ಜೇವರ್ಗಿಯಲ್ಲಿ ರಾಯರ ಆರಾಧನೆ 29ರಿಂದ

,
,
Published on

ಜೇವರ್ಗಿ: ಬಸವೇಶ್ವರ ನಗರದಲ್ಲಿರುವ ರಾಯರ ಮಠದಲ್ಲಿ ಆ.29ರಿಂದ ಮೂರು ದಿನ ಸಂಭ್ರಮದಿಂದ ಶ್ರೀ ರಾವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವ ನಡೆಯಲಿದೆ ಎಂದು ಶ್ರೀಮಠದ ಅಧ್ಯಕ್ಷ ರಮೇಶ ಬಾಬು ವಕೀಲ ತಿಳಿಸಿದ್ದಾರೆ. ಆ.29ರಂದು ಪೂರ್ವಾರಾಧನೆ ನಿಮಿತ್ತ ಬೆಳಗ್ಗೆ 6ಕ್ಕೆ ಸುಪ್ರಭಾತ, 7ಕ್ಕೆ ಅಷ್ಟೋತ್ತರ, 11ಕ್ಕೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 1ಕ್ಕೆ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 7ಕ್ಕೆ ಭರತನಾಟ್ಯ ನಡೆಯಲಿದ್ದು, ನೃತ್ಯಪ್ರಿಯ ಕಲಾ ತಂಡದ ಐಶ್ವರ್ಯ ಗುರುರಾಜ, ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆ.30ರಂದು ಮದ್ಯಾರಾಧನೆ ನಿಮಿತ್ತ 8ಕ್ಕೆ ಪಲ್ಲಕ್ಕಿ ಉತ್ಸವ, ಬಳಿಕ ನೆಲೋಗಿಯ ಗುರುರಾಜ ಹೇರೂರ ಸಂಗಡಿಗರು ಹಾಗು ಸವೋರ್ತ್ತಮ ಆಚಾರ ಮಳ್ಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮದ್ಯಾಹ್ನ 1ಕ್ಕೆ ಪ್ರಸಾದ ಸೇವೆ ನಡೆಯಲಿದೆ. ಸಂಜೆ 7ಕ್ಕೆ ಸಂಡೂರಿನ ವೇಂಕಟೇಶ ತಾಮ್ರಪರಣಿ ಅವರಿಂದ ದಾಸವಾಣಿ ನಡೆಯಲಿದೆ. ಆ.31ರಂದು ಉತ್ತರಾರಾಧನೆ ನಿಮಿತ್ತ 12ಕ್ಕೆ ಸ್ಥಳಿಯ ಮಹಿಳೆಯರಿಂದ ಭಜನೆ, ಮದ್ಯಾಹ್ನ 1ಕ್ಕೆ ತೀರ್ಥ ಪ್ರಸಾದ, ಸಂಜೆ 7ಕ್ಕೆ ಚಂದ್ರಕಲಾ ಉಪಾದ್ಯಾಯ ಉಡುಪಿ ಅವರಿಂದ ದಾಸವಾಣಿ ಜರುಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net