ರಾಮನವಮಿ ಅದ್ದೂರಿ ಮೆರವಣಿಗೆ

ಹುಲಸೂರಿನಲ್ಲಿ ಶನಿವಾರ ಸಂಜೆ ರಾಮನವಮಿ ನಿಮಿತ್ತ ಅದ್ದೂರಿ ಮೆರವಣಿಗೆ ನಡೆಯಿತು.
ಹುಲಸೂರಿನಲ್ಲಿ ಶನಿವಾರ ಸಂಜೆ ರಾಮನವಮಿ ನಿಮಿತ್ತ ಅದ್ದೂರಿ ಮೆರವಣಿಗೆ ನಡೆಯಿತು.
Published on
ಹುಲಸೂರು: ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್​ ಹಾಗೂ ಬಜರಂಗ ದಳದ ನೇತೃತ್ವದಲ್ಲಿ ಶನಿವಾರ ಸಂಜೆ ರಾಮನವಮಿ ನಿಮಿತ್ತ ಭವ್ಯ ಮೆರವಣಿಗೆಯಲ್ಲಿ ನಡೆಸಲಾಯಿತು. ಬೆಳಗ್ಗೆ ಶಿವಾಜಿ ವೃತ್ತದಿಂದ ಪ್ರಾರಂಭವಾದ ಬೈಕ್​ ರ್ಯಾಲಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಅಲ್ಲಮಪ್ರಭು ಶೂನ್ಯ ಪೀಠದವರೆಗೆ ನಡೆಯಿತು. ವಾರ್ಡ್​ ನಂ.1 ಹಾಗೂ ಸಂತ ರುನಾಥ ಮಹಾರಾಜ ಸಂಸ್ಥಾನ ಮಠದ ಹತ್ತಿರದ ಜೈ ಹನುಮಾನ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಅಲ್ಲಮಪ್ರಭು ಶೂನ್ಯಪಿಠ ಅನುಭವ ಮಂಟಪದ ಪರಿಸರದಲ್ಲಿ ಶನಿವಾರ ಸಂಜೆ ಜಿ ಪಂ ಮಾಜಿ ಅಧ್ಯ ಅನಿಲ ಭೂಸಾರೆ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಭಕ್ತರು ಡಿಜೆ ಸೌಂಡ್​ಗಳಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಹನುಮಾನ ಸೇವಕ ಪ್ರಭುಲಿಂಗಯ್ಯ ಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯೆ ಲತಾ ಹಾರಕುಡೆ, ಬಜರಂಗ ದಳದ ತಾಲೂಕು ಅಧ್ಯ ಚಂದ್ರಶೇಖರ ಮಂಗಾ, ಪಿಕೆಪಿಎಸ್​ ಸಹಕಾರ ಸಂದ ಅಧ್ಯ ಭಾಗವತ ಜಾನಬಾ, ಪ್ರಮುಖರಾದ ಚಂದ್ರಕಾಂತ ದೇಟ್ನೆ, ರಣಜಿತ ಗಾಯಕವಾಡ, ಅರವಿಂದ ಹರಪ ಸುನೀಲ ಕಾಡಾದಿ, ಜಗನ್ನಾಥ ದೇಟ್ನೆ,ಸಂತೋಷ ಗಾಯಕವಾಡ, ವಿಜಯ ಸ್ವಾಮಿ, ಲೊಹಿತ ಧರಮಾಣೆ, ಅನಮೂಲ ಪಟ್ನೆ, ಅಜಯ ಚಾಕೋತೆ, ಬಸವರಾಜ ರಗಟೆ, ಕಾರ್ತಿಕ ಹೂಗಾರ, ಅವಿನಾಶ ಮೇತ್ರೆ, ವಿಶಾಲ ಸಜ್ಜನ, ಸಂದೀಪ ಬಿರಾದಾರ, ಸಿದ್ರಾಮ ಪಾರಶೆಟ್ಟಿ, ಕಲ್ಯಾಣಿ ದಾನಾ, ಮಾಹದೇವ ಕೌಟೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net