ಗೋವು ರಕ್ಷಣೆಗೆ ಕಾನೂನು ರೂಪಿಸಿ

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗೋವು ಭಕ್ತರು ರಾಮದುರ್ಗ ನಗರದಲ್ಲಿ ಗ್ರೇಡ್​&2 ತಹಸೀಲ್ದಾರ್​ ಸಂಜಯ ಖಾತೇದಾರಗೆ ಮನವಿ ಸಲ್ಲಿಸಿದರು. ವಿಜೇಂದ್ರ ಜೋಶಿ, ಪ್ರಕಾಶ ಸುಳಿಭಾವಿ, ರಾಜು ಕೋಪರ್ಡೆ ಇತರರಿದ್ದರು.
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗೋವು ಭಕ್ತರು ರಾಮದುರ್ಗ ನಗರದಲ್ಲಿ ಗ್ರೇಡ್​&2 ತಹಸೀಲ್ದಾರ್​ ಸಂಜಯ ಖಾತೇದಾರಗೆ ಮನವಿ ಸಲ್ಲಿಸಿದರು. ವಿಜೇಂದ್ರ ಜೋಶಿ, ಪ್ರಕಾಶ ಸುಳಿಭಾವಿ, ರಾಜು ಕೋಪರ್ಡೆ ಇತರರಿದ್ದರು.
Published on
ರಾಮದುರ್ಗ: ಗೋವು ಮಾತಾ ದಿನ ಹಿನ್ನೆಲೆಯಲ್ಲಿ ಗೋವುಮಾತಾ ಅಭಿಯಾನ ನಡೆಸುವ ಮೂಲಕ ಗೋವುಗಳ ರಣೆಗೆ ಸರ್ಕಾರ ವಿಶೇಷ ಕಾನೂನು ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗೋವು ಭಕ್ತರು ನಗರದಲ್ಲಿ ಗ್ರೇಡ್​&2 ತಹಸೀಲ್ದಾರ್​ ಸಂಜಯ ಖಾತೇದಾರಗೆ ಮಂಗಳವಾರ ಮನವಿ ಸಲ್ಲಿಸಿದರು.
ನಗರದ ಅಂಬೇಡ್ಕರ್​ ವೃತ್ತದಿಂದ ಗೋವುಗಳ ಸಮೇತ ಆಗಮಿಸಿದ ಗೋವು ಸಂತರು ಮಿನಿ ವಿಧಾನಸೌಧದ ವರೆಗೆ ಮೆರವಣಿಗೆಯಲ್ಲಿ ಸಂಚರಿಸಿ ಜಾಗೃತಿ ಅಭಿಯಾನ ನಡೆಸಿದರು.
ಗೋವುಗಳಿಗೆ ರಾಷ್ಟ್ರೀಯ ಪರಂಪರೆ ಅಥವಾ ಗುರುತಿನ ಚೀಟಿ ನೀಡಬೇಕು. ದೇಶಾದ್ಯಂತ ಗೋವು ಹತ್ಯೆ ನಿಷೇಧಿಸಿಬೇಕು. ಶಾಪಿಂಗ್​ ಮಾಲ್​ಗಳಲ್ಲಿ ಗೋವು ಆಧಾರಿತ ಉತ್ಪನ್ನಗಳಿಗೆ ಕಡ್ಡಾಯ ಕೌಂಟರ್​ ರಚನೆ, ಗೋ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಗೋವುಗಳ ಕಳ್ಳ ಸಾಗಣೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ವಿಜೇಂದ್ರ ಜೋಶಿ, ವಿಶ್ವ ಹಿಂದೂ ಪರಿಷತ್​ ತಾಲೂಧ್ಯ ಪ್ರಕಾಶ ಸುಳಿಭಾವಿ, ವಕೀಲ ರಾಜು ಕೋಪರ್ಡೆ, ಗೋರಾ ಪ್ರಮುಖರಾದ ಮನೋಜ ಕಾಂಕಾಣಿ, ಶಂಕರ ಕಲ್ಲೂರ, ಪುರುಷೋತ್ತಮ ಲಾಹೋಟಿ, ಪುಂಡಲೀಕ ಪಾಟೀಲ, ಮುತ್ತು ತಳವಾರ, ಸಂತೋಷ ಬಳಗಲಿ, ಸಾಗರ ಕೊರವರ, ಅಮರ ಧೂತ, ವಿಜಯ ನಾಯ್ಕ, ಸುನೀತಾ ತಿಮ್ಮನಗೌಡರ, ಅಪ್ಪನಗೌಡ ಪಾಟೀಲ, ಸೋಮಶೇಖರ ಸೊಗಲದ, ಬಸವರಾಜ ಬಾವಿಕಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net