ಈಗ ಸರ್ಕಾರಿ ಶಾಲಾ ಶಿಕ್ಷಕರು ಪಾಠ ಪ್ರವಚನದ ಜತೆ ಕಾಮ್ಸ್, ಸ್ಯಾಟ್ಸ, ಯುಡೈಸ್, ಪಿಎಫ್ಎಂಎಸ್, ಆಧಾರ್ ಅಪಾರ್ ಐಡಿ, ಶಿಕ್ಷಾ ಕೋ ಪೈಲಟ್, ಸೇತುಬಂಧ ಪರೀಕ್ಷಗಳ ದಾಖಲೆ, ಬಿಸಿಯೂಟದ ಮಾಹಿತಿ, ಪಠ್ಯಪುಸ್ತಕ , ಸಮವಸ್ತ್ರ ವಿತರಣೆ, ಬಿಎಲ್ಓ ಹೀಗೆ ಹತ್ತಾರು ಆನ್ಲೈನ್ ಕಾರ್ಯ ನಿರಂತರ ಮಾಡಬೇಕಾಗಿದೆ. ಜತೆಗೆ ಇಲಾಖೆ ದಿನಕ್ಕೊಂದು ಮಾಹಿತಿ ಕೇಳುತ್ತಿದೆ. ಈ ವರದಿಗಳನ್ನು ಸ್ಟ್ರೆಡ್ ಸೀಟ್ ಹಾಗೂ ಮೊಬೈಲ್ ಅಪ್ಲೀಕೇಷನ್ಗಳಲ್ಲಿ ದಾಖಲಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದು ಶಿಕ್ಷಕರ ಮೇಲೆ ನಿರಂತರ ಒತ್ತಡ ಹೇರುತ್ತಿದೆ.