ನಿಶ್ಚಿತ ಗೌರವ ಧನ ಶೀಘ್ರ ಬಿಡುಗಡೆ ಮಾಡಿ

ಯಾದಗಿರಿ ನಗರದ ಡಿಎಚ್​ಒ ಕಚೇರಿ ಬಳಿ ಮಂಗಳವಾರ ವಿವಿಧ ಬೇಡಿಕೆಗಾಗಿ ಆಗ್ರಹಿಸಿ ಆಶಾ ಕಾರ್ಯಕರ್ತೆರು ಧರಣಿ ನಡೆಸಿದರು. ಡಿ.ಉಮಾದೇವಿ ಇತರರಿದ್ದರು
ಯಾದಗಿರಿ ನಗರದ ಡಿಎಚ್​ಒ ಕಚೇರಿ ಬಳಿ ಮಂಗಳವಾರ ವಿವಿಧ ಬೇಡಿಕೆಗಾಗಿ ಆಗ್ರಹಿಸಿ ಆಶಾ ಕಾರ್ಯಕರ್ತೆರು ಧರಣಿ ನಡೆಸಿದರು. ಡಿ.ಉಮಾದೇವಿ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷೆ ಉಮಾದೇವಿ ಆಗ್ರಹ
  • ಡಿಎಚ್​ಒ ಕಚೇರಿ ಬಳಿ ಮೂರು ತಾಸು ಪ್ರತಿಭಟನೆ
ಯಾದಗಿರಿ : ಜಿಲ್ಲೆಯ ಆಶಾ ಕಾರ್ಯಕರ್ತೆಯರ ಹಲವು ತಿಂಗಳ ಬಾಕಿ ಇರುವ ಮಾಸಿಕ ನಿಶ್ಚಿತ ಗೌರವ ಧನ, ಪ್ರೋತ್ಸಾಹ ಧನ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಮಂಗಳವಾರ ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.
ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂದ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಮಾತನಾಡಿದ ಸಂಟನೆ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ, ರಾಜ್ಯ ಸರ್ಕಾರದ ನಿಶ್ಚಿತ 2ತಿಂಗಳ ಗೌರವ ಧನ ಕೂಡಲೇ ಬಿಡುಗಡೆ ಮಾಡಬೇಕು. 3&4ತಿಂಗಳಿಂದ ಬಾಕಿ ಇರುವ ಕೇಂದ್ರದ ಇನ್ಸೆಂಟಿವ್​ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಈ ಎರಡು ವೇತನಗಳನ್ನು ಪ್ರತಿ ತಿಂಗಳು 5 ತಾರೀಕಿನೊಳಗೆ ಪಾವತಿಸಬೇಕೆಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆರಿಗೆ ಪ್ರತಿ ತಿಂಗಳು ಕ್ಲೆಮ್​ ಮತ್ತು ಸ್ಯಾಂಕ್ಷನ್​ ಅರ್ಜಿ ನೀಡಲು ಕ್ರಮ ಜರುಗಿಸಬೇಕು. ಹಲವು ಕಾರ್ಯಕರ್ತೆರಿಗೆ ನೀಡಬೇಕಾದ 2025ನೇ ಸಾಲಿನ ಎನ್​ಸಿಡಿ ಹಣ ಸಹ ಬಿಡುಗಡೆ ಮಾಡಬೇಕು. ಕನಿಷ್ಠ ಮೂರು ತಿಂಗಳೊಮ್ಮೆಯಾದರೂ ಜಿಪಂ ಸಿಇಒ ಸಮ್ಮುಖದಲ್ಲಿ ಆಶಾ ಕುಂದುಕೊರತೆ ಸಭೆ ಕರೆಯಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಅನುಮೋದನೆ ಇಲ್ಲದ ಮತ್ತು ಅನುದಾನ ಇಲ್ಲದ 9 ಚಟುವಟಿಕೆಗಳ ಪ್ರೋತ್ಸಾಹ ಧನದ ಪ್ರಮುಖ ಮಾಡ್ಯೂಲ್​ಗಳನ್ನು ಆಶಾ ನಿಧಿ ತಂತ್ರಾಂಶದಲ್ಲಿ ನಿಷ್ಕ್ರಿಯಗೊಳಿಸಿದ್ದು, ಅವುಗಳಿಗೆ ಅನುಮೋದನೆ ಸಿಗುವವರೆಗೆ ಈ ಕೆಲಸಗಳನ್ನು ಆಶಾ ಕಾರ್ಯಕರ್ತೆಯರು ಮಾಡುವುದಿಲ್ಲ ಎಂದು ಮಂಗಳವಾರ ನಡೆದ ಧರಣಿ ವೇಳೆ ಸಂಟನೆ ಮುಖಂಡರು ಮತ್ತು ಆಶಾ ಕಾರ್ಯಕರ್ತೆರು ಹೇಳಿದರು.
ಸಂಘಟನೆಗಳ ಕೆಲಸ ಇಲ್ಲ ಎಂದ ಡಿಎಚ್​ಒ
ಧರಣಿ ವೇಳೆ ಡಿಎಚ್​ಒ ಡಾ.ಮಹೇಶ ಬಿರಾದಾರ ಮತ್ತು ಸಂಟನೆ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ ಅವರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ. ಬೇಡಿಕೆಗಳ ಈಡೆರಿಕೆಗಾಗಿ ಒತ್ತಾಯಿಸುತ್ತಿರುವಾಗ ಸಂಟನೆಗಳ ಮುಖಂಡರ ಕೆಲಸ ಇಲ್ಲಿ ಏನು ಇಲ್ಲ. ಏನೇ ಇದ್ದರೂ ಆಶಾ ಕಾರ್ಯಕರ್ತೆರು ಬಂದು ಭೇಟಿ ಮಾಡಲಿ ಎಂದು ಡಿಎಚ್​ಒ ಹೇಳಿ, ಸಂದ ಅಧ್ಯಕ್ಷೆ ಡಿ.ಉಮಾದೇವಿ ಅವರನ್ನು ನೀವು ಸುಮ್ಮನೇ ಇರ್ರಿ ಎಂದು ಹೇಳಿದಾಗ ಧರಣಿ ನಿರತ ಎಲ್ಲರೂ ಸಿಟ್ಟೆಗೆದ್ದು, ಸರ್​ ನೀವು ಹೀಗೆ ಹೇಳುವುದು ಸರಿಯಲ್ಲ. ನಮ್ಮ ಪರವಾಗಿ ಸಂಟನೆ ಇದೆ. ಅದಕ್ಕೆ ಅವರು ಕೇಳುತ್ತಿದ್ದಾರೆಂದು ಹೇಳಿದಾಗ ಕೆಲ ನಿಮಿಷ ವಾತವರಣ ಬಿಗಿವಿನಿಂದ ಕೂಡಿತ್ತೇಂದು ತಿಳಿದು ಬಂದಿದೆ. ಇದಾದ ಕೆಲ ಹೊತ್ತಿನ ನಂತರ ಧರಣಿ ಸ್ಥಳಕ್ಕೆ ಆಗಮಿಸಿದ ಆಶಾ ಮೆಂಟರ್​ ಸವಿತಾ ಅವರು ಕೆಲವೇ ದಿನಗಳಲ್ಲಿ ಎಲ್ಲ ಬೇಡಿಕೆ ಈಡೆರಿಸುವುದಾಗಿ ಭರವಸೆ ನೀಡಿ ಅದರ ಒಂದು ಪ್ರತಿ ಇವರಿಗೆ ನೀಡಿದಾಗ ಧರಣಿ ಅಂತ್ಯಗೊಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net