ಸಲೀಂ ಅಹ್ಮದ್‌ಗೆ ಧಾರ್ಮಿಕ ನಾಯಕರಿಂದ ಅಭಿನಂದನೆ

ಧರ್ಮಗುರುಗಳು, ಧಾರ್ಮಿಕ ನಾಯಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಲೀಂ ಅಹ್ಮದ್ ಅವರಿಗೆ ಅಭಿನಂದಿಸುತ್ತಿರುವುದು.
ಧರ್ಮಗುರುಗಳು, ಧಾರ್ಮಿಕ ನಾಯಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಲೀಂ ಅಹ್ಮದ್ ಅವರಿಗೆ ಅಭಿನಂದಿಸುತ್ತಿರುವುದು.
Published on
ಬೆಂಗಳೂರು: ಕಿತ್ತೂರು ಕರ್ನಾಟಕದ ಬಹುದಿನಗಳ ಕನಸಾಗಿದ್ದ ಹುಬ್ಬಳ್ಳಿಯ ಹಜ್ ಭವನ ನಿರ್ಮಾಣಕ್ಕೆ ಕಾರಣಕರ್ತರಾದ ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರನ್ನು ಧಾರ್ಮಿಕ ನಾಯಕರು ಅಭಿನಂದಿಸಿದರು.
ಹುಬ್ಬಳ್ಳಿಯಲ್ಲಿ ಹಜ್ ಭವನ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಇದಕ್ಕೆ ಕಾರಣಕರ್ತರಾದ ಸಲೀಂ ಅಹ್ಮದ್ ಹುಬ್ಬಳ್ಳಿಗೆ ಭೇಟಿ ನೀಡಿದಾಗ ಪ್ರವಾಸಿ ಮಂದಿರದಲ್ಲಿ ಅವರನ್ನು ಭೇಟಿ
ಮಾಡಿದ ಕಿತ್ತೂರು ಕರ್ನಾಟಕ ಭಾಗದ ವಿವಿಧ ಪೀಠಾಧಿಪತಿಗಳು, ಧರ್ಮಗುರುಗಳು, ಧಾರ್ಮಿಕ ನಾಯಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಅಭಿನಂದಿಸಿದರು.
ಈ ನಿಯೋಗದಲ್ಲಿ ಉತ್ತರ ಕರ್ನಾಟಕ ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಹಮೀದ್ ಕೊಪ್ಪದ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net