ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ, ವನ್ಯಜೀವಿ ಛಾಯಾಗ್ರಾಹಕ ಸುನೀಲ್ ಕುಮಾರ್, ಅವರ ಪುತ್ರ ಕುಲದೀಪ್ ಮತ್ತು ಅಳಿಯ ಪೂಜಿತ್ ಸರಿಸೃಪಗಳ ಹುಡುಕಾಟ (ಹರ್ಪಿಂಗ್) ಮಾಡುತ್ತಿದ್ದಾಗ ದೈತ್ಯ ಜೇಡ ಪತ್ತೆಯಾಗಿದೆ. ನಿಯೋಹೆಟೆರೋಫ್ರಿಕ್ಟಸ್ ಸಂತತಿಗೆ ಸೇರಿದ ಇವು ಸಮಾನ್ಯವಾಗಿ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ವ್ಯಾಪ್ತಿಯ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಸಂತತಿಯಲ್ಲಿ 8 ಪ್ರಜಾತಿಗಳಿದ್ದು, ಎಲ್ಲ ಜೇಡಗಳು ಭಾರತದಲ್ಲಿ ಕಂಡುಬರುತ್ತವೆ.