ, ಸಂತೋಷ ಮೂಲಗೆ, ಅಲೋಕುಮಾರ ಗೌರೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net