ಶರಣರ ಕಾರ್ಯ ಸ್ಮರಣೀಯ

ರಾಮದುರ್ಗದ ಸಿ.ಎಸ್​.ಬೆಂಬಳಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ನಿರ್ಮಲಾ ಬಟ್ಟಲ ಅವರನ್ನು ಸನ್ಮಾನಿಸಲಾಯಿತು. ಡಾ.ಪ್ರಕಾಶ ತೆಗ್ಗಿಹಳ್ಳಿ, ಎ.ಡಿ.ಕಾಮತ್​, ಮಂಜುಳಾ ಮೂಡ್ಲವರ ಇತರರಿದ್ದರು.
ರಾಮದುರ್ಗದ ಸಿ.ಎಸ್​.ಬೆಂಬಳಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ನಿರ್ಮಲಾ ಬಟ್ಟಲ ಅವರನ್ನು ಸನ್ಮಾನಿಸಲಾಯಿತು. ಡಾ.ಪ್ರಕಾಶ ತೆಗ್ಗಿಹಳ್ಳಿ, ಎ.ಡಿ.ಕಾಮತ್​, ಮಂಜುಳಾ ಮೂಡ್ಲವರ ಇತರರಿದ್ದರು.
Published on
ರಾಮದುರ್ಗ: ಮಹಿಳೆಯರ ದೌರ್ಜನ್ಯ ತಡೆಯುವಲ್ಲಿ, ಸ್ತ್ರೀಯರಿಗೆ ಸ್ವಾತಂತ್ರ್ಯ ಒದಗಿಸುವಲ್ಲಿ ಶರಣರ ಕಾರ್ಯ ಸ್ಮರಣೀಯ ಎಂದು ಪ್ರಾಚಾಯೆರ್ ಡಾ.ನಿರ್ಮಲಾ ಬಟ್ಟಲ ಹೇಳಿದರು.
ನಗರದ ಸಿ.ಎಸ್​.ಬೆಂಬಳಗಿ ಕಾಲೇಜಿನಲ್ಲಿ ರೇಂರ್ಜಸ್​ ಟಕ ಹಾಗೂ ಐಕ್ಯೂಎಸಿ ಸಂಯೋಜನೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್​ ಸಂವಿಧಾನಾತ್ಮಕವಾಗಿ ಮಹಿಳೆಗೆ ಸ್ವಾತಂತ್ರ್ಯ ನೀಡಿದ ಲವಾಗಿ ಇಂದು ಮಹಿಳೆಯರು ಎಲ್ಲ ೇತ್ರದಲ್ಲಿ ಪುರುಷನಿಗೆ ಸಮನಾಗಿ ಬೆಳೆದು ನಿಂತಿದ್ದಾಳೆ. ಪ್ರತಿ ಪುರುಷರ ಸಾಧನೆಯ ಹಿಂದೆ ತಾಯಿ ಕೊಡುಗೆ ಅಪಾರ ಎಂದರು.
ಪ್ರಾಚಾರ್ಯ ಡಾ.ಪ್ರಕಾಶ ತೆಗ್ಗಿಹಳ್ಳಿ ಮಾತನಾಡಿ, ಮಹಿಳೆಯರು ಎಲ್ಲ ಸೌಲಭ್ಯ ಸದುಪಯೋಗ ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ಐಕ್ಯೂಎಸಿ ಸಂಯೋಜಕ ಎ.ಡಿ.ಕಾಮತ್​, ರೇಂರ್ಜಸ್​ ಅಧಿಕಾರಿ ಮಂಜುಳಾ ಮೂಡ್ಲವರ, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net