ಅಪರೂಪದ ತೊಗರಿ ರೈತರಿಗೆ ತಪ್ಪಿದ ವರಿ

ಪ್ರಿಯಾಂಕ್​ ಖರ್ಗೆ
ಪ್ರಿಯಾಂಕ್​ ಖರ್ಗೆ
Published on

ಪ್ರಮುಖ ಮುಖ್ಯಾಂಶಗಳು

  • ತೊಗರಿ ಸಂಸ್ಕರಣಾ ಯಂತ್ರ ಆವಿಷ್ಕಾರ
ಕಲಬುರಗಿ: ತೊಗರಿ ಕಣಜ ಎಂದೇ ಹೆಸರಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಯು ವಿಶಿಷ್ಠ ರುಚಿ, ವಿಭಿನ್ನ ಪರಿಮಳ ಮತ್ತು ದೀರ್ಕಾಲ ಬಾಳಿಕೆ ಬರುವ ಉತ್ತಮ ಗುಣಮಟ್ಟದ ಕಾರಣದಿಂದಾಗಿ ಜಿಐ ಟ್ಯಾಗ್​ ಪಡೆದು ಜಾಗತಿಕವಾಗಿ ತನ್ನದೇ ಆದ ಸ್ಥಾನ ಮತ್ತು ಹೆಗ್ಗುರುತು ಪಡೆದಿದೆ.
ಇಂತಹ ಅಪರೂಪದ ತೊಗರಿ ಬೆಳೆಯುವ ರೈತರಿಗೆ ವೈಾನಿಕ ಮತ್ತು ಗುಣಮಟ್ಟದ ಸಂಸ್ಕರಣೆ ಮಾಡುವ ಸೌಲಭ್ಯಗಳಿಲ್ಲದೆ, ಪೂರಕವಲ್ಲದ ಯಂತ್ರ ಬಳಸುತ್ತಿದ್ದರು. ಇದರಿಂದಾಗಿ ತಮ್ಮ ಬೆಳೆಗೆ ಉತ್ತಮ ಬೆಲೆ ಪಡೆಯುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದರು. ಇದನ್ನು ಗಮನಿಸಿ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಾನಿಗಳು ಮತ್ತು ಸಂಶೋಧಕರೊಂದಿಗೆ ಚರ್ಚೆ ನಡೆಸಿ ಗುಣಮಟ್ಟದ ಸಂಸ್ಕರಣೆಗಾಗಿ ವೈಾನಿಕ ರೀತಿಯ ಯಂತ್ರ ವಿನ್ಯಾಸಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ರಾಜ್​, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕೆಕೆಆರ್​ಡಿಬಿಯ 5.50 ಕೋಟಿ ರೂ.ಮ್ಯಾಕ್ರೋ ಅನುದಾನದಲ್ಲಿ ಮೊದಲ ಹಂತವಾಗಿ 11 ಯಂತ್ರಗಳನ್ನು ತಯಾರಿಸಿ ಲೋಕಾರ್ಪಣೆಗೊಳಿಸಲಾಗಿದೆ. ಪ್ರತಿ ಗಂಟೆಗೆ 2 ಟನ್​ ತೊಗರಿ ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಈ ಯಂತ್ರದ ಬಳಕೆಯಿಂದ ರೈತರಿಗೆ ಪ್ರತಿ ಕ್ವಿಂಟಾಲ್​ ತೊಗರಿಗೆ 500 ರಿಂದ 1000 ರೂ.ರಷ್ಟು ಹೆಚ್ಚಿನ ಧಾರಣೆ ದೊರಕುವ ನಿರೀೆ ಇದೆ.
ಕಲಬುರಗಿ ಜಿಲ್ಲೆಯ ಕೃಷಿ ಕ್ಷೇತ್ರದ ಉನ್ನತಿಗಾಗಿ ನಮ್ಮ ಸರ್ಕಾರ ಸಕಲ ನೆರವು ಒದಗಿಸಲು ಬದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net