ಪ್ರಶಾಂತನಗರ ವೃತ್ತದಿಂದ ಶೋಭಯಾತ್ರೆ ಆರಂಭವಾಯಿತು. ರಾಜ್ಯ ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ ಅವರ ನೇತೃತ್ವದಲ್ಲಿ ಸಾವಿರಾರು ಯುವ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಧರಿಸಿದ ಕೇಸರಿ ಶೆಲ್ಲೆ, ಪೇಟ ನೋಡುಗರ ಆಕರ್ಷಣೆಯಾಗಿತ್ತು. ಮೆರವಣಿಗೆಯುದ್ದಕ್ಕೂ ಅಯೋಧ್ಯೆಯ ಶ್ರೀರಾಮ ಮಂದಿರದ ಸ್ತಬ್ಧಚಿತ್ರಗಳು, ಬಾಲ ಶ್ರೀರಾಮನ ವೇಷಧಾರಿ ಮಕ್ಕಳು, ಚಂಡೆ ವಾದನ ಹಾಗೂ ನಾಸಿಕ್ ಬ್ಯಾಂಡ್ ತಂಡಗಳು ಸಾರ್ವಜನಿಕರ ಗಮನ ಸೆಳೆಯಿತು. ಸಂಸದ ತೇಜಸ್ವಿ ಸೂರ್ಯ, ಶಾಸಕ ಸಿ.ಕೆ. ರಾಮಮೂರ್ತಿ, ಪಾಲಿಕೆ ಮಾಜಿ ಸದಸ್ಯರು ವಿಶ್ವನಾಥ ಗೌಡ,ದಾಸೇಗೌಡ, ಮೋಹನ್‌ಕುಮಾರ್ ಮತ್ತಿತರರಿದ್ದರು.