ಅಭಿವೃದ್ಧಿ ಕಾರ್ಯ, ಅನುದಾನದ ಚರ್ಚೆಗೆ ಸಿದ್ಧ

ಆಳಂದ ತಾಲೂಕಿನ ಪಡಸಾವಳಿಯಲ್ಲಿ ಆರ್ಟ್​ ಗ್ಯಾಲರಿ ಕಾಮಗಾರಿಗೆ ಶಾಸಕ ಬಿ.ಆರ್​.ಪಾಟೀಲ್​ ಗುದ್ದಲಿ ಪೂಜೆ ನೆರವೇರಿಸಿದರು. ಮಜರ್​ ಹುಸೇನ್​, ಸಿದ್ದರಾಮ ಪ್ಯಾಟಿ, ಬಿ.ಎಸ್​.ಪಾಟೀಲ್​, ಬಾಬು ಗೊಬ್ಬುರ, ಮಲ್ಲಿನಾಥ ಬಿರಾದಾರ ಇತರರಿದ್ದರು.
ಆಳಂದ ತಾಲೂಕಿನ ಪಡಸಾವಳಿಯಲ್ಲಿ ಆರ್ಟ್​ ಗ್ಯಾಲರಿ ಕಾಮಗಾರಿಗೆ ಶಾಸಕ ಬಿ.ಆರ್​.ಪಾಟೀಲ್​ ಗುದ್ದಲಿ ಪೂಜೆ ನೆರವೇರಿಸಿದರು. ಮಜರ್​ ಹುಸೇನ್​, ಸಿದ್ದರಾಮ ಪ್ಯಾಟಿ, ಬಿ.ಎಸ್​.ಪಾಟೀಲ್​, ಬಾಬು ಗೊಬ್ಬುರ, ಮಲ್ಲಿನಾಥ ಬಿರಾದಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಆರ್​.ಪಾಟೀಲ್​ ಹೇಳಿಕೆ
  • ಪಡಸಾವಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ
ಆಳಂದ: ವಿರೋಧಿಗಳು ಗ್ರಾಮಗಳಲ್ಲಿ ಕುಳಿತು ಅಭಿವೃದ್ಧಿ ಬಗ್ಗೆ ಮಾತನಾಡುವುದು ಬಿಟ್ಟು, ನನ್ನೊಂದಿಗೆ ನೇರ ಚರ್ಚೆಗೆ ಬರಲಿ. ಈವರೆಗೂ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೀರಿ, ಏನೆಲ್ಲ ಕೆಲಸ ಮಾಡಿದ್ದೀನಿ ಎಂದು ಹೇಳುವೆ ಎಂದು ಶಾಸಕ ಬಿ.ಆರ್​.ಪಾಟೀಲ್​ ಸವಾಲು ಹಾಕಿದರು.
ಪಡಸಾವಳಿಯಲ್ಲಿ ಕೆಕೆಆರ್​ಡಿಬಿ ಅನುದಾನದಡಿ 60 ಲಕ್ಷ ರೂ. ವೆಚ್ಚದ ಆರ್ಟ್​ ಗ್ಯಾಲರಿ, 1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಎಸ್​ಸಿಪಿ ಯೋಜನೆಯಲ್ಲಿ 80 ಲಕ್ಷ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಬೇಕಿದ್ದರೆ ಶ್ರೀರಾಮ ಮಾರ್ಕೆಟ್​ನಲ್ಲಿ ವೇದಿಕೆ ಸಿದ್ಧಪಡಿಸುವೆ, ಅಲ್ಲಿ ಬಂದು ಅನುದಾನದ ಕುರಿತು ಚರ್ಚಿಸೋಣ. ನಿಮ್ಮ ಅವಧಿ ಹಾಗೂ ನಮ್ಮ ಅವಧಿಯಲ್ಲಿ ಎಷ್ಟೆಲ್ಲ ಅನುದಾನ ಬಂದಿದೆ, ಏನೆಲ್ಲ ಕೆಲಸಗಳಾಗಿವೆ ಎಂಬುದು ಜನರು ತಿಳಿಯುತ್ತಾರೆ ಎಂದರು.
ಗ್ರಾಮದಲ್ಲಿ ಈವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಪ್ರೌಢಶಾಲೆ, ರಸ್ತೆ, ಭವನ, ಮಂದಿರ ಸೇರಿ ವಿವಿಧ ಮೂಲ ಸೌಲಭ್ಯಗಳಿಗಾಗಿ 26.26 ಕೋಟಿ ರೂ. ಅನುದಾನ ನೀಡಿದ್ದೇನೆ. ಪಿಯುಸಿ ಕಾಲೇಜ ಹಾಗೂ ಬ್ಯಾಂಕ್​ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದೆ, ಅದನ್ನು ಈಡೇರಿಸಲು ಶ್ರಮಿಸುವೆ ಎಂದು ಹೇಳಿದರು.
ಮಜರ್​ ಹುಸೇನ್​, ಬಾಬು ಗೊಬ್ಬರ, ಎಚ್​.ಎ.ಪಾಟೀಲ್​, ಸುಲೇಮಾನ ಮುಗುಟ, ಹೊನ್ನೇಶ ಅಳ್ಳಗಿ, ಶಿವಲಿಂಗಪ್ಪ ಚಾರೆ, ಸಿದ್ದರಾಮ ಪ್ಯಾಟಿ, ಬಿ.ಎಸ್​.ಪಾಟೀಲ್​, ಮಲ್ಲಿನಾಥ ಬಿರಾದಾರ, ಶಿವಕಿರಣ ಪಾಟೀಲ್​, ಲಾಯಕ್​ ಪಟೇಲ್​, ಬೋಜರಾಜ ನಿಂಬರ್ಗಿ, ಶಿವಪುತ್ರ ಪಾಟೀಲ್​, ರಾಜಕುಮಾರ ಜುಬ್ರೆ, ಕಾಶಿನಾಥ ಗಾಯಕವಾಡ, ರಾಜೇಂದ್ರ ಹತ್ತಿ ಇತರರಿದ್ದರು.
"

ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಕಳೆದ ಮೂರು ವರ್ಷ ಯಾವುದೇ ಸಮಸ್ಯೆ ಆಗಿಲ್ಲ. ಈ ಬಾರಿ ಕ್ಷೇತ್ರ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ವಿಮೆ ಹಣ ಬಂದಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದು, ಸರ್ಕಾರದಿಂದ ಸಮಂಜಸ ಉತ್ತರ ಸಿಕ್ಕಿಲ್ಲ. ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ರೈತರೊಂದಿಗೆ ನಾನು ಹೋರಾಟಕ್ಕೆ ಇಳಿಯಬೇಕಾಗುತ್ತದೆ.

— > ಬಿ.ಆರ್​.ಪಾಟೀಲ್​, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net