ಗ್ರಾಮೀಣ ಭಾಗದಲ್ಲಿ ಉತ್ತಮ ವಿದ್ಯುತ್​ ಪೂರೈಕೆ

ಅಫಜಲಪುರದ ಹೇರೂರ (ಬಿ) ಗ್ರಾಮದಲ್ಲಿ ವಿದ್ಯುತ್​ ಸ್ಟೇಷನ್​ ಸ್ಥಾಪಿಸಲು ಗುರುತಿಸಲಾದ ಸ್ಥಳವನ್ನು ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಪರಿಶೀಲಿಸಿದರು. ರಾಜೇಶ ಹಿಪ್ಪರಗಿ, ಮುರುಘೇಶ ಮಠಪತಿ, ಶಾಂತಪ್ಪ ಪೂಜಾರಿ ಇತರರಿದ್ದರು.
ಅಫಜಲಪುರದ ಹೇರೂರ (ಬಿ) ಗ್ರಾಮದಲ್ಲಿ ವಿದ್ಯುತ್​ ಸ್ಟೇಷನ್​ ಸ್ಥಾಪಿಸಲು ಗುರುತಿಸಲಾದ ಸ್ಥಳವನ್ನು ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಪರಿಶೀಲಿಸಿದರು. ರಾಜೇಶ ಹಿಪ್ಪರಗಿ, ಮುರುಘೇಶ ಮಠಪತಿ, ಶಾಂತಪ್ಪ ಪೂಜಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಹೇಳಿಕೆ
  • ಹೇರೂರ(ಬಿ) ಗ್ರಾಮದಲ್ಲಿ ಸ್ಥಳ ಪರಿಶೀಲನೆ
ಅಫಜಲಪುರ: ವಿದ್ಯುತ್​ ಸ್ಟೇಷನ್​ಗಳ ಸ್ಥಾಪನೆಯಿಂದ ಗ್ರಾಮೀಣ ಭಾಗದಲ್ಲಿ ಉತ್ತಮ ವಿದ್ಯುತ್​ ಪೂರೈಕೆ ಜತೆಗೆ ರೈತರಿಗೆ ನಿಗದಿತ ಸಮಯಕ್ಕೆ ವಿದ್ಯುತ್​ ದೊರಕಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್​ಟಿಸಿ) ಅಧ್ಯಕ್ಷ ಅರುಣಕುಮಾರ ಪಾಟೀಲ್​ ಹೇಳಿದರು.
ಹೇರೂರ (ಬಿ) ಗ್ರಾಮದಲ್ಲಿ 110ಕೆವಿ ವಿದ್ಯುತ್​ ಸ್ಟೇಷನ್​ ಸ್ಥಾಪಿಸಲು ಮಂಗಳವಾರ ಸ್ಥಳ ಪರಿಶೀಲಿಸಿದ ಅವರು, ನೂತನ ಸ್ಟೇಷನ್​ ಸ್ಥಾಪನೆಯಿಂದ ಹೇರೂರ (ಬಿ), ಜೋಗುರ, ಮೈನಾಳ, ಬೆಳಗುಂಪಾ (ಕೆ) ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎದುರಾಗುತ್ತಿರುವ ಕಡಿಮೆ ವೋಲ್ಟೇಜ್​, ವಿದ್ಯುತ್​ ವ್ಯತ್ಯಯ ಹಾಗೂ ದೂರದ ಸ್ಟೇಷನ್​ಗಳಿಂದ ವಿದ್ಯುತ್​ ಪೂರೈಕೆಯಲ್ಲಿನ ತಾಂತ್ರಿಕ ಸಮಸ್ಯೆ ಕಡಿಮೆಯಾಗಲಿವೆ. ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ತಾಂತ್ರಿಕ ಮಾನದಂಡ ಪಾಲಿಸಿ, ತ್ವರಿತ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಕೆಪಿಟಿಸಿಎಲ್​ ಇಇ ರಾಜೇಶ ಹಿಪ್ಪರಗಿ ಮಾತನಾಡಿ, ವಿದ್ಯುತ್​ ಸಬ್​ ಸ್ಟೇಷನ್​ ನಿಮಾರ್ಣಕ್ಕೆ ಸುಮಾರು 5 ಎಕರೆ ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.
ಜೆಸ್ಕಾಂ ಇಇ ಮುರುಘೇಶ ಮಠಪತಿ, ಎಇಇ ಶಾಂತಪ್ಪ ಪೂಜಾರಿ, ತಾಪಂ ಮಾಜಿ ಸದಸ್ಯ ಸೈಯದ್​ ಸಾಬ್​ ಮುಲ್ಲಾ, ಗ್ರಾಪಂ ಮಾಜಿ ಅಧ್ಯಕ್ಷ ಮೋಹನ ಆರ್ಮನ, ಪ್ರಮುಖರಾದ ಭೀಮರಾಯ ಬಗಲೂರ, ಮಲ್ಲು ಸಾಂಬಾ, ರಾಜು ಕ್ಯಾಸಾ, ಮರೆಪ್ಪ ಪೂಜಾರಿ, ದುಂಡಪ್ಪಗೌಡ ಬಿರಾದಾರ, ಹುಲ್ಲೆಪ್ಪ ಪೂಜಾರಿ ಇತರರಿದ್ದರು.
"

ವಿದ್ಯುತ್​ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅಫಜಲಪುರದಲ್ಲಿ 220 ಕೆವಿ ಹಾಗೂ ಬಂಕಲಗಾ, ಶಿವೂರ, ಘೂಳನೂರ, ಅತನೂರ, ನಂದರಗಾದಲ್ಲಿ 110ಕೆವಿ ವಿದ್ಯುತ್​ ಕೇಂದ್ರಗಳ ಕಾಮಗಾರಿ ಪ್ರಗತಿಯಲ್ಲಿವೆ. ಅಫಜಲಪುರ, ಚೌಡಾಪುರ ಸ್ಟೇಷನ್​ಗಳಲ್ಲಿ ಹೊಸ ವಿದ್ಯುತ್​ ಪರಿವರ್ತಕಗಳನ್ನು ಅಳವಡಿಸಲಾಗಿದೆ.

— > ಅರುಣಕುಮಾರ ಪಾಟೀಲ್​, ಅಧ್ಯಕ್ಷ, ಕೆಕೆಆರ್​ಟಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net