ನೊಂದ ಯುವತಿ ಮತ್ತು ಯುವಕ ಸಹೋದ್ಯೋಗಿಗಳಾಗಿದ್ದು, ಆಪ್ತರಾಗಿದ್ದರು. ಇದರ ನಡುವೆ ಯುವತಿ ಬಳಿ ಆರೋಪಿತ ಮದುವೆಯ ಪ್ರಸ್ತಾಪವನ್ನು ಇಟ್ಟಿದ್ದನು. ಆಕೆ, ಆರಂಭದಲ್ಲಿ ನಿರಾಕರಿಸಿ ಬಳಿಕ ತನ್ನ ಪಾಲಕರು ಒಪ್ಪಿದರೇ ಮಾತ್ರ ಮದುವೆ ಆಗುವುದಾಗಿ ಹೇಳಿದ್ದಳು. ಆದರೆ, ಯುವತಿಯ ಪಾಲಕರು ಪ್ರೇಮ ವಿವಾಹಕ್ಕೆ ನಿರಾಕರಿಸಿದರು. ಆದರಿಂದ ಯುವತಿ, ತನ್ನ ಪಾಲಕರು ಮದುವೆಗೆ ಒಪ್ಪಿಗೆ ಸೂಚಿಸಿದ ಕಾರಣ ಆತನೊಂದಿಗೆ ವಿವಾಹವನ್ನು ನಿರಾಕರಿಸಿ ಸ್ನೇಹವನ್ನು ಕಡಿತ ಮಾಡಿಕೊಂಡಿದ್ದಳು.